ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ನಿಧನ| ನವೆಂಬರ್ 1 ರಂದು ಸದಾಶಿವನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ/ಅಂತಿಮ ದರ್ಶನ ಪಡೆದ ಸಿಎಂ ಯಡಿಯೂರಪ್ಪ
ಬೆಂಗಳೂರು[ಅ. 31] ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಗುರುವಾರ ನಿಧನರಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ.
ಖ್ಯಾತ ಸಮಾಜವಾದಿ ನಾಯಕ ದಿವಂಗತ ಗೋಪಾಲಗೌಡ ಪತ್ನಿ ಸೋನಕ್ಕ ಅವರ ನಿಧನದಿಂದ ನನಗೆ ಅತೀವ ವೇದನೆಯಾಗಿದೆ. “ಸಮಾಜವಾದಿ ನಾಯಕರಾಗಿ ಮತ್ತು ಯಶಸ್ವಿ ತತ್ವಬದ್ಧ ರಾಜಕಾರಣಿಯಾಗಿ, ಪ್ರಖರ ವಾಗ್ಮಿಯಾಗಿ ಗೋಪಾಲಗೌಡರು ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಹೊಂದಲು, ಸೋನಕ್ಕ ಅವರು ಶಕ್ತಿಯಾಗಿ ನಿಂತಿದ್ದರು ಎಂದು ಯಡಿಯೂರಪ್ಪ ಬಣ್ಣಿಸಿದ್ದಾರೆ.
ಸೋನಕ್ಕ ಗೋಪಾಲಗೌಡ ಅವರು ಉಸಿರಾಟದ ತೊಂದರೆ ಯಿಂದ ಬೆಂಗಳೂರಿನ ವಸಂತನಗರದ ಜೈನ್ ಆಸ್ಪತ್ರೆಯಲ್ಲಿ ಸಂಜೆ 4 ಗಂಟೆ 18 ನಿಮಿಷಕ್ಕೆ ನಿಧನರಾದರು. ಮೃತರು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಗೋಪಾಲಗೌಡರನ್ನು ಒಳಗೊಂಡಂತೆ ಮಗಳು ಇಳಾ ಗೀತಾ ಹಾಗೂ ಮಗ ರಾಮಮನೋಹರ್ ಅವರನ್ನು ಬಹಳ ಕಷ್ಟದ ಬದುಕನ್ನು ನಿರ್ವಹಿಸಿದವರು.
ಸ್ವಾಭಿಮಾನಿಯಾಗಿದ್ದ ಇವರು ಕೊನೆಯವರೆಗೂ ಅವರ ನಿವೃತ್ತಿ ವೇತನದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದರು. ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸದಾಶಿವನಗರದ ಅವರ ಮನೆಯಲ್ಲಿ ಇರಿಸಲಾಗಿದ್ದು ನವೆಂಬರ್ 1 ಮಧ್ಯಾಹ್ನ 12-30ಕ್ಕೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಾಮ್ ಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದ ಶಾಂತವೇರಿ ಗೋಪಾಲಗೌಡರು 1952, 1962 1967ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಪ್ರವೇಶ ಮಾಡಿದ್ದರು. ಸಮಾಜವಾದಿ ಮಣ್ಣಿನ ನಾಯಕನ ಉದಾಹರಣೆಯನ್ನು ಇಂದಿಗೂ ಹಲವಾರು ಸಂದರ್ಭಗಳಲ್ಲಿ ನೀಡಲಾಗುತ್ತದೆ.
ಖ್ಯಾತ ಸಮಾಜವಾದಿ ನಾಯಕ ದಿವಂಗತ ಶ್ರೀ ಗೋಪಾಲಗೌಡ ಅವರ ಪತ್ನಿ ಶ್ರೀಮತಿ ಸೋನಕ್ಕ ಅವರ ನಿಧನದಿಂದ ನನಗೆ ಅತೀವ ವೇದನೆಯಾಗಿದೆ.
ಸಮಾಜವಾದಿ ನಾಯಕರಾಗಿ ಮತ್ತು ಯಶಸ್ವಿ ತತ್ವಬದ್ಧ ರಾಜಕಾರಣಿಯಾಗಿ, ಪ್ರಖರ ವಾಗ್ಮಿಯಾಗಿ ಶ್ರೀ ಗೋಪಾಲಗೌಡರು ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಹೊಂದಲು, ಶ್ರೀಮತಿ ಸೋನಕ್ಕ ಅವರು ಒತ್ತಾಸೆಯಾಗಿದ್ದರು.