ಕರಾವಳಿ, ಮಲೆನಾಡಲ್ಲಿ ಮತ್ತೆ ಸ್ಯಾಟಲೈಟ್‌ ಫೋನ್‌ ಸದ್ದು!

By Kannadaprabha NewsFirst Published Oct 9, 2021, 8:16 AM IST
Highlights

* ಕರಾವಳಿ, ಮಲೆನಾಡಲ್ಲಿ ಮತ್ತೆ ಸ್ಯಾಟಲೈಟ್‌ ಫೋನ್‌ ಸದ್ದು

* ವಾರದ ಹಿಂದೆ ಐದು ಕಡೆ ಸ್ಯಾಟಲೈಟ್‌ ಫೋನ್‌ ಬಳಸಿ ಕರೆ

* ಕೇಂದ್ರ ಸರ್ಕಾರದ ಹೈಅಲರ್ಟ್‌ ನಡುವೆಯೂ ಕರೆ ಸಕ್ರಿಯ

* ದಕ್ಷಿಣ ಕನ್ನಡದ ಮೂಡುಬಿದಿರೆ, ಮುಡಿಪು, ಚಿಕ್ಕಮಗಳೂರಿನ ಎರಡು ಕಡೆ

* ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ

ಮಂಗಳೂರು(ಅ.09): ರಾಜ್ಯದ ಕರಾವಳಿ(Coastal Karnataka), ಮಲೆನಾಡು(Malnad) ಭಾಗದಲ್ಲಿ ಹೈ ಅಲರ್ಟ್‌ ನಡುವೆಯೇ ಮತ್ತೆ ಸ್ಯಾಟಲೈಟ್‌ ಫೋನ್‌(satellite Phone) ರಿಂಗಣಿಸಿದೆ. ಈ ಭಾಗದ ಐದಕ್ಕೂ ಹೆಚ್ಚು ಕಡೆ ಸ್ಯಾಟಲೈಟ್‌ ಫೋನ್‌ ಕರೆ ಸಕ್ರಿಯ ಆಗಿರುವುದು ಬೆಳಕಿಗೆ ಬಂದಿದೆ. ದೇಶಾದ್ಯಂತ ಉಗ್ರರ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ವಿಭಾಗ(Intelligence Department) ಈಗಾಗಲೇ ಸ್ಯಾಟಲೈಟ್‌ ಫೋನ್‌ ಕುರಿತು ಎಚ್ಚರಿಕೆ ನೀಡಿದ್ದು, ಹೈಅಲರ್ಟ್‌(High Alert) ಆಗಿರುವಂತೆ ಸೂಚಿಸಿದೆ.

ದೇಶದಲ್ಲಿ ಉಪಗ್ರಹ ಇಂಟರ್ನೆಟ್‌ ಆರಂಭಕ್ಕೆ ಶ್ರೀಮಂತರ ಪೈಪೋಟಿ!

ರಾಜ್ಯ ಕರಾವಳಿ ಹಾಗೂ ಮಲೆನಾಡು(Malnad) ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಮೊದಲೇ ಮಾಹಿತಿ ಕಲೆಹಾಕಿತ್ತು. ಇಲ್ಲಿಂದ ಪದೇ ಪದೆ ಸ್ಯಾಟಲೈಟ್‌ ಫೋನ್‌ ಕಾರ್ಯಾಚರಿಸುತ್ತಿರುವುದು ಹಿಂದೆಯೇ ಬೆಳಕಿಗೆ ಬಂದಿತ್ತು. ಇದೀಗ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಮೂಡುಬಿದಿರೆ ಮತ್ತು ಮುಡಿಪು, ಚಿಕ್ಕಮಗಳೂರಿನ(Chikkamagaluru) ಎರಡು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಅರಣ್ಯ ಪ್ರದೇಶದಲ್ಲಿ ಒಂದು ವಾರದ ಹಿಂದೆ ಸ್ಯಾಟಲೈಟ್‌ ಫೋನ್‌ ಆ್ಯಕ್ಟಿವ್‌ ಆಗಿರುವ ಮಾಹಿತಿ ಲಭಿಸಿದೆ.

3 ಬಾರಿ:

ಕೇಂದ್ರ ಗುಪ್ತಚರ ವಿಭಾಗ ಒಂದು ವರ್ಷದಿಂದ ಈ ಬಗ್ಗೆ ನಿಗಾ ಇರಿಸಿದ್ದು, ಒಂದೇ ವರ್ಷದಲ್ಲಿ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿ. ಈ ವಿಚಾರ ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿತ್ತು. ಗೃಹ ಸಚಿವರು ಸ್ಯಾಟಲೈಟ್‌ ಫೋನ್‌ ಕರೆ ಬಗ್ಗೆ ಸದನದಲ್ಲಿ ಮಾತನಾಡಿದ್ದರು.

ರಾಜ್ಯದಲ್ಲಿ ಈ ವರ್ಷ 220 ಸಲ ಸ್ಯಾಟಲೈಟ್ ಫೋನ್ ಬಳಸಿ ಕರೆ!

ಹೈಅಲರ್ಟ್‌ ನಡುವೆಯೂ ರಾಜ್ಯದಲ್ಲಿ ಸ್ಯಾಟಲೈಟ್‌ ಫೋನ್‌ಗಳು ಮತ್ತೆ ಆ್ಯಕ್ಟಿವ್‌ ಆಗಿರುವ ಬಗ್ಗೆ ಗುಪ್ತಚರ ವಿಭಾಗ ತನಿಖೆ ಚುರುಕುಗೊಳಿಸಿದೆ. ರಾಜ್ಯದ ಐದು ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆಯಾಗಿದೆ. ಸ್ಯಾಟಲೈಟ್‌ ಫೋನ್‌ ಮೂಲಕ ಅಪರಿಚಿತರು ಸಂಪರ್ಕ ಸಾಧಿಸುತ್ತಿದ್ದು, ಯಾರೊಂದಿಗೆ, ಯಾರಾರ‍ಯರು ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಇನ್ನೂ ನಿಗೂಢವಾಗಿಯೇ ಇದೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಯಾಟಲೈಟ್‌ ಫೋನ್‌ಗಳು ಸಕ್ರಿಯ ಆಗಿರುವ ಕುರಿತು ಕೇಂದ್ರದ ಗುಪ್ತಚರ ವರದಿಯನ್ನು ಆಧರಿಸಿ ‘ಕನ್ನಡಪ್ರಭ’ ಸೆ.16ರಂದು ವರದಿ ಪ್ರಕಟಿಸಿತ್ತು.

click me!