ಚೀತಾ ಭಾರತಕ್ಕೆ ಬಂದ ಖುಷಿ ಮಧ್ಯೆ ಬನ್ನೇರುಘಟ್ಟ‌ ಪಾರ್ಕ್ ನಲ್ಲಿ ಹುಲಿಗಳ ಸರಣಿ ಸಾವು!

By Suvarna News  |  First Published Sep 17, 2022, 8:17 PM IST

ನಶಿಸಿ ಹೋಗಿದ್ದ ಚೀತಾ ಸಂತತಿ‌ಯನ್ನು ಭಾರತಕ್ಕೆ ಬಂದಿರುವ ಖುಷಿ ಒಂದೆಡೆಯಾದರೆ, ಭಾರತದ ರಾಷ್ಟ್ರೀಯ ಪ್ರಾಣಿ ಭಾರತದಲ್ಲೇ ನಶಿಸುವ‌‌ ಕಡೆ ಮುಖ ಮಾಡುತ್ತಿದೆ. ಯಾಕೆಂದರೆ ಬನ್ನೇರುಘಟ್ಟ ಬಯಲಾಜಿಕ್‌‌ ಪಾರ್ಕ್ ಒಳಗಡೆ ಹುಲಿಗಳು ಸರಣಿ ಸಾವನ್ನಪ್ಪಿವೆ.


ವರದಿ : ಟಿ.ಮಂಜುನಾಥ್, ಹೆಬ್ಬಗೋಡಿ

ಆನೇಕಲ್ (ಸೆ.17) : ನಶಿಸಿ ಹೋಗಿದ್ದ ಚೀತಾ ಸಂತತಿ‌ಯನ್ನು ಭಾರತಕ್ಕೆ  ಮತ್ತೆ ಕರೆ‌ ತಂದಿರೋದು ಖುಷಿ ವಿಚಾರ,  ಆದರೆ‌‌ ಭಾರತದ ರಾಷ್ಟ್ರೀಯ ಪ್ರಾಣಿ ಭಾರತದಲ್ಲೇ ನಶಿಸುವ‌‌ ಕಡೆ ಮುಖ ಮಾಡುತ್ತಿದೆ ಎಂಬುದು ಅಷ್ಟೇ ದುಃಖದ ಸಂಗತಿ. ಇವುಗಳ ಸಂತತಿ ಉಳಿವಿಗೆ ವಿಶೇಷ ಕೇರ್ ನ ಅವಶ್ಯಕತೆ ಇದೆ. ಯಾಕೆಂದರೆ ಬನ್ನೇರುಘಟ್ಟ ಬಯಲಾಜಿಕ್‌‌ ಪಾರ್ಕ್ ಒಳಗಡೆ ಹುಲಿಗಳು ಸಾವನ್ನಪ್ಪಿವೆ. ಇಡೀ ದೇಶದಲ್ಲೀಗ ನಮೀಬಿಯಾ ದಿಂದ ಬಂದ ಚೀತಾಗಳದ್ದೇ ಮಾತು..! ಹೊಸ ಅತಿಥಿಗೆ ಬೇಕಾದ ನೈವೇದ್ಯ ಅನ್ನೋ ಹಾಗೆ ಚೀತಾಗಳಿಗೆ ಬದುಕಲು ಬೇಕಾದ ಎಲ್ಲಾ ಸವಲತ್ತುಗಳನ್ನು ಮಾಡಿಕೊಡಲಾಗಿದೆ, ಆದರೆ ವಿಪರ್ಯಾಸ ವಿಚಾರ ಅಂದ್ರೆ   ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ನಲ್ಲಿ ‌ಕಳೆದ ಮೂರ್ನಾಲ್ಕು ತಿಂಗಳಲ್ಲಿ ಮೂರು ಹುಲಿಗಳು ಸತ್ತಿದ್ದು, ಅರಣ್ಯ ಇಲಾಖೆ ಆಗಲಿ ಅಥವಾ   ಪಾರ್ಕಿನ ಸಿಬ್ಬಂದಿಯಾಗಲೀ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಉದ್ಯಾನವನ ಆಗಿದ್ದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್, ಒಂದು‌ ಸಮಯದಲ್ಲಿ 35‌‌ ಕ್ಕೂ ಹೆಚ್ಚು ಹುಲಿಗಳ ತಾಣವಾಗಿತ್ತು, ಆದರೆ ಈಗ ಅದರ ಸಂಖ್ಯೆ 14 ಕ್ಕೆ‌ ಇಳಿದಿದೆ. ಇಲ್ಲದಿರುವ ಸಂತತಿ ಭಾರತಕ್ಕೆ ತಂದು ಖುಷಿ ಪಡುತ್ತಿರುವ ಸಂದರ್ಭದಲ್ಲಿ ಇರುವ ಸಂತತಿ ಕಾಪಾಡುವ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ದುರಂತವೇ ಸರಿ. 

Tap to resize

Latest Videos

ಇದು ಆರಂಭ ಮಾತ್ರ, ದಕ್ಷಿಣ ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಬರಲಿದೆ 500 ಚೀತಾ!

 ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ನಲ್ಲೊ ಕಳೆದ‌ ಕೆಲವು ದಿನಗಳ‌ ಹಿಂದೆ ಸತತವಾಗಿ ಪ್ರಾಣಿಗಳ ಸರಣಿ ಸಾವು ಸಂಭವಿಸಿದೆ.‌ ಅದ್ರಲ್ಲೂ ಇ ಸಫಾರಿ ಮತ್ತು ಝೂ ನ ಆಕರ್ಷಣೆ ಆಗಿದ್ದ ಹುಲಿಗಳು ಕೊನೆಯುಸಿರೆಳೆದಿದ್ದು ವಿಚಿತ್ರ ವೈರಸ್ ಕಾಟದಿಂದ ಪ್ರಾಣ ತೆತ್ತಿವೆ. ಮೂರು ವರ್ಷದ ಕಿರಣ್, ಐದು ವರ್ಷದ ಶಿವು, ಇನ್ನೊಂದು ಹುಲಿಯೂ ಅಸು‌ನೀಗಿದ್ದು, ವಯಸ್ಸಿನ ಕಾರಣ ಮಿಥುನ್  ಕೂಡ ಸಣಕಲಾಗಿ ಸಾಯುವ ಹಂತಕ್ಕೆ ಬಂದಿದ್ದಾನೆ. ರಾಷ್ಟ್ರೀಯ ಪ್ರಾಣಿ ಹುಲಿ ಸಂರಕ್ಷಣೆಗೆ ಕೋಟ್ಯಾಂತರ ಹಣ ಖರ್ಚಾಗುತ್ತಿದ್ದರೂ ಹುಲಿಗಳ ಆರೋಗ್ಯ ಯಾಕೆ ಕ್ಷೀಣಿಸುತ್ತಿದೆ ಅನ್ನೋದು ಈಗ ಎದ್ದಿರುವ ಪ್ರಶ್ನೆ.

ನೈಸರ್ಗಿಕ ಈಜಕೊಳದಲ್ಲಿ ರಾಷ್ಟ್ರಪ್ರಾಣಿಯ ಸ್ವಚ್ಛಂದ ವಿಹಾರ: ಅಪರೂಪದ ವಿಡಿಯೋ ವೈರಲ್

 ಇಡೀ ಭಾರತದಲ್ಲಿ ಕಳೆದ ವರ್ಷದ ಸಾವಿರಕ್ಕೂ ಅಧಿಕ ಹುಲಿಗಳ ಸಾವಾಗಿದೆ, ಅದ್ರಲ್ಲಿ ಎಂಟು ನೂರಕ್ಕೂ ಹೆಚ್ವು ಹುಲಿಗಳನ್ನು ಬೇಟೆಯಾಡಿ ಕೊಂದಿದ್ದರೇ, ಆರೋಗ್ಯ ಸಮಸ್ಯೆ ಕಾರಣ ಉದ್ಯಾನವನದಲ್ಲಿ ನೂರಾರು ಹುಲಿಗಳು ಪ್ರಾಣ ತೆತ್ತಿವೆ.‌ ಕಳೆದ ವರ್ಷ ಕರ್ನಾಟಕದಲ್ಲಿಯೇ 150‌ಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿವೆ! ಹುಲಿ ಸಂರಕ್ಷಣೆಗೆ ಬಯಲಾಜಿಕಲ್ ಪಾರ್ಕ್ ಶ್ರೇಷ್ಠ ಅಂತ‌ ಬೀಗುತ್ತಿದ್ದ ಅಧಿಕಾರಿಗಳು ಈಗ ಸರಣಿ ಸಾವಿನ ಬಳಿಕ‌ ಯಾರೂ ಮಾತಾಡಲು ತಯಾರಿಲ್ಲ,‌ ಹುಲಿ ಸತ್ತ ಬಳಿಕ ಎಲ್ಲಾ ಬ್ಯಾರೆಕ್ ಗಳನ್ನೇನೋ‌ ಸ್ಯಾನಿಟೈಸ್ ಮಾಡಲಾಗುತ್ತಿದೆ‌ ಆದರೆ ಈಗಾಗಲೇ ಕ್ಯಾನ್ಸರ್ ಕಾರಣ ವೈರಸ್ ಹುಲಿಗಳ‌ ದೇಹ ಸೇರಿರುವ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ, ಹೀಗಾಗಿ ಈಗಿರುವ ಎಲ್ಲಾ ‌14‌ ಹುಲಿಗಳ ಸಂಪೂರ್ಣ ಪರೀಕ್ಷೆಯಾಗಬೇಕೆಂಬುದು  ಪ್ರಾಣಿ ಪ್ರಿಯರ ಆಪೇಕ್ಷೆಯಾಗಿದೆ.

click me!