
ಬೆಳ್ತಂಗಡಿ: ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನೂ ಹೂಳಿಸಿದ ಆರೋಪಕ್ಕೆ ಸಂಬಂಧಿಸಿ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಗೆ ಗುರುವಾರ ಯಶಸ್ಸು ಲಭಿಸಿತು. ಗುರುವಾರ ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ, ದೂರುದಾರ ಅನಾಮಿಕ ವ್ಯಕ್ತಿ ತೋರಿಸಿದ ಆರನೇ ಜಾಗದಲ್ಲಿ ಉತ್ಖನನ ನಡೆಸಿದ ವೇಳೆಗೆ ಗುಂಡಿಯಲ್ಲಿ ಅಸ್ಥಿಪಂಜರದ ಭಾಗಗಳು ಪತ್ತೆಯಾಯ್ತು. ಇದೀಗ ಪ್ರಕರಣ ಸಂಬಂಧ ಸ್ಥಳೀಯರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಗ್ರಾಮಸ್ಥರಾದ ಶಂಕರ್ ಕುಲಾಲ್ ಅವರು ಮಾತನಾಡುತ್ತಾ, ಇಲ್ಲಿ ಯಾವುದೇ ರೀತಿಯಲ್ಲಿ ಅತ್ಯಾ8ಚಾರ ಅಥವಾ ಕೊಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಧರ್ಮಸ್ಥಳವು ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿರುವ ವಿಶಿಷ್ಟ ಗ್ರಾಮ. ಇಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ, ಇತರರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಹೆಗಡೆಯವರು (ವೀರೇಂದ್ರ ಹೆಗಡೆ) ನಡೆಸಿದ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಯಾರೂ ಕಣ್ಮರೆ ಮಾಡಲಾಗದು. ಹಳೆಯ ದಿನಗಳಲ್ಲಿ ಇಲ್ಲಿ ಸ್ಮಶಾನ ಇರಲಿಲ್ಲ. ಅಂತಹ ಸಮಯದಲ್ಲಿ ಕೆಲವರು ಶವವನ್ನು ಇಲ್ಲಿ ಹೂಳುತ್ತಿದ್ದರು ಅದರಲ್ಲಿ ಅಚ್ಚರಿಯಿಲ್ಲ. ಅದು ಪೊಲೀಸ್ ಠಾಣೆಯ ಕಾಗದಗಳಲ್ಲಿ ದಾಖಲಾಗುತ್ತಿದ್ದವು. ಕೆಲವು ಶವಗಳು ಈ ಹಿಂದೆ ಇಲ್ಲಿ ಪತ್ತೆಯಾಗಿರುವುದು ಸತ್ಯ. ಆದರೆ ಅವು ಯಾವತ್ತೂ ಅಪರಾಧ ಸಂಬಂಧಿತ ಶಂಕೆಗೊಳಪಟ್ಟಿಲ್ಲ ಎಂದಿದ್ದಾರೆ.
ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಕೂಡ ಗಂಡನ ಸಾವಿನ ಬಳಿಕ ಆತ್ಮ8ಹತ್ಯೆ ಮಾಡಿಕೊಳ್ಳಲು ಇಲ್ಲಿ ಬಂದಿದ್ದರು. ಆದರೆ ಹೆಗಡೆಯವರ ಬಳಿ ಹೋಗಿ ಆಶೀರ್ವಾದ ಪಡೆದು, ಅವರ ಧೈರ್ಯದಿಂದ ಬದುಕು ಮುಂದುವರಿಸಿದ್ದಾರೆ. ಇಂದು ಅವರು ತಮ್ಮ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇದು ಹೆಗಡೆಯವರ ಮಾತುಗಳಿಂದ ಎಷ್ಟು ಜೀವಗಳು ಉಳಿದಿವೆ ಎಂಬುದಕ್ಕೆ ಸಾಕ್ಷಿ ಎಂದರು.
ಇಲ್ಲಿ ಜನ ಆತ್ಮ8ಹತ್ಯೆ ಮಾಡಿಕೊಳ್ಳಲು ಬರುತ್ತಾರೆ ಎಂಬುದು ಸತ್ಯ. ಆದರೆ ಈಗ ಕಟ್ಟೆ ಕಟ್ಟಿದ ನಂತರ ಸುರಕ್ಷತೆ ಒದಗಿಸಲಾಗಿದೆ. ಇಲ್ಲಿ ಯಾರೂ ಕೊಲೆ ಮಾಡಿಲ್ಲ. ನನಗೆ ತಿಳಿದ ಮಟ್ಟಿಗೆ ಧರ್ಮಸ್ಥಳದಲ್ಲಿ ಯಾವ ಕೊಲೆ ಪ್ರಕರಣವೂ ನಡೆದಿಲ್ಲ. ಹೆಗಡೆಯವರು ನಮಗೆ ದೇವರಂತೆ ಎಂದಿದ್ದಾರೆ.
ಎಸ್ಐಟಿ ಚೆನ್ನಾಗಿ ತನಿಖೆ ಮಾಡುತ್ತಿದೆ. ಶವಗಳ ಗುರುತು ಪತ್ತೆಯಾಗಲಿ. ಸರ್ಕಾರ ಎಸ್ಐಟಿ ನೇಮಿಸಿರುವುದು ನಾವು ಸ್ವಾಗತಿಸುತ್ತೇವೆ. ಆದರೆ ಜನರು ನಿಜಕ್ಕಿಂತ ಸುಳ್ಳನ್ನೇ ಹೆಚ್ಚು ನಂಬುತ್ತಾರೆ. ಸತ್ಯಕ್ಕೆ ಯಾರೂ ಬೆಲೆ ಕೊಡಲ್ಲ. ಆದರೂ ಈ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ತೀವ್ರವಾಗಿ ಮುಂದುವರಿದಿರುವಾಗ, ಸ್ಥಳೀಯರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಗ್ರಾಮಸ್ಥರಾದ ಶಂಕರ್ ಕುಲಾಲ್ ಅವರು ಮಾತನಾಡುತ್ತಾ, ಇಲ್ಲಿ ಯಾರೂ ಹೇಳಿದಂತೆಯೇ ಯಾವುದೇ ಅತ್ಯಾ8ಚಾರ ಅಥವಾ ಕೊಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿರುವುದಾಗಿ ಅನಾಮಿಕ ವ್ಯಕ್ತಿ ದೂರು ನೀಡಿರುವ ಪ್ರಕರಣದ ಹಿನ್ನಲೆಯಲ್ಲಿ ಮೂರನೇ ದಿನದ ಉತ್ಖನನ ಕಾರ್ಯಾಚರಣೆ ಗುರುವಾರ ನೇತ್ರಾವತಿ ತಟದಲ್ಲಿ ನಡೆಯಿತು. ಸುತ್ತಮುತ್ತ ಇರುವ ಕಾಡು ಪ್ರದೇಶದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಅನಾಮಿಕನೊಬ್ಬನ ತಪ್ಪೊಪ್ಪಿಗೆಯ ಹಿನ್ನಲೆಯಲ್ಲಿ ಸೋಮವಾರ ಅಲ್ಲಿನ ಪರಿಸರದಲ್ಲಿ 13 ಕಡೆ ಶವಗಳ ಕಳೇಬರ ಇದೆ ಎಂದು ದೂರುದಾರ ಗುರುತಿಸಿದ್ದ. ಇಂದು 7 ನೇ ಪಾಯಿಂಟ್ ನಿಂದ ಕಾರ್ಯಾಚರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ