ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC) ಹೊಸ ಅಧ್ಯಕ್ಷರ ನೇಮಕ

By Suvarna NewsFirst Published Apr 3, 2021, 8:37 PM IST
Highlights

ಕೆಪಿಎಸ್‌ಸಿಗೆ ಹೊಸ ಸಾರಥಿಯ ನೇಮಕವಾಗಿದೆ. ರಾಜ್ಯಪಾಲ ವಾಜುಬಾಯಿ ವಾಲಾ ಅವರು ನೇಮಕ ಮಾಡಿ ಇಂದು (ಶನಿವಾರ) ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, (ಏ.03) : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿ ಶಿವಶಂಕರಪ್ಪ ಎಸ್ ಸಾಹುಕಾರ್ ನೇಮಕವಾಗಿದ್ದಾರೆ.

ರಾಜ್ಯಪಾಲ ವಾಜುಬಾಯಿ ವಾಲಾ ಅವರು ನೇಮಕ ಮಾಡಿ ಇಂದು (ಶನಿವಾರ) ಆದೇಶ ಹೊರಡಿಸಿದ್ದಾರೆ.  ಶಿವಶಂಕರಪ್ಪ ಎಸ್ ಸಾಹುಕಾರ್ ಅವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದರು.

ಇದೀಗ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯಪಾಲ ವಾಜುಬಾಯಿ ವಾಲಾ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

ಜಾಬ್ಸ್‌ ಮಾಹಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸೇವೆಗಳು) ಸರ್ಕಾರದ ಉಪ ಕಾರ್ಯದರ್ಶಿ ಡಾ.ಕೆ.ಆನಂದ್, ಅಧಿಸೂಚನೆ ಹೊರಡಿಸಿದ್ದು,  ಭಾರತ ಸಂವಿಧಾನದ ಅನುಚ್ಛೇದ 316ರ ಖಂಡ(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರಾದ ವಾಜುಬಾಯಿ ವಾಲಾ ಅವರು, ಶಿವಶಂಕರಪ್ಪ ಎಸ್ ಸಾಹುಕಾರ್, ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ ಇವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಭಾರತ ಸಂವಿಧಾನದ ಅನುಚ್ಛೇದ 316(1)ರನ್ವಯ ನೇಮಿಸಿ, ಆದೇಶಿಸಿದ್ದಾರೆ.

ಒಟ್ಟಿನಲ್ಲಿ ಈಗ ಕೆಪಿಎಸ್‌ಸಿಗೆ ಹೊಸ ಸಾರಥಿ ನೇಮಕವಾಗಿದ್ದು, ಈಗಲಾದರೂ ಇಲಾಖೆಯಲ್ಲಿನ ಸಮಸ್ಯೆಗಳನ್ನ ಬಗೆಹರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

click me!