ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್? ಎಟಿಎಂ ಕಾರ್ಡ್‌ನಂತೆ ಸ್ವೈಪ್ ಮಾಡಬೇಕು!

By Sathish Kumar KH  |  First Published Nov 4, 2024, 1:24 PM IST

ಶಕ್ತಿ ಯೋಜನೆಯಡಿ ಟಿಕೆಟ್ ಕಳ್ಳಾಟ ತಪ್ಪಿಸಲು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಲವು ಕಂಡಕ್ಟರ್‌ಗಳು ಮಹಿಳಾ ಪ್ರಯಾಣಿಕರಿಲ್ಲದಿದ್ದರೂ ಟಿಕೆಟ್ ಹರಿದು ಹಣ ದುರುಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.


ಬೆಂಗಳೂರು (ಅ.04): ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಮೊದಲ ಗ್ಯಾರಂಟಿಯಾಗಿ ಜಾರಿಗೆ ಬಂದ ಶಕ್ತಿ ಯೋಜನೆಗೆ ಇದೀಗ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ಈ ಶಕ್ತಿ ಯೋಜನೆ ಜಾರಿಗೆ ಬಂದ ಆರಂಭದಲ್ಲಿಯೇ ಕೆಲವು ಮಹಿಳೆಯರಿಗೆ ಸಾಂಕೇತಿಕವಾಗಿ ಕೊಡಲಾಗಿದ್ದ ಸ್ಮಾರ್ಟ್ ಕಾರ್ಡ್‌ ಅನ್ನು ರಾಜ್ಯದ ಎಲ್ಲ ಮಹಿಳೆಯರಿಗೂ ನೀಡಲು ಇದೀಗ ಪುನಃ ಮುಂದಡಿಯಿಟ್ಟಿದೆ.

ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಇದರಲ್ಲಿ ಭಾರೀ ಸೋರಿಕೆ ಆಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಪ್ರಯಾಣದಿಂದ ಉಂಟಾಗುತ್ತಿರುವ ಹಣ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಕ್ಕೆ ಅನುಕೂಲ ಆಗುವಂತೆ ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ಮಾಡಲಾಗುತ್ತಿದೆ. ಈ ಮೂಲಕ ಶಕ್ತಿ ಯೋಜನೆಯಲ್ಲಿ ಆಗುತ್ತಿರುವ ಸೋರಿಕೆ ತಡೆಯಲು ಯೋಜನೆಯನ್ನು ರೂಪಿಸುತ್ತಿದೆ.

Tap to resize

Latest Videos

undefined

ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಟಿಕೆಟ್ ಹರಿಯುವ ಕಂಡಕ್ಟರ್ಸ್: ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಸೇರಿದಂತೆ 5 ವಿಭಾಗಗಳಲ್ಲಿ ಸರ್ಕಾರಿ ಸ್ವಾಮ್ಯದ ಬಸ್‌ಗಳ ಸಂಚಾರ ಮಾಡುತ್ತಿವೆ. ಆದರೆ, ಕೆಲವು ಮಾರ್ಗಗಳಲ್ಲಿ ಮಾತ್ರ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಅದು ಕೂಡ ದೇವಸ್ಥಾನಗಳು, ಪ್ರವಾಸಿ ತಾಣಗಳು, ನಗರ ಪ್ರದೇಶಗಳಿಗೆ ಹೆಚ್ಚಿನ ಜನರು ಸಂಚಾರ ಮಾಡುತ್ತಾರೆ. ಉಳಿದಂತೆ ಗ್ರಾಮೀಣ ಭಾಗಗಳು ಸೇರಿದಂತೆ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಮಹಿಳೆಯರ ಸಂಚಾರವೇ ಇರುವಿದಿಲ್ಲ. ಆದರೆ, ಎಲ್ಲ ಕಂಡಕ್ಟರ್‌ಗಳಿಗೆ ಇಂತಿಷ್ಟು ಪ್ರಯಾಣಿಕರನ್ನು ಹತ್ತಿಸಿಕೊಂಡು ಹಣ ಸಂಗ್ರಹ ಮಾಡುವ ಗುರಿಯನ್ನು ನೀಡಲಾಗಿರುತ್ತದೆ. ಈ ಗುರಿಯನ್ನು ತಲುಪಲು ಕಂಡಕ್ಟರ್‌ಗಳು ಮಹಿಳಾ ಪ್ರಯಾಣಿಕರ ಹೆಸರಲ್ಲಿ ಟಿಕೆಟ್‌ಗಳನ್ನು ಹರಿದು ಬೀಸಾಡಿ, ಶಕ್ತಿ ಯೋಜನೆಯಡಿ ಸರ್ಕಾರಕ್ಕೆ ಆರ್ಥಿಕ ಹೊರೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!

ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್: ರಾಜ್ಯದ ಕೆಲವೆಡೆ ಬಸ್‌ನಲ್ಲಿ ಪ್ರಯಾಣ ಮಾಡುವ ಪುರುಷರಿಂದ ಹಣವನ್ನು ಪಡೆದು ಅವರಿಗೆ ಮಹಿಳೆಯರಿಗೆ ನೀಡುವ ಶೂನ್ಯ ದರದ ಟಿಕೆಟ್ ಅನ್ನು ನಿಡಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ವೃದ್ಧರು ಹಾಗೂ ಇತರೆ ಅನಕ್ಷರಸ್ಥ ಪುರುಷರು ಹಣ ಕೊಟ್ಟರೂ ಅವರಿಗೆ ಮಹಿಳೆಯರ ಟಿಕೆಟ್ ನೀಡಿ ವಂಚಿಸಲಾಗುತ್ತಿದೆ ಎಂಬ ವರದಿಗಳು ಕಂಡುಬಂದಿವೆ. ಹೀಗಾಗಿ, ಟಿಕೆಟ್ ಕಳ್ಳಾಟದಿಂದ ಉಂಟಾಗುತ್ತಿರುವ ಕಳ್ಳಾಟ ತಪ್ಪಿಸಲು ಸ್ಮಾರ್ಟ್ ಕಾರ್ಟ್ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಟಿಕೆಟ್ ಕಳ್ಳಾಟ ತಪ್ಪಿಸಲು ಸ್ಮಾರ್ಟ್ ಕಾರ್ಡ: ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ವಿಭಾಗಗಳ ಬಸ್‌ಗಳ ಗ್ರಾಮಾಂತರ ವಲಯಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಟಿಕೆಟ್ ಕಳ್ಳಾಟ ಮಾಡುತ್ತಿರುವುದರಿಂದ ಬರೋಬ್ಬರು ಮಾಸಿಕ 100 ಕೋಟಿ ರೂ. ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಟಿಕೆಟ್ ಕಳ್ಳಾಟವನ್ನು ತಪ್ಪಿಸಲು ಈ ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಇನ್ನು ಮೇಲೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ತೋರಿಸಿ ಮಹಿಳೆಯರು ಸಂಚಾರ ಮಾಡಬೇಕಾಗುತ್ತದೆ. 

ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆ ಹಣ ಜನರಿಗೆ ಸಿಗ್ತಿಲ್ಲ: ಬಿ.ಎಸ್‌.ಯಡಿಯೂರಪ್ಪ ನೀಡಿದ್ದ ಬಾಂಡ್‌ಗಳಿವು!

ಒಂದು ಸ್ಮಾರ್ಟ್ ಕಾರ್ಡ್‌ಗೆ 17 ರೂ. ವೆಚ್ಚ: ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯ ಫಲಾನುಭವಿಗಳಾದ ಎಲ್ಲ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆ ಮಾಡಲಾಗಿದೆ. ಪ್ರತಿ ಒಂದು ಸ್ಮಾರ್ಟ್ ಕಾರ್ಡ್ ಮಾಡಿಕೊಡಲು 16 ರಿಂದ 17 ರೂಪಾಯಿ ವೆಚ್ಚವಾಗಲಿದೆ. ಈ ಬಗ್ಗೆ  ಕೆಲವು ಕಂಪನಿಗಳಿಂದ ತಾಂತ್ರಿಕ ವರದಿ ಕೇಳಲಾಗಿದೆ. ಜೊತೆಗೆ, ಸ್ಮಾರ್ಟ್ ಕಾರ್ಡ್ ನೀಡಲು ಯಾವೆಲ್ಲ ದಾಖಲಾತಿಗಳು ಅಗತ್ಯ, ಸ್ಮಾರ್ಟ್ ಕಾರ್ಡ್ ವ್ಯಾಲಿಡಿಟಿ ಹಾಗೂ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ವೈಪ್ ಮಾಡುವುದಕ್ಕೆ ಕಂಡಕ್ಟರ್‌ಗಳಿಗೆ ಹೊಸ ಮಷಿನ್ ವಿತರಣೆ ಬಗ್ಗೆಯೂ ಚರ್ಚೆ ಮಾಡಲಾಗುದೆ. ಶೀರ್ಘದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

click me!