ಹಾಸನದ ಅಭಿಷೇಕ್, ಸಂಧ್ಯಾ ಇನ್ನಿಲ್ಲ; ಇಬ್ಬರೂ 19 ವರ್ಷದಲ್ಲಿಯೇ ಹೃದಯಾಘಾತಕ್ಕೆ ಬಲಿ!

Published : May 22, 2025, 12:57 PM IST
ಹಾಸನದ ಅಭಿಷೇಕ್, ಸಂಧ್ಯಾ ಇನ್ನಿಲ್ಲ; ಇಬ್ಬರೂ 19 ವರ್ಷದಲ್ಲಿಯೇ ಹೃದಯಾಘಾತಕ್ಕೆ ಬಲಿ!

ಸಾರಾಂಶ

ಹಾಸನ ಮತ್ತು ಬೆಂಗಳೂರಿನಲ್ಲಿ ಇಬ್ಬರು ೧೯ ವರ್ಷದ ಯುವಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನದ ಯುವತಿ ಸ್ನಾನಗೃಹದಲ್ಲಿ ಕುಸಿದು ಬಿದ್ದರೆ, ಬೆಂಗಳೂರಿನ ಯುವಕ ಕೆಲಸದ ವೇಳೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಆರೋಗ್ಯಕರ ಜೀವನಶೈಲಿ ಅಗತ್ಯವೆಂದು ತಜ್ಞರು ಎಚ್ಚರಿಸಿದ್ದಾರೆ. ನಿಯಮಿತ ತಪಾಸಣೆ, ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆ ಮುಖ್ಯ.

ಹಾಸನ/ಬೆಂಗಳೂರು (ಮೇ 22): ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಂಭೀರ ವಿಷಯವಾಗಿದೆ. ಇದೀಗ ಹಾಸನ ಮೂಲದ 19 ವರ್ಷದ ಇಬ್ಬರು ಯುವಜನರು ಒಂದೇ ದಿನ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಬಾತ್‌ರೂಮಲ್ಲಿ ಕುಸಿದು ಬಿದ್ದು ಸಾವು:
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿ ಸಂಧ್ಯಾ ಎಂಬ 19 ವರ್ಷದ ಯುವತಿ, ಬಾತ್‌ರೂಂಗೆ ಹೋಗಿದ್ದ ವೇಳೆ ಅಚಾನಕ್ ಆಗಿ ಕುಸಿದು ಬಿದ್ದು ಮರಣ ಹೊಂದಿದ್ದಾಳೆ. ವೆಂಕಟೇಶ್ – ಪೂರ್ಣಿಮ ದಂಪತಿಯ ಪುತ್ರಿಯಾದ ಸಂಧ್ಯಾ, ಡಿಪ್ಲೊಮಾದ ಅಂತಿಮ ವರ್ಷವನ್ನು ಪೂರ್ಣಗೊಳಿಸಿದ್ದಳು. ಸ್ನಾನದ ಕೋಣೆಯಲ್ಲಿ ಬಿದ್ದ ತಕ್ಷಣ ಬಾತ್‌ರೂಂ ಬಾಗಿಲು ಒಡೆದು ಆಸ್ಪತ್ರೆಗೆ ಕರೆದೊಯ್ಯಲಾದರೂ, ಆಗಲೇ ಹೃದಯಾಘಾತದಿಂದ ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಬಿಪಿ ಮತ್ತು ಶುಗರ್ ಸಮಸ್ಯೆಗಳಿಂದ ಬಳಲುತ್ತಿದ್ದಳು ಎಂಬ ಮಾಹಿತಿ ಪೋಷಕರಿಂದ ಲಭಿಸಿದೆ.

ಬೆಂಗಳೂರಿನಲ್ಲಿ ರಸ್ತೆಯಲ್ಲಿ ಕುಸಿದು ಸಾವು:
ಇನ್ನೊಂದು ಘಟನೆಯು ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. ಅಲ್ಲಿ 19 ವರ್ಷದ ಅಭಿಷೇಕ್.ಕೆ.ಆರ್., ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕ, ಕೆಲಸದ ವೇಳೆಯಲ್ಲೇ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿದ್ದಾನೆ. ಈ ಯುವಕನೂ ಕೂಡ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಾಡನೂರು ಗ್ರಾಮದವಾಗಿದ್ದಾನೆ. ಈ ಘಟನೆಯಲ್ಲಿ ಅಭಿಷೇಕ್, ಜಾಗದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಅವನು ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ.

ಆರೋಗ್ಯ ತಜ್ಞರಿಂದ ಎಚ್ಚರಿಕೆ:
ಕಳೆದ ಕೆಲವು ದಿನಗಳಿಂದ ಇಂತಹ ಯುವ ಹೃದಯಾಘಾತ ಪ್ರಕರಣಗಳು ಕೆಲವೊಂದು ಕಡೆಗಳಲ್ಲಿ ವರದಿಯಾಗಿವೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಸಾವು ಮಾಸುವ ಮುನ್ನವೇ ಇದೀಗ ಇಬ್ಬರು 19 ವರ್ಷದ ಯುವಜನರು ಹೃದಯಾಘಾತಕ್ಕೆ ಬಲಿ ಆಗಿದ್ದಾರೆ. ಆಹಾರ ಅಭ್ಯಾಸ, ನಿದ್ರಾ ವ್ಯವಸ್ಥೆ, ಒತ್ತಡ, ಮತ್ತು ಸಮಯಪಾಲನೆಯ ಕೊರತೆ ಇವುಗಳೇ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿರುವ ಸಾಧ್ಯತೆ ಇರಬಹುದು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಹೃದಯಾಘಾತ ಎನ್ನುವುದು ಕೇವಲ ಹಿರಿಯ ನಾಗರಿಕರ ಸಮಸ್ಯೆ ಎಂಬ ಕಲ್ಪನೆ ಈಗ ತಪ್ಪಾಗಿದೆ. ಬಿಪಿ, ಶುಗರ್ ಹೊಂದಿರುವವರು ವ್ಯಾಯಾಮ, ಪ್ರಾಣಾಯಾಮ ಮಾಡದಿದ್ದರೆ ಮತ್ತು ಡಿಜಿಟಲ್ ಪರಿಕರಗಳಿಗೆ ಅತಿಯಾದ ಅವಲಂಬನೆ ಹೊಂದಿದ ಯುವಜನರಲ್ಲಿಯೂ ಇಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಿ: 
ಸಂಧ್ಯಾ ಮತ್ತು ಅಭಿಷೇಕ್ ಅವರ ಹೃದಯಾಘಾತದಿಂದ ಬದುಕು ಮುಗಿಸಿರುವುದು ದೊಡ್ಡ ದುರಂತವಾಗಿದೆ. ಇವು ಯುವಜನರ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕಾದ ಅವಶ್ಯಕತೆಯ ಸೂಚನೆ ನೀಡುತ್ತಿವೆ. ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೂ ಅವುಗಳನ್ನು ನಿರ್ಲಕ್ಷ್ಯ ಮಾಡಬಾರದು. ಎಲ್ಲ ವಯಸ್ಸಿನವರೂ ನಿಯಮಿತ ಆರೋಗ್ಯ ತಪಾಸಣೆ, ಸರಿಯಾದ ಆಹಾರ, ವ್ಯಾಯಾಮ, ಮತ್ತು ಒತ್ತಡ ನಿರ್ವಹಣೆ ಮುಕ್ತ ಜೀವನ ಶೈಲಿಯನ್ನು ಪಾಲಿಸುವ ಮೂಲಕ ಮಾತ್ರ ಇಂತಹ ದುರ್ಘಟನೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!