ಸೋನು ನಿಗಮ್ vs ತೇಜಸ್ವಿ ಸೂರ್ಯ: ಕನ್ನಡ ಭಾಷಾ ವಿವಾದ!

Published : May 22, 2025, 02:46 PM ISTUpdated : May 22, 2025, 03:27 PM IST
ಸೋನು ನಿಗಮ್ vs ತೇಜಸ್ವಿ ಸೂರ್ಯ: ಕನ್ನಡ ಭಾಷಾ ವಿವಾದ!

ಸಾರಾಂಶ

ಎಸ್‌ಬಿಐ ಬ್ಯಾಂಕ್‌ನಲ್ಲಿ ಕನ್ನಡ ಬಳಕೆ ಕುರಿತು ತೇಜಸ್ವಿ ಸೂರ್ಯ ಟ್ವೀಟ್‌ಗೆ ವಕೀಲ ಸೋನು ನಿಗಮ್ ವ್ಯಂಗ್ಯವಾಡಿದ್ದಾರೆ. ಸಾಫ್ಟ್‌ವೇರ್‌, ಅಮೆರಿಕನ್ ಕ್ಲೈಂಟ್‌ಗಳಿಗೂ ಕನ್ನಡ ಕಡ್ಡಾಯಗೊಳಿಸಿ ಎಂದಿದ್ದಾರೆ. ಕನ್ನಡ ಚಿತ್ರಗಳ ಹಿಂದಿ ಡಬ್ಬಿಂಗ್, ಪ್ಯಾನ್-ಇಂಡಿಯಾ ಬಿಡುಗಡೆ ನಿಲ್ಲಿಸುವ ಧೈರ್ಯ ತೇಜಸ್ವಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಗಾಯಕ ಸೋನು ನಿಗಮ್ ಈ ಟ್ವೀಟ್‌ಗಳು ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಭಾಷಾಭಿಮಾನ ಮತ್ತು  ಉದ್ವಿಗ್ನತೆ ನಡುವೆ ಸೋನು ನಿಗಮ್ ಈ ಬಾರಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್‌ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ವಿಡಿಯೋ ವೈರಲ್ ಆದ ನಂತರ, ತೇಜಸ್ವಿ ಸೂರ್ಯ ತಮ್ಮ ಟ್ವೀಟ್‌ನಲ್ಲಿ ಯಾವುದೇ ತೊಂದರೆಯಿಲ್ಲದೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳು ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ನೀಡಲೇಬೇಕು ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಸೋನು ನಿಗಮ್ ತಮ್ಮ X (ಹಳೆಯ ಟ್ವಿಟರ್) ಖಾತೆಯಲ್ಲಿ  ವ್ಯಂಗ್ಯಭರಿತವಾಗಿ ಬರೆದುಕೊಂಡಿದ್ದಾರೆ. ಸಾಫ್ಟ್‌ವೇರ್ ಕಂಪನಿಗಳಲ್ಲಿಯೂ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಅಮೇರಿಕನ್ ಗ್ರಾಹಕರು ತಮ್ಮ ಯೋಜನೆಗಳನ್ನು ಕರ್ನಾಟಕದಲ್ಲಿ ಪೂರ್ಣಗೊಳಿಸಲು ಬಯಸಿದರೆ, ಅವರು ಕನ್ನಡದಲ್ಲಿಯೂ ಮಾತನಾಡಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಇದು ಭಾಷಾಭಿಮಾನ ಸರಿ ಅಲ್ಲವೇ ಎಂದು  ತೇಜಸ್ವಿ ಸೂರ್ಯ ಅವರಿಗೆ ಟ್ಯಾಗ್‌ ಮಾಡಿ ಟೀಕಿಸಿದ್ದಾರೆ.

ಇದರಿಂದ  ಸೋನುಂ ನಿಗಂ ಮತ್ತು  ತೇಜಸ್ವಿ ಸೂರ್ಯ ನಡುವಿನ ಭಾಷೆ ಬಗೆಗಿನ ಹೇಳಿಕೆಗಳು ಜನಮನ ಸೆಳೆಯಿತು. ಮತ್ತೊಂದು ಟ್ವೀಟ್‌ನಲ್ಲಿ ಸೋನುಂ ನಿಗಂ,
"ತೇಜಸ್ವಿ ಸೂರ್ಯ ಅವರು ನಿಜವಾದ ಭಾಷಾ ಯೋಧರಾಗಿದ್ದರೆ, ಕನ್ನಡ ಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡದಂತೆ ತಡೆಯಲಿ. ಕನ್ನಡ ಪ್ಯಾನ್ ಇಂಡಿಯಾ ಮೂವಿ ಬಿಡುಗಡೆ ಮಾಡುವುದನ್ನು ನಿಲ್ಲಿಸಲಿ. ಇದನ್ನು ಹೇಳುವ ಧೈರ್ಯ ಅವರಿಗೆ ಇದೆಯಾ?" ಎಂದು  ಪ್ರಶ್ನಿಸಿದ್ದಾರೆ.

 

ಅಸಲಿಗೆ ಇದು ಗಾಯಕ ಸೋನು ನಿಗಂ ಅವರ ಟ್ವೀಟ್‌ ಅಲ್ಲ. ಬಹುತೇಕ ಎಲ್ಲರೂ ಇದು ಗಾಯಕ ಸೋನು ನಿಗಂ ಅವರ ಟ್ವೀಟ್‌ ಎಂದು  ಸುದ್ದಿ ಬರೆದಿದ್ದು ವೈರಲ್ ಆಗಿತ್ತು.  ಹಿರಿಯ ಹಿನ್ನೆಲೆ ಗಾಯಕ ಸೋನು ನಿಗಮ್ ಮತ್ತೊಮ್ಮೆ ಕನ್ನಡ ಭಾಷೆಯ ಬಗ್ಗೆ ಕೋಪಗೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅವರ ಕೆಲವು ಟ್ವೀಟ್‌ಗಳನ್ನು ಉಲ್ಲೇಖಿಸಿ ಈ  ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವಿಷಯದ ವಾಸ್ತವತೆ ಬೇರೆಯೇ ಆಗಿದೆ. ಗಾಯಕ ಸೋನು ನಿಗಮ್ ಅವರದ್ದೇ ಎಂದು ಹೇಳಲಾಗುತ್ತಿರುವ ಟ್ವೀಟ್‌ಗಳು ವಾಸ್ತವವಾಗಿ ಅವರದ್ದಲ್ಲ. ಬದಲಾಗಿ, ಈ ಟ್ವೀಟ್‌ಗಳನ್ನು ಕ್ರಿಮಿನಲ್ ವಕೀಲ ಸೋನು ನಿಗಮ್ ಸಿಂಗ್ ಎಂಬುವವರು ಮಾಡಿದ್ದಾರೆ. ಇದನ್ನು ಸ್ವತಃ ವಕೀಲ  ಸೋನು ನಿಗಮ್ ಸಿಂಗ್ ದೃಢಪಡಿಸಿದ್ದಾರೆ. ಹಲವಾರು ದೊಡ್ಡ ಮಾಧ್ಯಮ ಸಂಸ್ಥೆಗಳು ಅವರನ್ನು ಗುರಿಯಾಗಿಸಿಕೊಂಡು ಬರೆದಿದ್ದಾರೆ, "ಇದು ತುಂಬಾ ದೊಡ್ಡ ತಪ್ಪು. ಮಾತುಗಳು ನನ್ನದು, ಅಭಿಪ್ರಾಯ ನನ್ನದು ಮತ್ತು ಇದರ ಶ್ರೇಯಸ್ಸು ಬೇರೆಯವರಿಗೆ ಸಲ್ಲುತ್ತದೆ. ಇದು ದೊಡ್ಡ ಅನ್ಯಾಯ ಎಂದು ಮಾಧ್ಯಮದಲ್ಲಿರುವ ನನ್ನ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ." ಎಂದು  ವಕೀಲ ಹೇಳಿದ್ದಾರೆ.

ಇತ್ತೀಚೆಗೆ ಗಾಯಕ ಸೋನು ನಿಗಮ್  ಅವರು ಕರ್ನಾಟಕದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಹೀಗಾಗಿ ಸ್ಯಾಂಡಲ್‌ವುಡ್‌ ನಿಂದ ಅವರನ್ನು ಬ್ಯಾನ್ ಮಾಡಲಾಗಿದೆ.  ಏಪ್ರಿಲ್ 22ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಗಮ್ ನೀಡಿದ ಹೇಳಿಕೆಗಳು ಕನ್ನಡಿಗರ ಭಾವನೆಗೆ ಧಕ್ಕೆಯಾಗಿದ್ದು, ಹಲವಾರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೇ 5 ರಂದು ನಿಗಮ್ ಕ್ಷಮೆಯಾಚಿಸಿದ್ದು – "ಕ್ಷಮಿಸಿ ಕರ್ನಾಟಕ... ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು" ಎಂದು ಹೇಳಿದ್ದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!