ಸಿದ್ಧಗಂಗಾ ಶ್ರೀಗಳ ಕೊನೆ ಪತ್ರವಿದು : ಇದರಲ್ಲಿ ಬರೆದಿದ್ದೇನು ..?

Published : Jan 28, 2019, 10:31 AM IST
ಸಿದ್ಧಗಂಗಾ ಶ್ರೀಗಳ ಕೊನೆ ಪತ್ರವಿದು :  ಇದರಲ್ಲಿ ಬರೆದಿದ್ದೇನು ..?

ಸಾರಾಂಶ

ಶಿವೈಕ್ಯ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಕೊನೆಯ ಪತ್ರವೊಂದು ಇದೀಗ ಮಠದಲ್ಲಿ ಪತ್ತೆಯಾಗಿದೆ. ಈ ಪತ್ರದಲ್ಲಿ ಶ್ರೀಗಳು ಬರೆದಿದ್ದೇನು ಎನ್ನುವ ವಿಚಾರ ಇಲ್ಲಿದೆ. 

ತುಮಕೂರು :  ಸಿದ್ಧಗಂಗಾ ಮಠದ ಶಿವೈಕ್ಯ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಕೊನೆಯ ಪತ್ರವೊಂದು ಇದೀಗ ಮಠದಲ್ಲಿ ದಾಖಲೆಯಾಗಿ ಸಂರಕ್ಷಿಸಲ್ಪಡುತ್ತಿದೆ.

ಡಾ.ಶಿವಕುಮಾರ ಸ್ವಾಮೀಜಿ 2018ರ ನವೆಂಬರ್‌ 8 ರಂದು ತಮ್ಮ ಕೈ ಬರಹದಲ್ಲಿ 2019 ರ ಜನವರಿಯಲ್ಲಿ ನಡೆಯಲಿದ್ದ ಸಿದ್ಧರಾಮ ಜಯಂತಿಗೆ ಶುಭ ಹಾರೈಸಿ ಪತ್ರವೊಂದನ್ನು ಬರೆದಿದ್ದರು. ಅದು ಅವರ ಜೀವಮಾನದಲ್ಲಿ ಬರೆದ ಕೊನೆಯ ಪತ್ರವಾಗಿದೆ.

2019ರ ಜನವರಿ 14-15ರಂದು ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯು ಗುಬ್ಬಿ ತಾಲೂಕು ಗವಿಮಠದಲ್ಲಿ ನಡೆಯಲಿದೆ. ಸಮಾರಂಭವು ಯಶಸ್ವಿಯಾಗಲಿ. ಈ ಸಂದರ್ಭದಲ್ಲಿ ಹೊರತರಲಿರುವ ಸಿದ್ಧರಾಮ ಸ್ಮರಣ ಸಂಚಿಕೆ ಸುಂದರವಾಗಿ ಹೊರಬರಲಿ ಎಂದು ಶುಭ ಕೋರುತ್ತೇನೆ’ ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಪತ್ರ ಬರೆದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!