ಇಂದೋರ್‌ನಿಂದ ಬಿಂಕದಕಟ್ಟೆ ಮೃಗಾಲಯಕ್ಕೆ ಬಂದ ಶಿವ-ಗಂಗಾ ಸಿಂಹಗಳು

By Sathish Kumar KH  |  First Published Dec 8, 2022, 6:33 PM IST

ಗದಗ ಜಿಲ್ಲೆಯ ಬಿಂಕದಕಟ್ಟೆ ಮೃಗಾಲಯಕ್ಕೆ ಇಂದು ಮಧ್ಯಪ್ರದೇಶ ರಾಜ್ಯದ ಇಂದೋರ್‌ನಿಂದ ಆಗಮಿಸಿದ ಶಿವ ಮತ್ತು ಗಂಗಾ ಜೋಡಿ ಸಿಂಹಗಳಾದ ಅದ್ಧೂರಿ ಸ್ವಾಗತ ಮಾಡಲಾಯಿತು. ಮೃಗಾಲಯದ ಪ್ರದೇಶವನ್ನು ತಳಿರು ತೋರಣಗಳಿಂದ ಸಿಂಗರಿಸಿ ಕ್ರಾಲ್‌ಬ ಏರಿಯಾದೊಳಗೆ ಬಿಡಲಾಯಿತು.


ಗದಗ (ಡಿ.8): ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಬಿಂಕದಕಟ್ಟೆ ಮೃಗಾಲಯಕ್ಕೆ ಇಂದು ಮಧ್ಯಪ್ರದೇಶ ರಾಜ್ಯದ ಇಂದೋರ್‌ನಿಂದ ಆಗಮಿಸಿದ ಶಿವ ಮತ್ತು ಗಂಗಾ ಜೋಡಿ ಸಿಂಹಗಳಾದ ಅದ್ಧೂರಿ ಸ್ವಾಗತ ಮಾಡಲಾಯಿತು. ಮೃಗಾಲಯದ ಪ್ರದೇಶವನ್ನು ತಳಿರು ತೋರಣಗಳಿಂದ ಸಿಂಗರಿಸಿ ಕ್ರಾಲ್‌ಬ ಏರಿಯಾದೊಳಗೆ ಬಿಡಲಾಯಿತು.

ಪ್ರಾಣಿ ವಿನಿಮಯ ಯೋಜನೆ ಅಡಿ ದೂರದ ಇಂದೋರದಿಂದ ಶಿವ-ಗಂಗಾ ಜೋಡಿ ನಿನ್ನೆಯಷ್ಟೆ ಗದಗನ ಬಿಂಕದಕಟ್ಟಿ ಮೃಗಾಲಯಕ್ಕೆ ಬಂದಿದೆ‌. ಕಾಡಿನ ರಾಜ, ರಾಣಿ ಮೃಗಾಲಯಕ್ಕೆ ಎಂಟ್ರಿಕೊಟ್ಟಿದ್ದೇ ತಡ ಮೃಗಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಇನ್ನು ಮದ್ಯಪ್ರದೇಶದಿಂದ ಸಾವಿರ ಕಿಲೋ ಮೀಟರ್ ದೂರವನ್ನ ಟ್ರಕ್ ನಲ್ಲಿ ಕ್ರಮಿಸಿ ಗದಗಕ್ಕೆ ಬಂದ ಹೊಸ ಸದಸ್ಯರನ್ನ ಮೃಗಾಲಯ ಸಿಬ್ಬಂದಿ ಭರ್ಜರಿಯಾಗೆ ಸ್ವಾಗತಿಸಿದರು. ಶಿವ ಗಂಗ ಜೋಡಿಗೆ ಸಿದ್ಧಪಡಿಸಿದ ನೈಟ್ ಕ್ರಾಲ್ ಪ್ರದೇಶವನ್ನ ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಗದಗ ಶಾಸಕ ಎಚ್.ಕೆ. ಪಾಟೀಲ್ ಸಿಂಹಗಳನ್ನ ಕ್ರಾಲ್ ಏರಿಯಾಗೆ ಎಂಟ್ರಿ ಮಾಡಿಸುವ ಮೂಲಕ ಸಿಂಹಗಳಿಗೆ ಸ್ವಾಗತಿಸಿದರು

Tap to resize

Latest Videos

undefined

3 ಸಿಂಹಗಳನ್ನು ವಾಕಿಂಗ್ ಕರೆದುಕೊಂಡು ಹೊರಟ ಮಹಿಳೆ: ಬೆಚ್ಚಿಬಿದ್ದ ನೆಟ್ಟಿಗರು..!

ಸಿಂಹಗಳ ಸಂಖ್ಯೆ 4ಕ್ಕೆ ಏರಿಕೆ: ಬಿಂಕದಕಟ್ಟಿ ಮೃಗಾಲಯದಲ್ಲಿ ಈಗಾಗಲೇ 40ಕ್ಕೂ ಅಧಿಕ ಜಾತಿಯ ಪ್ರಾಣಿ, ಪಕ್ಷಿಗಳಿವೆ. ಈ ಮೊದಲು ಹೈಬ್ರೀಡ್ ಜಾತಿಗೆ ಸೇರಿದ ಧರ್ಮ, ಅರ್ಜುನ ಹೆಸರಿನ ಎರಡು ಗಂಡು ಸಿಂಹಗಳೂ ಇವೆ‌. ಈಗ ಏಷಿಯಾಟಿಕ್ ಜಾತಿಗೆ ಸೇರಿದ ಒಂದು ಗಂಡು, ಒಂದು ಹೆಣ್ಣು ಸಿಂಹವನ್ನ ಮೃಗಾಲಯಕ್ಕೆ ತರಿಸಲಾಗಿದೆ. ಈ ಸಿಂಹಗಳನ್ನ ಇಂದೋರ್ ದಿಂದ ತರಿಸೋದಕ್ಕೆ ಗದಗ ಮೃಗಾಲಯದಲ್ಲಿದ್ದ ಕಪಿಲಾ ಅನ್ನೋ ಗಂಡು ತೋಳ, ಕಸ್ತೂರಿ ಎನ್ನುವ ಹೆಣ್ಣು ತೋಳವನ್ನ ಹಂಸ್ತಾತರಿಸಲಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದರು.

ಗದಗಿನ ಜೋಡಿ ತೋಳಗಳ ರವಾನೆ: ಗದಗನ ತೋಳಗಳು ಮಧ್ಯಪ್ರದೇಶದ ಇಂದೋರ್ ನ ಕಮಲಾ ನೆಹರು ಪ್ರಾಣಿಸಂಗ್ರಹಾಲಯ ಸೇರಿವೆ. ಈಗ ಅಲ್ಲಿಯ ಸಿಂಹಗಳು ಗದಗನಲ್ಲಿ ಘರ್ಜಿಸಲಿವೆ. ಸದ್ಯ ಮೃಗಾಲಯಕ್ಕೆ ಆಗಮಿಸಿದ ಸಿಂಹಳಿಗೆ 15 ದಿನ ನಿಗಾವಹಿಸಲು (Observation)ವ್ಯವಸ್ಥೆ ಮಾಡಲಾಗಿದೆ. ವಾತಾವರಣಕ್ಕೆ ಹೊಂದಿಕೊಂಡ ನಂತರ ಬೋನ್ ಗೆ ಸ್ಥಳಾಂತರಿಸಲಾಗುತ್ತದೆ. 15 ದಿನದ ನಂತ್ರ ಸಾರ್ವಜನಿಕರು ಶಿವ, ಗಂಗಾ ಸಿಂಹಗಳನ್ನು ನೋಡಬಹುದು ಎಂದು ಮಾಜಿ ಸಚಿವ ಮಾಹಿತಿ ನೀಡದರು. 

ಮೊಬೈಲ್‌ನಲ್ಲಿ ಮುಳುಗಿದ ಮೇಲೆ ಸಿಂಹ ಬಂದರೂ ತಿಳಿಯದೇ...? ಇಲ್ಲೇನಾಯ್ತು ನೋಡಿ

ಮೃಗಾಲಯ ಮೆರಗು ಹೆಚ್ಚಳ: ಹಸಿರು ವಾತಾವರಣ, ಪ್ರಾಣಿ ವೈವಿದ್ಯದಿಂದ ಬಿಂಕದಕಟ್ಟಿ ಮೃಗಾಲಯ ಜನಾಕರ್ಷಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಸಿಂಹಗಳಾದ ಗಂಗಾ ಮತ್ತು ಶಿವನ ಆಗಮನ ಮೃಗಾಲಯದ ಮೆರಗನ್ನ ಮತ್ತಷ್ಟು ಹೆಚ್ಚಿಸಿದೆ. ಗದಗ ಜಿಲ್ಲೆಯ ಪ್ರವಾಸಕ್ಕೆ ಬಂದವರಿಗೆ ಈ ಶಿವ ಗಂಗಾ ನೋಡುವುದಕ್ಕೆ ಅವಕಾಶ ಸಿಗಲಿದೆ ಎಂದು ಡಿಎಫ್‌ಒ  ದೀಪಿಕಾ ಬಾಜಪೈ ತಿಳಿಸಿದರು.

click me!