ದೊಡ್ಡ ನಗರದಲ್ಲಿ ಸಣ್ಣ ಸಣ್ಣ ಘಟನೆಗಳು ಸಾಮಾನ್ಯ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಅಪರಾಧಿ ಕೃತ್ಯಗಳು ನಡೆಯುತ್ತವೆ. ಅದು ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. 


ಬೆಂಗಳೂರು/ನವದೆಹಲಿ (ಏ.08): ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಇಂತಹ ಅಪರಾಧಿ ಕೃತ್ಯಗಳು ನಡೆಯುತ್ತವೆ. ಅದು ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಅದು ವಿವಾದಕ್ಕೆ ಕಾರಣವಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿರುವ ಪರಮೇಶ್ವರ್‌ ಅವರಿಂದ ಕಾಂಗ್ರೆಸ್ ವರಿಷ್ಠರು ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಬಿಟಿಎಂ ಲೇಔಟ್‌ನಲ್ಲಿ ಯುವತಿಯರ ಮೇಲೆ ಬೀದಿಕಾಮಣ್ಣನೊಬ್ಬ ನಡುರಾತ್ರಿ ನಡುರಸ್ತೆಯಲ್ಲಿ ಎರಗಿದ್ದ. ಈ ವಿಡಿಯೋ ವೈರಲ್‌ ಆಗಿತ್ತು. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು, ದೊಡ್ಡ ನಗರದಲ್ಲಿ ಅಲ್ಲೊಂದು-ಇಲ್ಲೊಂದು ಅಪರಾಧಿ ಕೃತ್ಯ ನಡೆಯುತ್ತವೆ. ಇಂತಹ ಕೃತ್ಯಗಳು ಇನ್ನಷ್ಟು ಕಡಿಮೆ ಮಾಡಲು ಪೊಲೀಸರಿಗೆ ಹಲವು ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು. ಆದರೆ ಇದು ರಾಷ್ಟ್ರೀಯ ಬಿಜೆಪಿ ಆಕ್ರೋಶಕ್ಕೆ ಗುರಿಯಾಯಿತು. ಈ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ಜಿ. ಪರಮೇಶ್ವರ ಅವರು ಅಪರಾಧ ಕೃತ್ಯಗಳ ಸರಣಿ ಸಮರ್ಥಕರು. 

Latest Videos

ನನ್ನ, ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಗೃಹ ಸಚಿವ ಪರಮೇಶ್ವರ್‌

2017ರಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಿಯಾಂಕಾ ವಾದ್ರಾ ‘ಲಡ್ಕಿ ಹೂಂ ಲಡ್ ಸಕ್ತಿ ಹೂಂ’ (ನಾನು ಹುಡುಗಿ, ನಾನು ಹೋರಾಡಬಲ್ಲೆ) ಅಭಿಯಾನ ನಡೆಸಿದ್ದರು. ಅದು ಕೇವಲ ಘೋಷಣೆಯೇ? ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಮೌನ ಮುರಿದು, ಪರಮೇಶ್ವರ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು. ಮಹಾಭಾರತದಲ್ಲಿ ಪಾಂಡವರು-ಕೌರವರ ನಡುವೆ ಸಮರಕ್ಕೆ ಕಾರಣವಾದ ದ್ರೌಪದಿ ಮೇಲೆ ನಡೆದ ಅವಮಾನವನ್ನೂ ಸಣ್ಣ ಘಟನೆ ಎಂದು ಪರಮೇಶ್ವರ್‌ ಅವರು ಹೇಳಿಬಿಡುತ್ತಿದ್ದರು ಎಂದು ಅವರು ಮೂದಲಿಸಿದ್ದಾರೆ.

click me!