
ಬೆಂಗಳೂರು (ಅ.30): ಸಿದ್ದರಾಮಯ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಒಟ್ಟು 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಹಿರಿಯ ನಟ ಪ್ರಕಾಶ್ ರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ದೊರೆತಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, 'ಹಿರಿಯ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಪೌರ ಕಾರ್ಮಿಕರಾದ ಫಕೀರವ್ವ ಅವರಿಗೂ ಪ್ರಶಸ್ತಿ ನೀಡಲಾಗಿದೆ. ವೀಣೆಬ್ರಹ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದ ಪೆನ್ನ ಓಬಳಯ್ಯ, ಐಎಎಸ್ ಅಧಿಕಾರಿ ಸಿದ್ದಯ್ಯ, ನಟ ಪ್ರಕಾಶ್ ರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ 6 ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.
ಈ ಬಾರಿ ಜಿಲ್ಲಾವಾರು ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಿಕೆ ಮಾಡಲಾಗಿದೆ. 2114 ಅರ್ಜಿ ಬಂದ್ದವು. ಇವುಗಳಲ್ಲಿ 70 ಪ್ರಶಸ್ತಿಗಳನ್ನ ಸರ್ಕಾರ ನೀಡಿದೆ. ಇದರಲ್ಲಿ ಮಹಿಳೆಯರಿಗೆ 13 ಪ್ರಶಸ್ತಿ ಕೊಡಲಾಗಿದೆ. 60 ವರ್ಷ ದಾಟಿದವರು ಮಾತ್ರವೇ ಈ ಪ್ರಶಸ್ತಿಗೆ ಅರ್ಹರಾಗಿದ್ದರು.
'ಸಣ್ಣ ಸಣ್ಣ ಕಮ್ಯುನಿಟಿಗಳನ್ನ ಗುರುತಿಸಿ ಪ್ರಶಸ್ತಿ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ ಆಸೆಯಂತೆ ಸಾಮಾಜಿಕ ನ್ಯಾಯ , ಪ್ರತಿಭೆಯನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಲಹಾ ಸಮಿತಿ ಸದಸ್ಯರು ಹಾಗೂ 5 ಉಪ ಸಮಿತಿ ಸದಸ್ಯರು 3 ದಿನ ಕುಳಿತು ಸಭೆ ಮಾಡಿ ಒಳ್ಳೆ ಒಳ್ಳೆ ಆಯ್ಕೆ ಕೊಟ್ಟಿದ್ದಾರೆ. ಈ ಬಾರಿ 2315 ಅರ್ಜಿ ಬಂದಿತ್ತು. ಅರ್ಜಿ ಹಾಕದೇ ಇರುವವರನ್ನ ಗುರುತಿಸಿ ಕೂಡ ಪ್ರಶಸ್ತಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯಲ್ಲಿ 22 ಕ್ಯಾರಟ್‌ಗ 25 ಗ್ರಾಂ ಚಿನ್ನ. 5 ಲಕ್ಷ ಹಣದ ಚೆಕ್ ಹಾಗೂ ಪ್ರಮಾಣ ಪತ್ರ,ಭುವನೇಶ್ವರಿ ವಿಗ್ರಹ, ಶಾಲು, ಫಲಕ ವಿತರಣೆ ಮಾಡಲಾಗುತ್ತದೆ. ನ.1 ರ ಸಂಜೆ ಚಹಾ ಕೂಟ ಆಯೋಜನೆಯಾಗಲಿದ್ದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕಳೆದ ಬಾರಿ ಕನ್ನಡ ರಾಜ್ಯೋತ್ಸವ ಮಾಡಿ ಅಂತ ಕಡ್ಡಾಯ ಮಾಡಿದ್ದೆವು. ಈ ಬಾರಿಯೂ ಕಡ್ಡಾಯವಾಗಿ ಎಲ್ಲರೂ ಆಚರಣೆ ಮಾಡಬೇಕು. ಆದೇಶ ಮಾಡುವುದರ ಬಗ್ಗೆ ಡಿಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ