
ಮಲ್ಲಿಕಾರ್ಜನ ಹೊಸಮನಿ
ಬಾಗಲಕೋಟೆ(ಜ.17): ರಾಜ್ಯದಲ್ಲಿ ವೀರಶೈವ ಮತ್ತು ಪ್ರತ್ಯೇಕ ಲಿಂಗಾಯತ ಸ್ವಾಮಿಜಿಗಳ ಮುಸುಕಿನ ಗುದ್ದಾಟ ನಡೆಯುತ್ತಿರೋ ಬೆನ್ನಲ್ಲೆ ವೀರಶೈವ ಸ್ವಾಮಿಜಿಯೊಬ್ಬರು ವಿವಾದಾತ್ಮಕ ಮಾತುಗಳನ್ನಾಡುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗುವಂತೆ ಮಾಡಿದ್ದಾರೆ.
ಇಲ್ಲಿಯವರೆಗೆ ಕೇವಲ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕ್ರಪ್ಪನಂತಹ ರಾಜಕಾರಣಿಗಳಿಗೆ ಸೀಮಿತವಾಗಿದ್ದ ಮಾತಿನ ವಿವಾದ ಇದೀಗ ಸ್ವಾಮೀಜಿಗಳ ಮಧ್ಯೆಯೇ ಶುರುವಾಗಿದ್ದು, ತೀವ್ರ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಂತಾಗಿದೆ.
"
ಹೌದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಅಧ್ಯಕ್ಷ ಡಾ, ಸಂಗನಬಸವ ಸ್ವಾಮೀಜಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಹೇಳಿದ ಹೇಳಿಕೆ ಇದೀಗ ವಿವಾದವೊಂದನ್ನ ಸೃಷ್ಠಿಸಿ ತೀವ್ರ ಚಚೆ೯ಗೆ ಗ್ರಾಸವಾಗುವಂತೆ ಮಾಡಿದೆ.
"
ಇತ್ತ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಗದಗ ತೋಂಟದಾರ್ಯ ಸ್ವಾಮೀಜಿಗಳು ಮುಂಚೂಣಿಯಲ್ಲಿದ್ದರು. ಈಚೆಗೆ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಇದನ್ನೇ ಪರೋಕ್ಷವಾಗಿ ಡಾ, ಸಂಗನಬಸವ ಸ್ವಾಮೀಜಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಜ್ಞಾನೋಷ್ಠಕ ಲಿಂಗೈಕ್ಯರಾಗಿದ್ದಾರೆಂದು ಮತ್ತು ಲಿಂಗಾಯತ ಹೋರಾಟ ಅಸ್ತಂಗತವಾಗಿದೆ ಎಂದಿದ್ದಾರೆ.
ಇನ್ನು ಲಿಂಗಾಯತ ಧರ್ಮ ಹೋರಾಟ ಉಳಿಯಬೇಕಲ್ಲವೆನ್ನುವ ಮೂಲಕ ಮಾತೆ ಮಹಾದೇವಿ ಅನಾರೋಗ್ಯ ಹಿನ್ನೆಲೆ ಭವಿಷ್ಯ ನುಡಿಯುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ಇನ್ನು ಇತ್ತ ಡಾ,ಸಂಗನಬಸವ ಸ್ವಾಮೀಜಿ ವಿವಾದಿತ ಹೇಳಿಕೆಗೆ ಕೂಡಲಸಂಗಮದ ಬಸವಧಮ೯ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕೆಂಡಾಮಂಡಲರಾಗಿ ಟಾಂಗ್ ನೀಡಿದ್ದಾರೆ, ಸಂಗನಬಸವ ಸ್ವಾಮೀಜಿ ಕೀಳುಮಟ್ಟದ್ದಾಗಿ ಹೇಳಿಕೆ ನೀಡಿದ್ದಾರೆ, ಆಯುಷ್ಯವನ್ನು ದೇವರು, ಲಿಂಗದೇವರು ನಿರ್ಧರಿಸ್ತಾರೆ.
ಅವರ ಹೇಳಿಕೆಗೆ ನಾವು ಕಳವಳಗೊಳ್ಳುವದು ಬೇಡ,ನಾವು ಲಿಂಗೈಕ್ಯರಾದರೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂದುವರೆಸಿಕೊಂಡು ಹೋಗಲು ನೂರಾರು ಜನರಿದ್ದಾರೆ ಹೀಗಾಗಿ ನಮ್ಮ ಗುರಿ ಮುಟ್ಟುತ್ತೇವೆ ಎಂದು ಸಂಗನಬಸವ ಸ್ವಾಮೀಜಿ ಹಾಗೂ ವೀರಶೈವ ಸ್ವಾಮೀಜಿ ಗಳಿಗೆ ಟಾಂಗ್ ನೀಡಿದ್ದಾರೆ.
"
ಲಿಂಗಾಯತ-ವೀರಶೈವ ಸಮುದಾಯದ ಶಾಮನೂರು ಶಿವಶಂಕರಪ್ಪ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಮಧ್ಯೆ ಪ್ರತ್ಯೇಕ ಧರ್ಮ ವಿಚಾರವಾಗಿ ನಾಯಕರಿಬ್ಬ ಮಾತಿನ ಕೆಸರೆರಚಾಟ ಬೆನ್ನಲ್ಲೇ ಸ್ವಾಮೀಜಿ ಸಾವಿನ ಭವಿಷ್ಯ ಹೇಳಿಕೆಯಿಂದ ಲಿಂಗಾಯತ ಸ್ವಾಮೀಜಿಗಳು ಕೆಂಡಾಮಂಡಲರಾಗಿದ್ದಾರೆ.
ಒಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುನ್ನೆಲೆಗೆ ಬಂದಾಗ ಅದರ ವಿರುದ್ಧ ರಾಜ್ಯದ ವೀರಶೈವ ಮಠಾಧೀಶರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಸೇರಿ ಲಿಂಗಾಯತ ಪ್ರತ್ಯೇಕ ಧರ್ಮ ವಿರುದ್ಧ ದೊಡ್ಡ ಶಕ್ತಿ ಪ್ರದರ್ಶನ ಮಾಡಿದ್ರು. ಇದೀಗ ಶಿವಯೋಗಮಂದಿರದ ಅಧ್ಯಕ್ಷ ಡಾ, ಸಂಗನಬಸವ ಸ್ವಾಮೀಜಿ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಸಾವಿನ ಲೇವಡಿ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ