ಎರಡು ಮದ್ವೆಯಾಗಿದ್ದ ಪೊಲೀಸ್ ಪೇದೆ ಅನುಮಾನಾಸ್ಪದ ಸಾವು : ಕೊಲೆ ಶಂಕೆ

By Suvarna News  |  First Published Mar 23, 2023, 9:15 AM IST

 DAR ಪೊಲೀಸ್ ಪೇದೆ ಪಿ ಜಾಫರ್ ಸಾಹೀಬ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,  ಕೊಲೆ ಶಂಕೆ ವ್ಯಕ್ತವಾಗಿದೆ.  ಬಳ್ಳಾರಿಯ ಪೊಲೀಸ್ ವಸತಿ ಗೃಹದಲ್ಲಿ ನಿನ್ನೆ ತಡರಾತ್ರಿ ಸಾವಿಗೀಡಾಗಿರುವ ಜಾಫರ್ ಸಾಹೀಬ್ ಕಿವಿಯಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ


ಬಳ್ಳಾರಿ:  DAR ಪೊಲೀಸ್ ಪೇದೆ ಪಿ ಜಾಫರ್ ಸಾಹೀಬ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,  ಕೊಲೆ ಶಂಕೆ ವ್ಯಕ್ತವಾಗಿದೆ.  ಬಳ್ಳಾರಿಯ ಪೊಲೀಸ್ ವಸತಿ ಗೃಹದಲ್ಲಿ ನಿನ್ನೆ ತಡರಾತ್ರಿ ಸಾವಿಗೀಡಾಗಿರುವ ಜಾಫರ್ ಸಾಹೀಬ್ ಕಿವಿಯಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಪ್ರಜ್ಞೆ ತಪ್ಪಿಸಿ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಿವಿಯಲ್ಲಿನ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದ  ಜಾಫರ್ (jafar) ಅವರನ್ನು ವಿಮ್ಸ್ ಗೆ ದಾಖಲು ಮಾಡಲಾಗಿತ್ತು.   ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.  2008ರಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದ ಜಾಫರ್ ಎರಡನೇ ಮದುವೆಯಾಗಿದ್ದರು. ಇವರ 2ನೇ ಪತ್ನಿ ನರ್ಸ್ (Nurse) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

Tap to resize

Latest Videos

ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಎರಡನೇ ಹೆಂಡತಿ ಹಿಂದೂ ಎಂಬ ಮಾಹಿತಿ ಇದ್ದು, ಮೊದಲನೇ ಹೆಂಡತಿಯನ್ನು ಈತ ತವರು ಮನೆಯಲ್ಲಿಯೇ ಬಿಟ್ಟಿದ್ದ. ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಜೊತೆಗೆ ಜಗಳ ನಡೆದಿತ್ತು‌ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದೆ. 

click me!