ಬೇಸಗೆ ಬಿಸಿಲು ಹೆಚ್ಚಾದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬಿಯರ್ ದರ ಹೆಚ್ಚಳವಾಗಿದ್ದರು ರಾಜ್ಯದ ಮದ್ಯ ಪ್ರಿಯರು ಬಿಯರ್ ಸೇವನೆ ಕಡಿಮೆ ಮಾಡಿಲ್ಲ ಬದಲಾಗಿ ಮೊದಲಿಗಿಂತ ಹೆಚ್ಚು ಬಿಯರ್ ಖರೀದಿಸುತ್ತಿರುವುದು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಬೆಂಗಳೂರು (ಫೆ.15) ಬೇಸಗೆ ಬಿಸಿಲು ಹೆಚ್ಚಾದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬಿಯರ್ ದರ ಹೆಚ್ಚಳವಾಗಿದ್ದರು ರಾಜ್ಯದ ಮದ್ಯ ಪ್ರಿಯರು ಬಿಯರ್ ಸೇವನೆ ಕಡಿಮೆ ಮಾಡಿಲ್ಲ ಬದಲಾಗಿ ಮೊದಲಿಗಿಂತ ಹೆಚ್ಚು ಬಿಯರ್ ಖರೀದಿಸುತ್ತಿರುವುದು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಒಂದು ಕಡೆ ಬೇಸಗೆ ಬಿಸಿಲು, ಇನ್ನೊಂದು ಲೋಕಸಭಾ ಚುನಾವಣೆ ಇವೆಲ್ಲದರ ನಡುವೆ ರಾಜ್ಯದಲ್ಲಿ ಮದ್ಯ ಪ್ರಿಯರು ಭಾರೀ ಪ್ರಮಾಣದಲ್ಲಿ ಬಿಯರ್ ಖರೀದಿ ಮಾಡುತ್ತಿರುವುದು ಅಬಕಾರಿ ಇಲಾಖೆಗೆ ಬಿಯರ್ ಪ್ರಿಯರು ಕಿಕ್ ಕೊಟ್ಟಿದ್ದಾರೆ.
ಬಿಯರ್ ರೇಟ್ ಮತ್ತೆ ಹೆಚ್ಚಿಸಲಿದೆ ಸರ್ಕಾರ: ವರ್ಷಕ್ಕೆ ಎಷ್ಟುಬಾರಿ ಬೆಲೆ ಏರಿಸ್ತೀರಾ?
ಫೆಬ್ರವರಿ 1 ರಿಂದ ಬಿಯರ್ ಮಾರಾಟ 8 ರಿಂದ 10 ರೂ ಏರಿಕೆಯಾಗಿದೆ. ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ(ಎಇಡಿ)ಯನ್ನು ಶೇಕಡ 10 ರಷ್ಟು ಹೆಚ್ಚಿಸಿತ್ತು. 650 ಎಂಎಲ್ ಬಿಯರ್ ಬಾಟಲಿಗೆ 8 ರಿಂದ 10 ರೂಪಾಯಿ ವರೆಗೆ ಹೆಚ್ಚಳ ಮಾಡಿದ್ದ ಅಬಕಾರಿ ಇಲಾಖೆ.
ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್: ಬಿಯರ್ ದರ ಶೇ.10 ರಷ್ಟು ಹೆಚ್ಚಳಕ್ಕೆ ಮುಂದಾದ ಸರ್ಕಾರ!
ದರ ಏರಿಕೆ ನಡುವೆ ಬಿಯರ್ ಮಾರಾಟದಲ್ಲಿ ಹೆಚ್ಚಳ
ಕಳೆದ 14 ದಿನಗಳಲ್ಲಿ ಅಬಕಾರಿ ಇಲಾಖೆಗೆ ಬಿಯರ್ ಮಾರಾಟದಿಂದ ಬರೋಬ್ಬರಿ 195 ಕೋಟಿ ರೂಪಾಯಿ ಹರಿದು ಬಂದಿದೆ. ಫೆಬ್ರವರಿ 1 ರಿಂದ ಫೆಬ್ರವರಿ 14 ರವರೆಗೆ 14.43 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿವೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 13.15 ಲಕ್ಷ ಬಾಕ್ಸ್ ಬಿಯರ್ ಮಾರಾಟ ಅಗಿತ್ತು. ಬಿಯರ್ ದರ ಹೆಚ್ಚಳ ಗ್ರಾಹಕ ಜೇಬಿಗೆ ಹೊರೆ ಬಿಳಲಿದೆ ಖರೀದಿ ಪ್ರಮಾಣ ಕುಸಿಯಲಿದೆ ಎಂದು ನಂಬಲಾಗಿತ್ತು. ಆದರೆ ದರ ಏರಿಕೆ ನಡುವೆಯೂ ಕಳೆದ 14 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಬಿಯರ್ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಅಂಕಿ ಅಂಶಗಳ ಸಮೇತ ದಾಖಲೆ ಬಿಡುಗಡೆ ಮಾಡಿದ ಅಬಕಾರಿ ಇಲಾಖೆ