
ಕಲಬುರಗಿ (ಜೂ. 08): ಶಾಲೆಗಳ ಪುನರ್ ಆರಂಭದ ಬಗ್ಗೆ ಇಂದಿಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಾಲಾ ದಿನಗಳೆಷ್ಟು ದೊರಕಲಿವೆಯೋ, ತರಗತಿ ಹೇಗೆ ನಡೆಸಬೇಕು, ಬೋಧನೆ ಕ್ರಮ ಯಾವ ರೀತಿ ಇದ್ದರೆ ಪರಿಣಾಮಕಾರಿ? ಸರತಿಯಂತೆ ತರಗತಿ ನಡೆಸಬೇಕೆ? ಎಂಬಿತ್ಯಾದಿ ವಿಚಾರಗಳಲ್ಲಿ ಚರ್ಚೆಗಳು ನಡೆದಿವೆಯೇ ವಿನಹಃ ಯಾವ ಅಂಶಗಳಲ್ಲಿಯೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದರು.
ಸೌಧಕ್ಕೆ ಹೊರಟ ಸುರೇಶ್ ಕುಮಾರ್ ತಡೆದು ನಿಲ್ಲಿಸಿದ ಯಂಗ್ ಫ್ರೆಂಡ್!
1ರಿಂದ 10ನೇ ತರಗತಿಯ ಪಠ್ಯಕ್ರಮದಲ್ಲಿನ ಸೂಕ್ತ ಬದಲಾವಣೆ ವಿಚಾರ ಮತ್ತು ಮುಂದಿನ ಶೈಕ್ಷಣಿಕ ಚಟುವಟಿಕೆಗಳ ರೂಪುರೇಷೆ ಬಗ್ಗೆ ಡಿಎಸ್‌ಇಆರ್‌ಟಿ ಈಗಾಗಲೇ ಅಧ್ಯಯನ ನಡೆಸುತ್ತಿದೆ. ಶಾಲೆ ಪುನರ್ ಆರಂಭಿಸುವ ಕುರಿತು ಪೋಷಕರು ಮತ್ತು ಸ್ಟೇಕ್ ಹೋಲ್ಡರ್ಸ್ಗಳ ಅಭಿಪ್ರಾಯ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದು, ಆನ್‌ಲೈನ್ ಬೋಧನೆ ಬಗ್ಗೆ ಶಿಕ್ಷಣ ಇಲಾಖೆ ಸಮ್ಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ