Breaking: ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದೂಡಿಕೆ

By Suvarna NewsFirst Published Mar 22, 2020, 5:36 PM IST
Highlights

ಸಾರಿಗೆ ಬಸ್ ಬಂದ್ ಹಿನ್ನೆಲೆಯಲ್ಲಿ ತೀವ್ರ ಗೊಂದಲದಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನ ರದ್ದುಪಡಿಸಿದೆ. ಹಾಗಾದ್ರೆ ಯಾವಾಗ ನಡೆಯುತ್ತೆ?

ಬೆಂಗಳೂರು, (ಮಾ.22): ನಾಳೆ ಅಂದ್ರೆ ಸೋಮವಾರ ನಡೆಯಬೇಕಿದ್ದ ಕೊನೆಯ ಪಿಯುಸಿ ಪರೀಕ್ಷೆಯನ್ನ ಮುಂದೂಡಲಾಗಿದೆ.

ಮಾರ್ಚ್ 23ರಂದು ಕೊನೆಯ ಇಂಗ್ಲೀಷ್ ಪರೀಕ್ಷೆ ನಡೆಯಬೇಕಿತ್ತು. ಆದ್ರೆ, ಅದನ್ನು ರಾಜ್ಯ ಶಿಕ್ಷಣ ಇಲಾಖೆ ಮುಂದೂಡಿ ಇಂದು (ಭಾನುವಾರ) ಆದೇಶ ಹೊರಡಿಸಿದೆ.

ಸಾರಿಗೆ ಬಂದ್: ಸಚಿವರೇ ವಿದ್ಯಾರ್ಥಿಗಳು PU ಎಕ್ಸಾಂಗೆ ಹೋಗುವುದೇಗೆ..?

ಮಾರ್ಚ್ 31ರ ನಂತರ ಬಾಕಿ ಇರುವ ಈ ಇಂಗ್ಲೀಷ್ ಪರೀಕ್ಷೆಯ ದಿನಾಂಕವನ್ನ ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

 ರಾಜ್ಯಾದಾದ್ಯಂತ ಸಾರಿಗೆ ಬಸ್ ಬಂದ್ ಆಗಲಿದ್ದು,  ಸೋಮವಾರ ನಡೆಯುವ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದರು. ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. 

ಸಚಿವರುಗಳು ತಲೆಗೊಂದು ಹೇಳಿಕೆ ಪಿಯುಸಿ ವಿದ್ಯಾರ್ಥಿಗಳಿಗೆ ತೀವ್ರ ಗೊಂದಲ ಸೃಷ್ಟಿಸಿತ್ತು. ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಪಿಯು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರವಾಗತ್ತಿತ್ತು. ಬಳಿಕ ಎಚ್ಚೇತ್ತ ಸುರೇಶ್ ಕುಮಾರ್ ಅವರು ಕೊನೆಗೆ ಪರೀಕ್ಷೆಯನ್ನೇ ಮುಂದೂಡುವ ಅಂತಿಮ ಕ್ರಮಕೈಗೊಂಡರು.

click me!