
ಬೆಂಗಳೂರು, (ಮಾ.22): ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ. ಇನ್ನೇನು ಒಂದೇ ಪರೀಕ್ಷೆ ಬಾಕಿ ಇದೆ. ಅದು ಸೋಮವಾರ ನಡೆಯಲಿದೆ.
"
ಆದ್ರೆ, ಮತ್ತೊಂದೆಡೆ 9 ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾಗಾದ್ರೆ, ಈ ಒಂಭತ್ತು ಜಿಲ್ಲೆಗಳ ಪಿಯುಸಿ ವಿದ್ಯಾರ್ಥಿಗಳು ಏನ್ಮಾಡ್ಬೇಕು?.
Breaking: ಕರ್ನಾಟಕದ ಈ 9 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ
ತರಾತುರಿಯಲ್ಲಿ ಈ ರೀತಿ ತೀರ್ಮಾನ ಕೈಗೊಂಡರೇ ಸಾರಿಗೆ ಬಸ್‌ಗಳನ್ನೇ ಅವಲಂಬಿಸುರುವ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಲಿದೆ. ರಾಜ್ಯದ ಸಚಿವರುಗಳು ಒಂದೊಂದು ತೀರ್ಮಾನ ತೆಗೆದುಕೊಂಡು ವಿದ್ಯಾರ್ಥಿಗಳ ಜತೆ ಆಟ ಆಡುತ್ತಿದ್ದಾರಾ..? ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿರುವ ಹೀಗೇಕೆ ತೆಪ್ಪಗೆ ಕೂತಿದ್ದಾರೆ.
ಸಾರಿಗೆ ಬಂದ್ ಮಾಡುವುದರಿಂದ ಗ್ರಾಮೀಣ ಭಾಗದ ಪಿಯು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು. ಇದಕ್ಕೆ ಯಾವ ಸಚಿವರು ಉತ್ತರಿಸುತ್ತಾರೆ.
ಸಚಿವರುಗಳ ನಡುವಿನ ಜಟಾಪಟಿಯಿಂದಾಗಿ ಪಿಯುಸಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಬಸ್ ಇರುತ್ತೋ ಇಲ್ಲವೋ ಎನ್ನುವ ಭಯದಲ್ಲಿ ಇದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವುದೇಗೆ..? ಎಕ್ಸಾಂ ಸೆಂಟರ್‌ಗೆ ಬರೋದ್ಹೇಗೆ..? ಸರ್ಕಾರಿ ಶಾಲೆ ಓದುತ್ತಿರುವ ಬಡ ಪರೀಕ್ಷಾರ್ಥಿಗಳು ಏನ್ಮಾಡ್ಬೇಕು?
ಪಿಯು ವಿದ್ಯಾರ್ಥಿಗಳಿ ಭವಿಷ್ಯದಲ್ಲಿ ಆಟ ಆಡುವುದನ್ನ ಬಿಟ್ಟು, ಈ ಬಗ್ಗೆ ಬೇಗ ಅಂತಿಮ ನಿರ್ಧಾರವನ್ನ ಸರ್ಕಾರ ಪ್ರಕಟಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ