ಮಾಜಿ ಸಿಎಂ ಸ್ಟಿಂಗ್‌ ಕೇಸಿಗೆ ಟ್ವಿಸ್ಟ್: ಸಿದ್ದು ವಿಡಿಯೋ ಅಪ್ಲೋಡ್‌ ಆಗಿದ್ದ ಮೊಬೈಲ್‌ಗೆ ಕುಮಾರಸ್ವಾಮಿ ಮನೆ ಲಿಂಕ್‌!

Sathish Kumar KH   | Kannada Prabha
Published : Nov 02, 2026, 05:04 AM IST
Kumaraswamy Lashes Out

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ವಿಡಿಯೋ ವೈರಲ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗಿದೆ. ವಿಡಿಯೋ ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್ ಅನ್ನು ದೆಹಲಿಯಲ್ಲಿ ಖರೀದಿಸಿ ಸಚಿವರ ನಿವಾಸದಲ್ಲಿ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತ ಸ್ಟಿಂಗ್‌ ಆಪರೇಷನ್‌ ವಿಡಿಯೋ ವೈರಲ್‌ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರು ಅಧಿಕೃತವಾಗಿ ಪ್ರಸ್ತಾಪವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸ್ಟಿಂಗ್‌ ಆಪರೇಷನ್ ವಿಡಿಯೋ ಅಪ್‌ಲೋಡ್ ಮಾಡಿರುವ ಮೊಬೈಲ್ ಸಚಿವ ಕುಮಾರಸ್ವಾಮಿ ಅವರ ನಿವಾಸದಲ್ಲಿ ಹಸ್ತಾಂತರವಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದಲ್ಲಿ ಬಂಧಿತ ಆರೋಪಿ ರಿತೇಶ್‌ ಪಾಂಡೆ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ತಂಡದ ಸದಸ್ಯ ಪ್ರಜ್ವಲ್‌ ಪ್ರಸಾದ್‌ ಸೂಚನೆ ಮೇರೆಗೆ ರಿತೇಶ್‌ ಪಾಂಡೆ ಮತ್ತು ಆತನ ಸಹಚರ ವಿನೋದ್‌ ಶರ್ಮಾ ದೆಹಲಿಯ ಕರೋಲ್‌ ಬಾಗ್‌ನ ಅಂಗಡಿಯಲ್ಲಿ ಮೊಬೈಲ್‌ ಖರೀದಿಸಿದ್ದಾರೆ. ಮೊಬೈಲ್‌ ಖರೀದಿಸುವ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಸಿಕ್ಕಿವೆ ಎಂದು ಹೇಳಿದರು.

ಬಳಿಕ ಈ ಮೊಬೈಲ್‌ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಪ್ರಜ್ವಲ್‌ ಪ್ರಸಾದ್‌ಗೆ ಹಸ್ತಾಂತರವಾಗಿದೆ. ಆರೋಪಿ ರಿತೇಶ್‌ ಪಾಂಡೆ ಮತ್ತು ಪ್ರಜ್ವಲ್‌ ಪ್ರಸಾದ್‌ ಕೇಂದ್ರ ಸಚಿವರ ದೆಹಲಿಯ ಅಧಿಕೃತ ನಿವಾಸದಲ್ಲಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದರು.

ಪ್ರಜ್ವಲ್‌, ವಿನೋದ್‌ ಸೆರೆ ಬಳಿಕ ಹೆಚ್ಚಿನ ಮಾಹಿತಿ:

ಪ್ರಜ್ವಲ್‌ ಪ್ರಸಾದ್‌ ಮತ್ತು ರಿತೇಶ್‌ ಪಾಂಡೆ ನಡುವೆ ಹಣಕಾಸಿನ ವರ್ಗಾವಣೆ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಪರಿಶೀಲಿಸಲಾಗುತ್ತಿದೆ. ಈ ಪ್ರಜ್ವಲ್‌ ಪ್ರಸಾದ್‌ ಮತ್ತು ವಿನೋದ್‌ ಶರ್ಮಾ ಇಬ್ಬರಿಗೂ ನೋಟಿಸ್‌ ಜಾರಿ ಮಾಡಲಾಗಿದೆ. ಸದ್ಯಕ್ಕೆ ಇಬ್ಬರೂ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಆರ್ಜಿ ಹಾಕಿಕೊಂಡಿದ್ದಾರೆ. ಈ ಇಬ್ಬರ ಬಂಧನದ ಬಳಿಕ ಅವರ ಪಾತ್ರದ ಬಗ್ಗೆ ಗೊತ್ತಾಗಲಿದೆ ಎಂದು ಹೇಳಿದರು.

ರಿತೇಶ್‌ ಪಾಂಡೆ ಮತ್ತು ವಿನೋದ್‌ ಶರ್ಮಾ ಖರೀದಿಸಿರುವ ಮೊಬೈಲ್‌ನಲ್ಲಿ ಸ್ಟಿಂಗ್ ವಿಡಿಯೋ ಅಪ್ಲೋಡ್‌ ಆಗಿದೆ. ಅಪ್ಲೋಡ್‌ ಮಾಡಲು ಹೇಳಿದವರು ಯಾರು ಎಂಬುದು ತನಿಖೆ ಮಾಡಲಾಗುತ್ತಿದೆ. ಮುಂದೆ ಮಹಜರು ಪ್ರಕ್ರಿಯೆ ನಡೆಸಲಾಗುವುದು. ಈಗ ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆರೋಪಿ ರಿತೇಶ್‌ ಪಾಂಡೆ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಲು ಸಾಧ್ಯ ಎಂದು ಸಿಂಗ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಒಟ್ಟಾರೆ ಸೀಮಂತ್‌ ಹೇಳಿದ್ದೇನು?

  • ಸಚಿವರ ಜಾಲತಾಣ ತಂಡದ ಸದಸ್ಯ ಪ್ರಜ್ವಲ್‌ ಸೂಚನೆ ಅನ್ವಯ ಪಾಂಡೆಯಿಂದ ಮೊಬೈಲ್‌ ಖರೀದಿ
  • ಬಳಿಕ ಸಚಿವ ಎಚ್‌ಡಿಕೆ ದೆಹಲಿ ಮನೆಯಲ್ಲಿ ಪ್ರಜ್ವಲ್‌ಗೆ ಮೊಬೈಲ್‌ ಹಸ್ತಾಂತರಿಸಿದ್ದ ರಿತೇಶ್‌ ಪಾಂಡೆ
  • ರಿತೇಶ್‌ ದೆಹಲಿ ಕರೋಲ್‌ ಭಾಗ್‌ ಮಾರುಕಟ್ಟೆಯಲ್ಲಿ ಮೊಬೈಲ್‌ ಖರೀದಿಸಿದ್ದ ಬಗ್ಗೆ ಸಿಸಿಟೀವಿ ಸಾಕ್ಷ್ಯ ಲಭ್ಯ
  • ಈತ ಖರೀದಿಸಿದ ಮೊಬೈಲ್‌ನಿಂದಲೇ ಮಾಜಿ ಸಿಎಂ ಸಿದ್ದು ಸ್ಟಿಂಗ್‌ ವಿಡಿಯೋ ಅಪ್‌ಲೋಡ್‌ ಆಗಿದೆ
  • ಅಪ್ಲೋಡ್ ಮಾಡಲು ಹೇಳಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ: ಪೊಲೀಸ್‌ ಆಯುಕ್ತ ಸೀಮಂತ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಘೋಷಿಸಿದ ರೈಲ್ವೆ ಸಚಿವ, ಬೆಂಗಳೂರು-ಹುಬ್ಬಳ್ಳಿ-ಮುಂಬೈ ನಡುವೆ ಓಡಾಟ
Karnataka News Live Updates: ದರ್ಶನ್ ಕುಟುಂಬದಿಂದ ನಟ ಧನ್ವೀರ್‌ಗೆ ಮತ್ತೊಂದು ಶಾಕ್, ಮಾನನಷ್ಟ ಮೊಕದ್ದಮೆ ಹೂಡಿದ ವಿಜಯಲಕ್ಷ್ಮಿ