ಶಕ್ತಿ ಯೋಜನೆ: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಹಾಕಿದ ಕಾನೂನು ವಿದ್ಯಾರ್ಥಿನಿ ಜಯಶ್ರೀ

By Sathish Kumar KHFirst Published Apr 22, 2024, 9:28 PM IST
Highlights

ಹಾಸನದ ಕಾನೂನು ವಿದ್ಯಾರ್ಥಿನಿ ಎಂ.ಎ. ಜಯಶ್ರೀ, ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ಯೋಜನೆಯಡಿ ಸಂಚಾರ ಮಾಡಿದ  ಉಚಿತ ಟಿಕೆಟ್‌ಗಳಿಂದ ತಯಾರಿಸಿದ ಹಾರವನ್ನು ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.

ಹಾಸನ/ಬೆಂಗಳೂರು (ಏ.22): ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಎ. ಜಯಶ್ರೀ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ಯೋಜನೆಯಡಿ ಸಂಚಾರ ಮಾಡಿದ  ಉಚಿತ ಟಿಕೆಟ್‌ಗಳಿಂದ ತಯಾರಿಸಿದ ಹಾರವನ್ನು ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಮಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರ ಮನಸ್ಸನ್ನು ಗೆದ್ದು 136 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮೊಟ್ಟ ಮೊದಲ ಗ್ಯಾರಂಟಿಯಾಗಿ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಈ ಶಕ್ತಿ ಯೋಜನೆಯನ್ನು ಸದುಪಯೋಗ ಮಾಡಿಕೊಂಡ ವಿದ್ಯಾರ್ಥಿನಿಯೊಬ್ಬಳು ತಾನು ಸಂಚಾರ ಮಾಡುವಾದ ಪಡೆದ ಉಚಿತ ಬಸ್‌ ಟಿಕೆಟ್‌ಗಳಿಂದಲೇ ಹಾರವನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ವಿದ್ಯಾರ್ಥಿನಿ ಇಬ್ಬರೂ ಸಂತಸಗೊಂಡಿದ್ದಾರೆ.

Breaking: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ನ ಹಾರ ಹಾಕಿದ ವಿದ್ಯಾರ್ಥಿನಿ ಅರಸೀಕೆರೆ ಮೂಲದ ಎಂ.ಎ. ಜಯಶ್ರೀ ಆಗಿದ್ದಾಳೆ. ಜಯಶ್ರೀ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದಾಳೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್ ಗಳಿಂದ ಮಾಡಿದ್ದ ಹಾರವನನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಹಾಕಿದ್ದಾರೆ.

ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಫ್ರೀ ಟಿಕೆಟ್ ಹಾರ ಹಾಕಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸುತ್ತಾ ಜಯಶ್ರೀ ಅವರು, 'ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್ ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ ಎಂದಿದ್ದಾಳೆ.

Lok Sabha Elections 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೊಮ್ಮಕ್ಕಳ ಭಾರಿ ಜಿದ್ದಾಜಿದ್ದಿ!

ನಾನು ನಿಮಗೆ ಉಚಿತ ಟಿಕೆಟ್‌ಗಳ ಹಾರವನ್ನು ಅರ್ಪಿಸುವುದಕ್ಕೆ ಸುಮಾರು ಒಂದೂವರೆ ತಿಂಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆನು. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ. ಈ ಹಾರವನ್ನು ನೀವು ಸ್ವೀಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾರವನ್ನು ಅರ್ಪಿಸಿದ್ದಾಳೆ. ಜೊತೆಗೆ, ಶಕ್ತಿ ಯೋಜನೆ ಜಾರಿಗೊಳಿಸ್ದಕ್ಕೆ ಧನ್ಯವಾದವನ್ನು ಅರ್ಪಿಸಿ ಆಶೀರ್ವಾದ ಪಡೆದಕೊಂಡಿದ್ದಾರೆ.

click me!