
ಗದಗ (ಜು.8) : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳ ಗುಂಪು ದಾಳಿ ಮಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹಿರೇಬಜಾರ್ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಶಿವಾಜಿ ಪೇಟೆಯ ಆದಿ ಪವಾರ್ ಗಾಯಗೊಂಡ (8) ಬಾಲಕ. ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿರುವ ಬೀದಿನಾಯಿಗಳು. ಬಾಲಕನ ಕಾಲು ಬೆನ್ನಿನ ಭಾಗಕ್ಕೆ ಬಲವಾಗಿ ಕಚ್ಚಿ ಗಾಯಗೊಳಿಸಿರುವ ಶ್ವಾನಗಳು ಬಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಂತೆ ಮೇಲೆರಗಿ ದಾಳಿ ಮಾಡಿರುವ ಶ್ವಾನಗಳು. ಈ ವೇಳೆ ನಾಯಿಗಳು ಜೋರಾಗಿ ಬೋಗಳುತ್ತಿರುವ ಶಬ್ದ ಕೇಳಿ ಬಂದ ಸ್ಥಳೀಯರು. ತಕ್ಷಣ ಬೀದಿನಾಯಿಗಳ ಗುಂಪುನ್ನು ಓಡಿಸಿ ಬಾಲಕನ ರಕ್ಷಣೆ ಮಾಡಿದ ಸ್ಥಳೀಯರು. ಕೈ, ಬೆನ್ನಿನ ಭಾಗಕ್ಕೆ ಕಚ್ಚಿರುವುದರಿಂದ ತೀವ್ರವಾಗಿ ಗಾಯಗೊಂಡಿರುವ ಬಾಲಕ. ಗಾಯಾಳು ಬಾಲಕನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ ಸ್ಥಳೀಯರು.
ಬೀದಿನಾಯಿ ಆರೈಕೆ ಮಾಡುತ್ತಿದ್ದ ಶ್ವಾನ ಪ್ರೇಮಿ ರೇಬಿಸ್ ಕಾಯಿಲೆಗೆ ಬಲಿ
ಬೀದಿನಾಯಿಗಳು ಬಾಲಕನ ಮೇಲೆ ಎರಗಿ ದಾಳಿ ಮಾಡಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆಯೂ ಮಕ್ಕಳು, ದೊಡ್ಡವರೆನ್ನದೇ ದಾಳಿ ಮಾಡಿವೆ. ಇದೀಗ ಬಾಲಕನ ಮೇಲೆ ನಡೆದಿರುವ ದಾಳಿಯಿಂದಾಗಿ ಬಾಲಕರು ಶಾಲೆಗೆ ಹೋಗಲು ಹೆದರುವಂತಾಗಿದೆ. ಮುಖ್ಯರಸ್ತೆಯಲ್ಲೇ ಬೀದಿನಾಯಿಗಳು ಗುಂಪುಗುಂಪಾಗಿ ತಿರುಗಾಡುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ