ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಮುಷ್ಕರ: ಜಂಟಿ ಸಭೆಗೆ ಸಚಿವರಿಂದ ಆಹ್ವಾನ

By Sathish Kumar KHFirst Published Jul 23, 2023, 3:23 PM IST
Highlights

ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ರಾಜ್ಯಾದ್ಯಂತ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಮಾಲೀಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಮುಷ್ಕರಕ್ಕೆ ಕರೆಕೊಟ್ಟ ಸಂಘಟನೆಗಳೊಂದಿಗೆ ಸರ್ಕಾರ ಸಭೆ ನಡೆಸಲು ಮುಂದಾಗಿದೆ.

ಬೆಂಗಳೂರು (ಜು.23): ಕರ್ನಾಟಕ ಕಾಂಗ್ರೆಸ್‌ ಸರ್ಕಾರದಿಂದ ಜಾರಿಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆಯಾದ "ಶಕ್ತಿ ಯೋಜನೆ" (ಮಹಿಳೆಯರಿಗೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣ) ವಿರೋಧಿಸಿ ಜು.27ರಂದು ರಾಜ್ಯಾದ್ಯಂತ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಮಾಲೀಕರ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಷ್ಕರಕ್ಕೆ ಕರೆಕೊಟ್ಟ ಸಂಘಟನೆಗಳೊಂದಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಮಾತುಕತೆಗೆ ಬರಲು ಆಹ್ವಾನ ನೀಡಿದ್ದಾರೆ.

ಹೌದು, ಈಗಾಗಲೇ ಜುಲೈ27 ರಂದು ಆಟೋ ಟ್ಯಾಕ್ಸಿ, ಖಾಸಗಿ ಬಸ್  ಮಾಲೀಕರು ರಾಜ್ಯಾದ್ಯಂತ ಬೃಹತ್‌ ಪ್ರಮಾಣದಲ್ಲಿ ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಮುಷ್ಕರ ಹಮ್ಮಿಕೊಂಡಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಇದನ್ನರಿತ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ನಾಳೆ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ ಮತ್ತು ಖಾಸಗಿ ಬಸ್ ಮಾಲೀಕರ ಜತೆ ಸಭೆ ಮಾಡಲು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಸಾರಿಗೆ ಇಲಾಖೆ ಕೇಂದ್ರ ಕಚೇರಿ ಶಾಂತಿನಗರದಲ್ಲಿ ಸಭೆ ಮಾಡುತ್ತಿದ್ದು, ಮುಷ್ಕರ ಕರೆಕೊಟ್ಟ ಮಾಲೀಕರಿಗೆ ಆಹ್ವಾನ ನೀಡಲಾಗಿದೆ.

 ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..

ಮುಷ್ಕರ ಹಿಂಪಡೆಯುವಂತೆ ಮನವೊಲಿಕೆ ಯತ್ನ:  ಶಕ್ತಿ ಯೋಜನೆ ಜಾರಿ ಬಳಿಕ ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಹೀಗಾಗಿ ಸರ್ಕಾದರ ಶಕ್ತಿ ಯೋಜನೆ ವಿರುದ್ಧ ಜುಲೈ 27 ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರದಿಂದಾಗುವ ಸಮಸ್ಯೆ ತಡೆಯುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಅರ್ ಟಿ ಓ ಕಮಿಷನರ್ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ಆಟೋ ಟ್ಯಾಕ್ಸಿ ಖಾಸಗಿ ಬಸ್ ಮಾಲೀಕರಿಗೂ ಅಹ್ವಾನ ಕೊಡಲಾಗಿದೆ. ಸಭೆಯಲ್ಲಿ ಟ್ಯಾಕ್ಸಿ ,ಆಟೋ ಮ್ಯಾಕ್ಸಿ ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರು ಚಾಲಕರ ಅಹವಾಲುಗಳನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಆಲಿಸಲಿದ್ದಾರೆ. ನಂತರ, ಮುಷ್ಕರ ಕೈಬಿಡುವಂತೆ ಮನವೊಲಿಕೆ ಮಾಡುವ ಯತ್ನಗಳೂ ಕೂಡ ನಡೆಯಲಿದೆ.

ಬೇಡಿಕೆ ಈಡೇರದಿದ್ದರೆ ಮುಷ್ಕರ ಫಿಕ್ಸ್: ಈ ವೇಳೆ ಸಚಿವರು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜುಲೈ 27 ರಂದು ಮುಷ್ಕರ ಮಾಡುವ ತೀರ್ಮಾನವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಆಟೋ ಟ್ಯಾಕ್ಸಿ ಖಾಸಗಿ ಬಸ್ ಮಾಲೀಕರು ಪಟ್ಟು ಹಿಡಿದಿದ್ದಾರೆ. ಸರ್ಕಾರ ನಿರ್ಧಾರ ಆಧಾರಿಸಿ ನಾಳೆ ಬಂದ್ ಭವಿಷ್ಯ ನಿರ್ಧಾರ ಮಾಡಲಿದ್ದೇವೆ ಎಂದು ಖಾಸಗಿ ಬಸ್, ಆಟೋ- ಟ್ಯಾಕ್ಸಿ ಮಾಲೀಕರು ಹೇಳಿದ್ದಾರೆ. 

ಶಕ್ತಿ ಯೋಜನೆ ಎಫೆಕ್ಟ್‌: ಬಸ್‌ನಲ್ಲಿ ವಿದ್ಯಾರ್ಥಿಗಳ ಡೇಂಜರ್ ಜರ್ನಿ..!

25 ಕೋಟಿ ಮಹಿಳೆಯರಿಂದ ಪ್ರಯಾಣ: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯ ಪ್ರಯಾಣದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಿಳೆಯರ, ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಈ ಯೋಜನೆ ಭರ್ಜರಿಯಾಗಿ ಅನುಕೂಲ ಒದಗಿಸಿದೆ. ಇನ್ನು ಶಕ್ತಿ ಯೋಜನೆ ಜಾರಿಯಾದ ಜು.11ರಿಂದ ಜುಲೈ 22ರವರೆಗೆ ಒಟ್ಟು 25 ಕೋಟಿ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ಈ ಮೂಲಕ ಮಹಿಳಯರಿಂದ ಶಕ್ತಿ ಯೋಜನೆ ಸದುಪಯೋಗ ಆಗುತ್ತಿದೆ. ಹೀಗಿರುವಾಗ ಶಕ್ತಿ ಯೋಜನೆ ವಿರೋಧಿಸಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮತ್ತು ಖಾಸಗಿ ಬಸ್‌ಗಳ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದು, ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

click me!