ತನ್ನ ಹೆಸರು ಸಿದ್ದರಾಮಯ್ಯ ಹೇಗೆ ಆಯಿತು ಎಂದು ಮೈಸೂರಿನಲ್ಲಿ ಭಾಷಣದ ವೇಳೆ ಹೇಳಿದ್ದಾರೆ. ಅಲ್ಲದೆ, ತಾವು ಎಲ್‌ಎಲ್‌ಬಿ ಓದುವಾಗ ಆಗಿದ್ದ ಘಟನೆಗಳನ್ನು ಸಹ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಭಾಷಣ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಓದುವಾಗ ನಮ್ಮ ಕುರುಬರು ನಾವು ಕುರುಬರು ಅಂತ ಹೇಳಿಕೊಳ್ಳಲು ನಾಚಿಕೊಳ್ಳಿತ್ತಿದ್ದರು. ತಮ್ಮ ಹೆಸರಿನ ಜೊತೆಗೆ ಗೌಡ ಅಂತ ಹೆಸರು ಸೇರಿಸಿಕೊಳ್ಳುತ್ತಿದ್ದರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೆ, ತನ್ನ ಹೆಸರು ಸಿದ್ದರಾಮಯ್ಯ ಆಗಿದ್ದು ಹೇಗೆ ಎಂದೂ ಹೇಳಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ, ನನ್ನ ಹೆಸರು ಸಿದ್ದರಾಮೇಗೌಡ ಅಂತ, ಹಾಗೂ ನಮ್ಮ ತಮ್ಮನ ಹೆಸರು ರಾಮೇಗೌಡ, ಸಿದ್ದೇಗೌಡ. ಆದರೆ, ನನ್ನ ಹೆಸರು ಮಾತ್ರ ಸಿದ್ದರಾಮಯ್ಯ. ಈ ಹೆಸರು ಬಂದಿದ್ದು ನಮ್ಮ ಮೇಷ್ಟ್ರಿಂದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
5ನೇ ತರಗತಿಗೆ ಸೇರಿಸಿಕೊಳ್ಳುವಾಗ ಸಿದ್ದರಾಮಯ್ಯ ಅಂತ ಬರೆದುಕೊಂಡ್ರು. ನಮ್ಮಪ್ಪ ಹೇಳ್ತಿದ್ದ ಅಲ್ಲೇ ನಿಂತ್ಕೊಂಡು ಸಿದ್ದರಾಮೇಗೌಡ ಅಂತ. ಆದರೆ, ಮೇಷ್ಟ್ರು ಬೇಡ ಅಂತ ಹೇಳಿ ಸಿದ್ದರಾಮಯ್ಯ ಅಂತ ಹೆಸರು ಬಂತು. ಈ ಗೌಡ ಅನ್ನೋದು ಮುಖ್ಯ ಅಲ್ಲ. ಏನು ಮಾಡ್ತಿವಿ ಅನ್ನೋದು ಮುಖ್ಯ ಎಂದು ಮೈಸೂರಿನಲ್ಲಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
undefined
ಇದನ್ನು ಓದಿ: Bagalkote: ವೇದಿಕೆಯಲ್ಲೇ ಎಡವಿದ ಸಿದ್ದರಾಮಯ್ಯ: ಬೀಳುತ್ತಿದ್ದ ಮಾಜಿ ಸಿಎಂರನ್ನ ಹಿಡಿದ ಬೆಂಬಲಿಗರು
ನಾವೆಲ್ಲ 35% ಗಿರಾಕಿಗಳು: ಸಿದ್ದು ಹಾಸ್ಯ ಚಟಾಕಿ
ಇನ್ನು, ವಿದ್ಯಾರ್ಥಿ ನಿಲಯವೊಂದರ ಬಗ್ಗೆ ಮಾತನಾಡಿದ ಮಾಜಿ ಸಿಎಂ, 2017ರಲ್ಲಿ ಈ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು. ಎಲ್ಲಾ ಜಾತಿಯ ಮಕ್ಕಳು ಇಲ್ಲಿ ಇದ್ದಾರೆ. ಪ್ರತಿ ವರ್ಷ 200 ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಎಲ್ಲಾ ಜಾತಿಯ ಮಕ್ಕಳು ಇಲ್ಲಿ ಇದ್ದಾರೆ. ಇದೇ ವಿದ್ಯಾರ್ಥಿ ನಿಲಯದಲ್ಲಿ ಓದಿದ ಹೆಣ್ಣು ಮಗು 7ನೇ ರ್ಯಾಂಕ್ ಪಡೆದಿದ್ದಾರೆ, ಆದರೆ ನಾವೆಲ್ಲ 35% ಗಿರಾಕಿಗಳು ಎಂದು ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್ನು, ಬೆಂಗಳೂರು ಬಿಟ್ಟುರೆ ಮೈಸೂರು ಶಿಕ್ಷಣ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು. ಬ್ರಾಹ್ಮಣರ ಹೆಣ್ಣುಮಕ್ಕಳ ಜತೆ ಶೂದ್ರರ ಹೆಣ್ಣು ಮಕ್ಕಳು ಒಟ್ಟಿಗೆ ಓದುವ ಹಾಗೇ ಇರಲಿಲ್ಲ. ಆದರೆ, ಈಗ ಅವಕಾಶ ಸಿಕ್ಕಿದೆ. ಪುರುಷರಿಂತ ಮಹಿಳೆಯರು ಹೆಚ್ಚು ಅಂಕ ಪಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ ಇದ್ದಂಗೆ, ಪಾಪ ಮೆಚುರಿಟಿ ಇಲ್ಲ: ಸಿದ್ದು ವ್ಯಂಗ್ಯ
ಹಾಗೆ, ವಾಲ್ಮೀಕಿ, ಕನಕದಾಸ ಎಲ್ಲರೂ ಕೆಳ ವರ್ಗದವರೇ. ಎಷ್ಟೋ ಶಿಕ್ಷಿತರಿಗೆ ಇನ್ನೂ ಗುಲಾಮಗಿರಿ ಬುದ್ದಿ ಹೋಗಿಲ್ಲ. ಕೆಳ ಜಾತಿಯ ಜನರು ಸಿಕ್ಕಿದರೆ ದುರಂಕಾರದಿಂದ ಮಾತನಾಡುತ್ತಾರೆ. ಈ ಗುಲಾಮಗಿರಿ ದೂರವಾಗಬೇಕು. ಶಿಕ್ಷಣದಿಂದ ಇದು ಸಾಧ್ಯ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ, ನಾನು ಡಿಗ್ರಿ ಮುಗಿಸಿ ಎಲ್‌ಎಲ್‌ಬಿ (ಲಾ) ಓದುವಾಗ ನಮ್ಮೂರ ಶ್ಯಾನುಭೋಗರ ಬಳಿ ನಮ್ಮ ಅಪ್ಪ ಹೋಗಿದ್ದ. ಆ ವೇಳೆ, ಕುರುಬರು ಎಲ್ಲಾದ್ರೂ ಲಾ ಓದುತ್ತಾರ ಅಂತ ಹೇಳಿದ್ದ. ನಂತರ, ನಮ್ಮಪ್ಪ ಕುರುಬರು ಲಾ ಓದುವಾಗಿಲ್ಲ ಅಂತ ಹಟ ಹಿಡಿದು ಕೂತಿದ್ದ. ಅದಕ್ಕೆ, ನಾನು ನಂಗೆ ಆಸ್ತಿಲೀ ಪಾಲು ಕೊಡು ಅಂತ ನಮ್ಮಪ್ಪನ ಮುಂದೆ ಕೂತಿದ್ದೆ. ಆಮೇಲೆ ಪಂಚಾಯತಿ ಮಾಡಿ ಲಾ ಓದಿದೆ. ಲಾ ಓದಿದ ಬಳಿಕ ಆ ಶ್ಯಾನುಭೋಗರಿಗೆ 2 ಗಂಟೆ ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ದೆ. ನಂತರ ಕುರುಬರು ಲಾ ಓದಬಹುದು ಎಂದು ಹೇಳಿದ್ದೆ ಎಂದೂ ಮೈಸೂರಿನಲ್ಲಿ ಭಾಷಣದ ವೇಳೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.