ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದು ಬಂದಿದ್ದ ಶ್ರೀಗಳು, ಕಾಲು ಜಾರಿಬಿದ್ದು ಗಾಯಗೊಂಡಿದ್ದರು!

By Ravi JanekalFirst Published Mar 23, 2023, 1:12 PM IST
Highlights

ಶ್ರವಣಬೆಳಗೊಳ ದ ಜೈನ ಮಠದ ಶ್ರೀಗಳ ಅಕಾಲಿಕ ಸಾವು. ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದು ಬಂದಾಗ ಕಾಲುಜಾರಿ ಬಿದ್ದು ಶ್ರೀಗಳು ಮೃತಪಟ್ಟಿದ್ದಾರೆ ಎಂದು ಶ್ರವಣಬೆಳಗೊಳದಲ್ಲಿ ಡಿಸಿ ಎಂ.ಎಸ್.ಅರ್ಚನ ಶ್ರೀಗಳ ಸಾವಿನ ಕುರಿತು ಮಾಹಿತಿ ನೀಡಿದರು.

ಹಾಸನ (ಮಾ.23): ಶ್ರವಣಬೆಳಗೊಳ ದ ಜೈನ ಮಠದ ಶ್ರೀಗಳ ಅಕಾಲಿಕ ಸಾವು. ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದು ಬಂದಾಗ ಕಾಲುಜಾರಿ ಬಿದ್ದು ಶ್ರೀಗಳು ಮೃತಪಟ್ಟಿದ್ದಾರೆ ಎಂದು ಶ್ರವಣಬೆಳಗೊಳದಲ್ಲಿ ಡಿಸಿ ಎಂ.ಎಸ್.ಅರ್ಚನ ಹೇಳಿದರು.

ಇತ್ತೀಚೆಗೆ ಕಾಲುನೋವಿನಿಂದ ಬಳಲುತ್ತಿದ್ದ ಶ್ರೀಗಳು. ಇಂದು ನಿತ್ಯಕರ್ಮಕ್ಕೆ ಎದ್ದು ಬಂದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ವಿಧಿವಶರಾಗಿದ್ದಾರೆ. ಬಿದ್ದ ಬಳಿಕ ಶ್ರೀಗಳಿಗೆ ತೀವ್ರ ಗಾಯಗೊಂಡಿದ್ದರು. ಬಳಲಿದ್ದ ಶ್ರೀಗಳನ್ನು ಮಠದ ಸಿಬ್ಬಂದಿ ತಕ್ಷಣ ಆಸ್ಪತ್ರೆ ಗೆ ಸಾಗಿಸಿದ್ದರು. ಆದರೆ ಶ್ರೀಗಳ ತಲೆಗೆ ಗಂಭೀರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶ್ರೀಗಳ ಸಾವಿನ ಕುರಿತ ಡಿಸಿ  ಡಿಸಿ ಅರ್ಚನ ಮಾಹಿತಿ ನೀಡಿದ್ದಾರೆ. 

Latest Videos

Breaking: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

ಸಂಜೆ ಆರು ಗಂಟೆಯೊಳಗೆ ಅಂತ್ಯ ಸಂಸ್ಕಾರ ನಡೆಸಲು ಸಿದ್ದತೆ. ಶ್ರವಣಬೆಳಗೊಳ(shravanabelagola)ದ ಚಂದ್ರಗಿರಿ ಬೆಟ್ಟ(Chandragiri betta)ದ ತಪ್ಪಲಿನಲ್ಲಿ ನಡೆಯಲಿರೊ ಅಂತ್ಯ ಸಂಸ್ಕಾರ.

ಶ್ರೀಗಳ ಗೌರವಾರ್ಥ ಶ್ರವಣಬೆಳಗೊಳ ಸ್ವಯಂ ಪ್ರೇರಿತ್ ಬಂದ್: 

ಶ್ರೀಗಳ ಸಾವಿನಿಂದ ಅಸಂಖ್ಯ ಭಕ್ತರಿಗೆ ಆಘಾತವಾಗಿದೆ. ಶ್ರೀಗಳ ಗೌರವಾರ್ಥ ಶ್ರವಣಬೆಳಗೊಳ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದ್ದು. ಅಂಗಡಿ ಮುಂಗಟ್ಟು ಮುಚ್ಚಿ ಕರ್ಮಯೋಗಿ ಗೆ ಗೌರಮ ಸಮರ್ಪಣೆ ಸಲ್ಲಿಸಿರುವ ಭಕ್ತರು. ಇನ್ನು ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಲೆ ಮಠದತ್ತ ಸಹಸ್ರಾರು ಭಕ್ತರು  ಹರಿದು ಬರುತ್ತಿದ್ದಾರೆ.

ಅಂತಿಮ ದರ್ಶನಕ್ಕೆ ಮಠದಲ್ಲಿ ವ್ಯವಸ್ಥೆ:

ಶ್ರೀಗಳ ಸಾವಿನಿಂದ ಅಪಾರ ಭಕ್ತಗಣದಲ್ಲಿ ನೋವು ಮಡುಗಟ್ಟಿದ್ದು ಶ್ರೀಗಳ ಅಂತಿಮ ದರ್ಶನಕ್ಕೆ ಸಾಹಸ್ರಾರು ಭಕ್ತರು ಬರುತ್ತಿದ್ದಾರೆ ಈ ಹಿನ್ನೆಲೆ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ಚಾವುಂಡರಾಯ ಸಭಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೆಚ್ಚಿನ ಗುರುಗಳ ಅಂತಿಮ ದರ್ಶನಕ್ಕೆ ಕಾಯುತ್ತಿರುವ ಸಾವಿರಾರು ಭಕ್ತರು ಇಂದು ಮಧ್ಯಾಹ್ನದ ವೇಳೆಗೆ ಸಭಾಂಗಣಕ್ಕೆ ಆಗಮಿಸಲಿರುವ ಸ್ವಾಮೀಜಿಗಳ ಪಾರ್ಥೀವ ಶರೀರ. ಈಗಾಗಲೇ  ಶ್ರೀಗಳ ಅಂತಿಮ ದರ್ಶನಕ್ಕೆ ಯಾವುದೇ ತೊಡಕು ಆಗದಂತೆ ಸಕಲ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ. ಸ್ಥಳದಲ್ಲೆ ಮೊಕ್ಕಾಂ ಹೂಡಿರುವ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿರೋ ಹಾಸನ ಎಸ್ಪಿ ಹರಿರಾಂ ಶಂಕರ್  ಸಂಜೆ 4.30 ರ ನಂತರ ಬಾಹುಬಲಿ ಮೂರ್ತಿ ಹಿಂಭಾಗದ ಚಿಕ್ಕಬೆಟ್ಟದ ತಪ್ಪಲಿನಲ್ಲಿ ನಡೆಯಲಿರುವ ಅಂತ್ಯಕ್ರಿಯೆ.

ಶ್ರೀಗಳ ಅಂತಿಮ ದರ್ಶನ ಪಡೆದ ಗಣ್ಯರು:

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತಿಮ ದರ್ಶನ ಪಡೆದ ಅನೇಕ ಗಣ್ಯರು ಹಾಗೂ ವಿವಿಧ ಮಠದ ಸ್ವಾಮೀಜಿಗಳು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಇತರೇ ಗಣ್ಯರಿಂದ ಅಂತಿಮ ದರ್ಶನ ಮಾಡಲಾಯಿತು. ಶ್ರೀಗಳ ಪಾರ್ಥಿವ ಶರೀರ ಕೊಂಡಯ್ಯುವ ಮುನ್ನ ಹತ್ತು ನಿಮಿಷಗಳ ಕಾಲ ಆಸ್ಪತ್ರೆ ಇರಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪಾರ್ಥಿವ ಶರೀರ BGS ಆಸ್ಪತ್ರೆಯಲ್ಲೇ ಅಂತಿಮ ದರ್ಶನ ಮುಕ್ತಾಯ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಭಕ್ತರ ಜೈಕಾರ.
BGSನಿಂದ ಶ್ರವಣಬೆಳಗೊಳದ ಕಡೆಗೆ ಪಾರ್ಥಿವ ಶರೀರ ರವಾನೆ. ಆಂಬ್ಯುಲೆನ್ಸ್ ಮೂಲಕ ಸ್ವಾಮೀಜಿ ಪಾರ್ಥಿವ ಶರೀರ ರವಾನೆ.

ಉತ್ತರಾಧಿಕಾರಿ ನೇಮಕ ಮಾಡಿದ್ದ ಶ್ರೀಗಳು:

ಸಾವಿಗೂ ಮುನ್ನವೇ ಉತ್ತರಾಧಿಕಾರಿ ನೇಮಕ ಮಾಡಿದ್ದ ಶ್ರೀಗಳು: ಸ್ವಸ್ತಿಶ್ರೀ ಆಗಮ ಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿರುವ ಶ್ರೀ ಭಟ್ಟಾರಕ ಸ್ವಾಮೀಜಿ ಆಗಮ ಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ನೇಮಕ ಮಾಡಿ ಎಲ್ಲಾ ಕಾರ್ಯಗಳನ್ನು ಮುಗಿಸಿರುವ ಶ್ರೀ ಭಟ್ಟಾರಕ ಸ್ವಾಮೀಜಿಗಳು.

ಅರೆತಿಪ್ಪೂರು ಮಠದ ಸಿದ್ದಾಂತ ಕೀರ್ತಿ ಸ್ವಾಮೀಜಿ ಸಂತಾಪ.

ಶ್ರೀಗಳ ಅಕಾಲಿಕ ಮರಣದಿಂದ ದುಃಖವಾಗಿದೆ ಎಂದು ಅರೆತಿಪ್ಪೂರು ಸಿದ್ಧಾಂತ ಕೀರ್ತಿ ಸ್ವಾಮೀಜಿ ಸಂತಾಪ ಸೂಚಿಸಿದರು. "ಝಶ್ರೀಗಳ ಸಾವು ಜೈನ ಭಾಂದವರಿಗೆ ಅಘಾತ. 50 ವರ್ಷಗಳಲ್ಲಿ ಧಾರ್ಮಿಕ, ಶೈಕ್ಷಣಿಕವಾಗಿ ಕೆಲಸ ಮಾಡಿದ್ದಾರೆ. ಮಹಾಮಸ್ತಕಾಭಿಷೇಕದ ಮೂಲಕ ಶ್ರವಣಬೆಳಗೊಳ ಪ್ರಸಿದ್ಧಿ ಪಡೆದಿತ್ತು. ಅವರ ಕಾರ್ಯಗಳು, ಅವರ ಗುಣಗಳು ನಾಡಿನ ಜನತೆಗೆ ಸ್ಪೂರ್ತಿ. ಶ್ರವಣಬೆಳಗೊಳ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಿಗಂಬರ ಜೈನ ಪರಂಪರೆ ಸಂಪ್ರದಾಯದಂತೆ ವಿಧಿವಿಧಾನ. ಶ್ರೀಗಳಿಗೆ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಚಂದ್ರಗಿರಿಬೆಟ್ಟದ ಹಿಂಭಾಗ ಸ್ವಾಮೀಜಿ ಸಮಾಧಿ.ರಾಜ್ಯ, ಹೊರ ರಾಜ್ಯಗಳಲ್ಲಿರುವ ಅವರ ಶಿಷ್ಯರು ಬಂದು ಅಂತಿಮ ದರ್ಶನ ಪಡೆದ ಬಳಿಕ ಅಂತಿಮ ಸಂಸ್ಕಾರ. ಸಂಜೆವೇಳೆಗೆ ನಡೆಯಲಿರುವ ಶ್ರೀಗಳ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

ಜೈನಮುನಿ ವಿಧಿವಶ: ನಿರ್ಮಲಾನಂದ ಸ್ವಾಮೀಜಿ ಸಂತಾಪ

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ. ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಶ್ರೀಗಳ ಹೇಳಿಕೆ. ಚಾರುಕೀರ್ತಿ ಭಟ್ಟರಾಕ ಸ್ವಾಮೀಜಿಯವರು ಹಿರಿಯ ಯತಿಶ್ರೇಷ್ಠರಲ್ಲಿ ಒಬ್ಬರಾಗಿದ್ದರು. ಇಂದು ಅವರು ದೈಹಿಕವಾಗಿ ಅಸ್ತಂಗತರಾಗಿದ್ದಾರೆ. 54ವರ್ಷ ಧರ್ಮಾಧಿಕಾರ ವಹಿಸಿಕೊಂಡು ಕರ್ಮ ಜೀವಿ. ಅಹಿಂಸಾ ತತ್ವವನ್ನು ನಾಡಿಗೆ ಭೋದಿಸುತ್ತಿದ್ದರು. ಜಗತ್ತಿಗೆ ಜ್ಞಾನ ಪಸರಿಸಿದ್ದಾರೆ‌. ಭಟ್ಟರಾಕ ಸ್ವಾಮೀಗಳು ಆದಿಚುಂಚನಗಿರಿ ಮಠದ ಅಭಿಮಾನಿಯಾಗಿದ್ದರು. ಬಾಲಗಂಗಾಧರನಾಥ ಸ್ವಾಮೀಜಿಯವರ ಒಡನಾಡಿಯಾಗಿದ್ದರು.ಆದಿಚುಂಚನಗಿರಿ ಕ್ಷೇತ್ರದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು ಮಾರ್ಗದರ್ಶನ ನೀಡುತ್ತಿದ್ದರು‌
ಪೂಜ್ಯರ ಆಶೀರ್ವಾದ ಸದಾಕಲಾ ಭಕ್ತಗಣದ ಮೇಲಿರಲಿ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

ಶ್ರೀಗಳ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಂತಾಪ:

ಶ್ರವಣಬೆಳಗೊಳದ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂತಾಪ ಸೂಚಿಸಿದರು.

ಟ್ವಿಟ್ ಮೂಲಕ ಸಂತಾಪ ಸೂಚಿಸಿರುವ ದೇವೇಗೌಡರು, ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವುಂಟಾಗಿದೆ. ಸ್ವಾಮೀಜಿಗಳು ದೇಶದಾದ್ಯಂತ ಅಪಾರ ಭಕ್ತ ವರ್ಗ ಹೊಂದಿದ್ದರು. ಅವರ ನಿಧನದಿಂದ ಧಾರ್ಮಿಕ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ. ಸ್ವಾಮೀಜಿಗಳ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

click me!