Siddaramaiah: ಮುದ್ರಣ ಕಾಗದದ ಜಿಎಸ್‌ಟಿ ಇಳಿಸಿ: ಪ್ರಧಾನಿ ಮೋದಿಗೆ ಸಿದ್ದು ಪತ್ರ

Published : Apr 28, 2022, 03:00 AM IST
Siddaramaiah: ಮುದ್ರಣ ಕಾಗದದ ಜಿಎಸ್‌ಟಿ ಇಳಿಸಿ: ಪ್ರಧಾನಿ ಮೋದಿಗೆ ಸಿದ್ದು ಪತ್ರ

ಸಾರಾಂಶ

ಪ್ರಜಾಪ್ರಭುತ್ವದ ಕಾವಲಿಗೆ ನಿಂತಿರುವ ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ಚರಿತ್ರೆ ಇದೆ. ಆದರೆ ಕೇಂದ್ರ ಸರ್ಕಾರ ಮುದ್ರಣ ಕಾಗದದ ಮೇಲಿ ವಿಧಿಸುತ್ತಿದ್ದ ಜಿಎಸ್‌ಟಿ ಹೆಚ್ಚಿಸಿರುವುದರಿಂದ ಪತ್ರಿಕೆಗಳು ಸಂಕಷ್ಟದ ಸ್ಥಿತಿಯಲ್ಲಿವೆ.

ಬೆಂಗಳೂರು (ಏ.28): ಪ್ರಜಾಪ್ರಭುತ್ವದ ಕಾವಲಿಗೆ ನಿಂತಿರುವ ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ಚರಿತ್ರೆ ಇದೆ. ಆದರೆ ಕೇಂದ್ರ ಸರ್ಕಾರ (Central Govt) ಮುದ್ರಣ ಕಾಗದದ ಮೇಲಿ ವಿಧಿಸುತ್ತಿದ್ದ ಜಿಎಸ್‌ಟಿ (GST) ಹೆಚ್ಚಿಸಿರುವುದರಿಂದ ಪತ್ರಿಕೆಗಳು (News Papers) ಸಂಕಷ್ಟದ ಸ್ಥಿತಿಯಲ್ಲಿವೆ. ಆದ್ದರಿಂದ ಜಿಎಸ್‌ಟಿ ಪ್ರಮಾಣ ಇಳಿಸಬೇಕು ಎಂದು ಒತ್ತಾಯಿಸಿ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ (Letter) ಬರೆದಿದ್ದಾರೆ. 

ಕೇಂದ್ರದ ಬಿಜೆಪಿ ಸರ್ಕಾರದ ಕೆಲವೊಂದು ಕ್ರಮಗಳು ಮುದ್ರಣ ಮಾಧ್ಯಮ ನಿರಾತಂಕವಾಗಿ ಮುಂದುವರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಸಿವೆ. ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬರುವ ಮೊದಲು ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ.3 ರಷ್ಟುಮಾತ್ರ ತೆರಿಗೆ ಇತ್ತು. ಆದರೆ ಜಿಎಸ್‌ಟಿ ಬಳಿಕ ಶೇ.5 ರಷ್ಟುತೆರಿಗೆ ಹೇರಲಾಗಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Karnataka Politics: 'ಸಿದ್ದು ಸಿಎಂ ಆಗಿದ್ದಾಗ ಒಂದೂ ಹಗರಣ ನಡೆದಿಲ್ಲವೇ, ಚರ್ಚೆಗೆ ಬನ್ನಿ'

ನಾನಾ ಕಾರಣದಿಂದ ದೇಶದ ವಾಣಿಜ್ಯ ವಹಿವಾಟು ಕುಂಠಿತಗೊಂಡಿದೆ. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತು ಪ್ರಮಾಣವೂ ವ್ಯಾಪಕವಾಗಿ ಕುಸಿದಿದೆ. ಕೋವಿಡ್‌ ಸಾಂಕ್ರಾಮಿಕ, ಲಾಕ್‌ಡೌನ್‌ ಪರಿಣಾಮದಿಂದ ಪತ್ರಿಕೆಗಳನ್ನು ನಡೆಸುವುದೇ ದುಸ್ತರವಾಗಿದೆ. ಹೀಗಾಗಿ ದೇಶೀಯ ಮುದ್ರಣ ಕಾಗದದ ಗುಣಮಟ್ಟಹೆಚ್ಚಿಸಲು ಇನ್ಸೆಂಟೀವ್‌ ನೀಡಬೇಕು. ಜಿಎಸ್‌ಟಿ ಪ್ರಮಾಣ ಇಳಿಸಬೇಕು. ಪತ್ರಿಕಾ ಸಂಸ್ಥೆಗಳಿಗೆ ಸುಗಮವಾಗಿ ಮತ್ತು ಸರಳವಾಗಿ ಮುದ್ರಣ ಕಾಗದ ಲಭ್ಯವಾಗುವಂತೆ ನೀತಿ ರೂಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಂವಿಧಾನ ಬದಲಾಯಿಸುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು: ಸಂವಿಧಾನ ಇರುವುದರಿಂದಲೇ ನಾನು ಸಿಎಂ ಆಗಿದ್ದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿದ್ದು. ಒಂದು ವೇಳೆ ಸಂವಿಧಾನ ಬದಲಾಗಿ ಮನುಸ್ಮೃತಿ ಬಂದಿದ್ದೆ ಆದರೆ ನಾನು ಮತ್ತೆ ಕುರಿ ಕಾಯೋಕೆ ಹೋಗ್ಬೇಕಾಗುತ್ತೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕುಷ್ಟಗಿಯಲ್ಲಿ ‘ಸಂವಿಧಾನ ಸಂರಕ್ಷಣಾ ವೇದಿಕೆ’ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶ ಮತ್ತು ಬಾಬಾಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಂತಕುಮಾರ ಹೆಗಡೆ ಅವರು ಮಂತ್ರಿಯಾಗಿದ್ದಾಗ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಬಂದಿರುವುದು ಎಂದು ಹೇಳಿದ್ದರು. ಕೇಂದ್ರದ ಮಂತ್ರಿಯಾಗಿದ್ದವರೊಬ್ಬರು ಹೀಗೆ ಹೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಲಿಲ್ಲ. ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಲಿಲ್ಲ. ಅಂದರೆ ಏನರ್ಥ? ಸಂವಿಧಾನ ಬದಲಾಯಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ಇದೆಯಂದಾಯಿತಲ್ಲವಾ? ಎಂದು ಪ್ರಶ್ನಿಸಿದರು. ಸತ್ಯ ಹೇಳುವುದಕ್ಕೆ ಹಿಂದೆ- ಮುಂದೆ ನೋಡಬಾರದು. ವೇದಿಕೆಯಲ್ಲಿ ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಹೇಳದೆ ಇರೋಕೆ ಆಗಲ್ಲ. 

ಅವತ್ತು ಅನಂತಕುಮಾರ ಹೆಗಡೆ ಅವರು ಹೇಳಿದ್ದು ಸುಳ್ಳಾ? ಸಚಿವರೊಬ್ಬರು ಹೀಗೆ ಹೇಳಿದ ಮೇಲೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳಬೇಕಾಗಿತ್ತಲ್ಲ ಎಂದು ಕಾರವಾಗಿ ಪ್ರಶ್ನಿಸಿದರು. ಭಾರತ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತಕ್ಕೆ ಸೂಕ್ತವಾಗಿರುವ ರೀತಿಯಲ್ಲಿ ಬರೆದಿದ್ದಾರೆ. ಅವರಿಂದ ಮಾತ್ರ ಇಂಥ ಸಂವಿಧಾನವನ್ನು ನೀಡಲು ಸಾಧ್ಯವಾಗಿದೆ. ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದ್ದು, ದೇಶದ 130 ಕೋಟಿ ಜನರು ವಿರೋಧಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು. 

ಸಂವಿಧಾನ ಬದಲಾದರೆ ನಾನು ಕುರಿ ಕಾಯ್ಬೇಕಾಗುತ್ತೆ: ಇದರಿಂದ್ಲೇ ನಾನು ಸಿಎಂ, ಮೋದಿ ಪಿಎಂ ಆಗಿದ್ದು!

ಇತಿಹಾಸ ರಚನೆಯಲ್ಲಿ ಸಾಕಷ್ಟುತಪ್ಪುಗಳಾಗಿವೆ, ತಿರುಚಲಾಗಿದೆ. ಸಿಪಾಯಿ ದಂಗೆಯನ್ನೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನಲಾಗಿದೆ. ಆದರೆ, ಅದು ತಪ್ಪು. ಇದಕ್ಕಿಂತ ಮುಂಚೆಯೇ 16, 17ನೇ ಶತಮಾನದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್‌ ಅಧಿಕಾರಿಯನ್ನು ಕೊಂದು ಹಾಕಿದ್ದು ಸ್ವಾತಂತ್ರ್ಯ ಹೋರಾಟವಲ್ಲವೇ? ಟಿಪ್ಪು ಸುಲ್ತಾನ್‌ ಮತ್ತು ಅವರ ತಂದೆ ಹೈದರಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲವೇ? ಇದು ಸಹ ಸ್ವಾತಂತ್ರ್ಯ ಹೋರಾಟವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್