ಶಂಕರ್‌ನಾಗ್‌ ಜನ್ಮದಿನದ ಪ್ರಯುಕ್ತ ನ.9 ರಂದು ಚಾಲಕರ ದಿನಾಚರಣೆ: ಆಟೋ ರಾಯಭಾರಿಯಾಗಿ ನಟಿ ರಚಿತಾ ರಾಮ್‌

Published : Nov 07, 2025, 05:44 PM IST
Rachita Ram

ಸಾರಾಂಶ

ಮೇರುನಟ ದಿ. ಶಂಕರ್‌ನಾಗ್‌ ಅವರ ಜನ್ಮದಿನದ ಪ್ರಯುಕ್ತ ಈ ಬಾರಿಯ ಚಾಲಕರ ದಿನಾಚರಣೆಗೆ 'ಆಟೋ ರಾಯಭಾರಿ'ಯಾಗಿ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಆಯ್ಕೆಯಾಗಿದ್ದಾರೆ. ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.

ಬೆಂಗಳೂರು (ನ.07): ಮೇರುನಟ ದಿ. ಶಂಕರ್‌ನಾಗ್‌ ಅವರ ಜನ್ಮದಿನದ ಪ್ರಯುಕ್ತ ಆಟೋ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ 12ನೇ ವರ್ಷದ 'ಚಾಲಕರ ದಿನಾಚರಣೆ'ಯನ್ನು ನವೆಂಬರ್‌ 9ರಂದು ಜಯನಗರ 5ನೇ ಬ್ಲಾಕ್‌, ಶಾಲಿನಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ಸಾನಿದ್ಯ ವಹಿಸಲಿದ್ದಾರೆ.

ಈ ಕುರಿತು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಪೀಸ್‌ ಆಟೋ ಮತ್ತು ವಿಷ್ಣುಸೇನಾ ಸಮಿತಿ ಹಾಗೂ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ ರಘು ಎನ್‌. ನಾರಾಯಣ್‌ ಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎಸ್‌. ಅಶ್ವತ್ಥನಾರಾಯಣ್‌, ಸಾರಿಗೆ ಆಯುಕ್ತ ಎ.ಎಂ. ಯೋಗೇಶ್‌, ಆರಕ್ಷಕ ಮಹಾನಿರೀಕ್ಷರಾದ ಡಾ.ಎಂ.ಎ.ಸಲೀಂ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಚಾಲಕರ ದಿನಾಚರಣೆಗೆ 'ಆಟೋ ರಾಯಭಾರಿ'ಯಾಗಿ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಆಯ್ಕೆಯಾಗಿದ್ದಾರೆ ಎಂದರು.

ಪ್ರತಿವರ್ಷದಂತೆ ಈ ವರ್ಷವೂ ಶಂಕರ್‌ನಾಗ್‌ ಅವರ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಸಮಸ್ತ ಆಟೋ ಚಾಲಕರ ಸಮ್ಮುಖದಲ್ಲಿ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 7 ಪ್ರಾಮಾಣಿಕ ಚಾಲಕರು, ಹಿರಿಯ ಹಾಗೂ ಮಹಿಳಾ ಆಟೋಚಾಲಕರಿಗೆ ತಮ್ಮ ಸೇವೆಯನ್ನು ಗೌರವಿಸಿ ಚಿನ್ನದ ಪದಕವನ್ನು ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಪ್ರಾಮಾಣಿಕ ಆಟೋ ಚಾಲಕರಿಗೆ ಇನ್ನಷ್ಟು ಹುರಿದುಂಬಿಸುವ ಕೆಲಸ ಮಾಡಲಿದ್ದೇವೆ ಎಂದರು. ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ಯೂನಿಯನ್‌ ಅಧ್ಯಕ್ಷ ಎಂ. ಮಂಜುನಾಥ್‌ ಗೌಡ ಮಾತನಾಡಿ, ಶಂಕರ್‌ನಾಗ್‌ ಅವರ ದಿನಾಚರಣೆ ಎಲ್ಲಾ ಚಾಲಕರಿಗೂ ಹಬ್ಬದ ದಿನದಂತೆ, ಹೀಗಾಗಿ ಹಬ್ಬದಂತೆಯೇ ಸಂಭ್ರಮಿಸಲು ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇರಲಿದ್ದಾರೆ. ಆಗಮಿಸುವ ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ನಟ ಅಜಯ್‌ ರಾವ್‌ ಅವರು ಇಬ್ಬರು ಚಾಲಕರಿಗೆ ಧನಸಹಾಯ ಮಾಡಲಿದ್ದಾರೆ ಎಂದರು.

ಸರ್ಕಾರವೇ ಚಾಲಕರ ದಿನ ಆಚರಿಸಲಿ: ಆಟೋ ಮತ್ತು ಟ್ಯಾಕ್ಸಿ ಚಾಲಕರಿಲ್ಲದೇ ಸಾರಿಗೆ ವ್ಯವಸ್ಥೆಯೇ ಇಲ್ಲ, ಚಾಲಕರನ್ನು ಗೌರವಿಸಲು ಪ್ರತಿವರ್ಷ ನಡೆಸುತ್ತಿರುವ ಚಾಲಕರ ದಿನಾಚರಣೆಯನ್ನು ಸರ್ಕಾರವೇ ಜವಾಬ್ದಾರಿ ಹೊತ್ತು ಆಚರಿಸಬೇಕು, ಜೊತೆಗೆ, ಈ ದಿನವನ್ನು ಸರ್ಕಾರ ಅಧಿಕೃತವಾಗಿ 'ಚಾಲಕರ ದಿನ'ವನ್ನಾಗಿ ಘೋಷಿಸಬೇಕು ಎಂದು ಆಗ್ರಮಿಸಿದರು. ಬಿ.ಪ್ಯಾಕ್‌ ಸದಸ್ಯ ರಾಘವೇಂದ್ರ ಪೂಜಾರಿ ಮಾತನಾಡಿ, ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್‌ ಅವರಿಗೆ 'ಕರ್ನಾಟಕ ರತ್ನ' ಗೌರವ ಸಂಧಿರುವ ಹಿನ್ನೆಲೆಯಲ್ಲಿ ಚಾಲಕರ ದಿನಾಚರಣೆ ವೇಳೆ ಎಲ್ಲಾ ಆಟೋ ಚಾಲಕರು 'ವಿಷ್ಣು ನಮನ' ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಹಂಪಿ ರಂಥದಂತೆ ಸಿಂಗಾರಗೊಂಡ ಆಟೋಗೆ ಚಾಲನೆ

ಶಂಕರ್‌ನಾಗ್‌ ಅವರ ಜನ್ಮದಿನದ ಪ್ರಯುಕ್ತ 'ಹಂಪಿ ರಥ'ದಂತೆ ಸಿಂಗಾರಗೊಂಡ ಆಟೋಗೆ ಚಾಲನೆ ನೀಡಲಾಗಿದ್ದು, ಶಂಕರ್‌ನಾಗ್‌ ಹಾಗೂ ಡಾ. ವಿಷ್ಣವರ್ಧನ್‌ ಫೋಟೋ ಹೊತ್ತ ಈ ರಥ ಬೆಂಗಳೂರಿನಾದ್ಯಂತ ಎಲ್ಲೆಡೆ ಮೆರವಣಿಗೆ ಹೋಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್