ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ, ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
ವಿಶೇಷ ವರದಿ
ಬೆಂಗಳೂರು (ಫೆ.10): ರಾಜ್ಯದಲ್ಲಿ (Karnataka) ಕೋವ್ಯಾಕ್ಸಿನ್ ಲಸಿಕೆಯ (Covaxin Vaccine) ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ (Childrens) ಕೋವಿಡ್ ಲಸಿಕೆ (Covid19 Vaccine ) ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ, ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್ (Booster Dose) ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
undefined
ಜನವರಿ 3ರಿಂದ 15-18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಆರಂಭಿಸಿದ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲು ಅನುಮತಿ ನೀಡಿತ್ತು. ಪ್ರಾರಂಭದಲ್ಲಿ ರಾಜ್ಯಾದ್ಯಂತ ಭಾರಿ ಉತ್ಸಾಹದಿಂದ ಮಕ್ಕಳ ಲಸಿಕೆ ಅಭಿಯಾನ ಆರಂಭಗೊಂಡಿತಾದರೂ ಎರಡನೇ ಡೋಸ್ ಪಡೆಯಲು ಮಕ್ಕಳು ಲಸಿಕಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಸುಮಾರು 8 ಲಕ್ಷ ಮಂದಿ ಮಕ್ಕಳು ಮೊದಲ ಡೋಸ್ ಪಡೆಯಲು ಬಾಕಿ ಇದ್ದಾರೆ.
ಜನವರಿ 3ರಿಂದ 12 ರೊಳಗೆ ಲಸಿಕೆ ಪಡೆದುಕೊಂಡ 17.64 ಲಕ್ಷ ಮಂದಿ ಮಕ್ಕಳು ಎರಡನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಆದರೆ ಫೆ.9ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕೇವಲ 7.10 ಲಕ್ಷ ಮಕ್ಕಳು ಮಾತ್ರ (ಶೇ. 40) ಎರಡನೇ ಡೋಸ್ ಪಡೆದಿದ್ದಾರೆ. ಕೆಲವು ಶಾಲೆಗಳಲ್ಲಿ ಒಂದು ಸುತ್ತಿನ ಎರಡನೇ ಡೋಸ್ ಲಸಿಕೆ ಅಭಿಯಾನ ನಡೆದಿದೆ. ಆದರೆ ಅಂದು ಲಸಿಕೆ ಪಡೆಯಲು ಸಾಧ್ಯವಾಗದವರು ಶಾಲೆ ಅಥವಾ ಮನೆಗೆ ಹತ್ತಿರದ ಲಸಿಕಾ ಕೇಂದ್ರಗಳಿಗೆ ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
Bharat Biotech: ಮಕ್ಕಳಿಗೆ ಕೋವ್ಯಾಕ್ಸಿನ್ ಬದಲು ಬೇರೆ ಲಸಿಕೆ ನೀಡಬೇಡಿ
ಕೇಂದ್ರದಿಂದ ಕೋವ್ಯಾಕ್ಸಿನ್ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಲಸಿಕಾ ಕೇಂದ್ರಗಳಲ್ಲಿ ಜನರು ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ದಿನಕ್ಕೆ 150 ಜನರಿಗೆ ನೀಡುತ್ತಿದ್ದ ಕೋವ್ಯಾಕ್ಸಿನ್ ಲಸಿಕೆ ಈಗ 100 ಜನರಿಗೆ ನೀಡುವಂತಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯ ಮುಂದಿರುವ 24*7 ಲಸಿಕಾ ಕೇಂದ್ರವೊಂದಕ್ಕೆಯೇ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಲಸಿಕೆ ಇದೆಯೇ ಎಂದು ಕೇಳಿಕೊಂಡು ಬಂದು ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ.
ಇಂದು ಬರುತ್ತೆ ಲಸಿಕೆ: ಅಧಿಕಾರಿಗಳು: ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳೇ ಕೋವ್ಯಾಕ್ಸಿನ್ ಲಸಿಕೆಯ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದು ಗುರುವಾರ ಲಸಿಕೆ ಬರುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೋವ್ಯಾಕ್ಸಿನ್ ಬಗೆಗಿನ ಮಹತ್ವದ ಅಂಶ: ‘ಭಾರತ್ ಬಯೋಟೆಕ್’ನ (Bharat Biotech) ಸ್ವದೇಶಿ ಉತ್ಪಾದಿತ ಕೋವಿಡ್ ಲಸಿಕೆ ‘ಕೋವ್ಯಾಕ್ಸಿನ್’ (*Covid 19 Vaccine, Covaxin), ರೋಗಲಕ್ಷಣ ಹೊಂದಿದ ಕೊರೋನಾ ಸೋಂಕಿತರ ಮೇಲೆ ಕೇವಲ ಶೇ.50ರಷ್ಟುಪರಿಣಾಮಕಾರಿಯಾಗಿ ಹೊರಹೊಮ್ಮಿದೆ ಎಂದು ‘ಲ್ಯಾನ್ಸೆಟ್’ (Lancet)ವೈದ್ಯಕೀಯ ನಿಯತಕಾಲಿಕೆಯ ಅಧ್ಯಯನ ಹೇಳಿದೆ. ಈ ಮುನ್ನ 3ನೇ ಹಂತದ ಪ್ರಯೋಗದ ಬಳಿಕ ಕೋವ್ಯಾಕ್ಸಿನ್ (Covaxin) ಶೇ.77.8ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿತ್ತು ಎಂದು ‘ಲ್ಯಾನ್ಸೆಟ್’ನಲ್ಲಿ ವರದಿಯಾಗಿತ್ತು.
ಆದರೆ ಈಗ ಕೋವ್ಯಾಕ್ಸಿನ್ ಎರಡೂ ಡೋಸ್ ಪಡೆದ ಲಸಿಕೆ ಪಡೆದ ದಿಲ್ಲಿ ಏಮ್ಸ್ ಆಸ್ಪತ್ರೆಯ ಸಿಬ್ಬಂದಿಯನ್ನು ‘ರಿಯಲ್ ಟೈಂ’ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೆ ರೋಗಲಕ್ಷಣ ಉಳ್ಳ ಸೋಂಕಿತರ ಮೇಲೆ ಲಸಿಕೆ ಶೇ.50ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ‘ಲ್ಯಾನ್ಸೆಟ್’ನಲ್ಲಿ ತಿಳಿಸಲಾಗಿದೆ. 23 ಸಾವಿರ ಏಮ್ಸ್ ಸಿಬ್ಬಂದಿಗೆ ಜನವರಿ-ಫೆಬ್ರವರಿಯಲ್ಲೇ 28 ದಿನಗಳ ಅಂತರದಲ್ಲಿ ಎರಡೂ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು.
Covid Vaccination : ಚಿಕ್ಕಬಳ್ಳಾಪುರದಲ್ಲಿ 65,648 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ
ಈ ಪೈಕಿ ಡೆಲ್ಟಾ ತಳಿ (Delta Varient) ಅಬ್ಬರ ಹೆಚ್ಚಿದ ಅವಧಿಯಾದ ಏ.15ರಿಂದ ಮೇ 15ರವರೆಗೆ 2714 ಸಿಬ್ಬಂದಿಯನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಯಿತು. ಈ ವೇಳೆ 1617 ಸಿಬ್ಬಂದಿಗೆ ರೋಗಲಕ್ಷಣವುಳ್ಳ ಕೊರೋನಾ ಅಂಟಿದ್ದು ಖಚಿತಪಟ್ಟಿತು. 1097 ಸಿಬ್ಬಂದಿಗೆ ಪರೀಕ್ಷೆಯಲ್ಲಿ ನೆಗೆಟಿವ್ ಬಂತು. ಇದರಿಂದಾಗಿ ರೋಗಲಕ್ಷಣವುಳ್ಳವರ ಮೇಲೆ ಕೋವ್ಯಾಕ್ಸಿನ್ ಶೇ.50ರಷ್ಟು ಪರಿಣಾಮ ಬೀರಿದೆ ಎಂದು ಸಾಬೀತಾಯಿತು ಎಂದು ಅಧ್ಯಯನ ವಿವರಿಸಿದೆ.