ವಿಶ್ವವಿಖ್ಯಾತ ಹಂಪಿಯಲ್ಲಿವೆ ಸಾಸಿವೆ ಕಾಳು, ಕಡಲೆ ಕಾಳು ಗಣಪತಿ: ಆದರೆ ಮೂರ್ತಿಗೆ ಪೂಜೆ ಭಾಗ್ಯವಿಲ್ಲ, ಏಕೆ?

By Govindaraj SFirst Published Sep 21, 2023, 10:18 AM IST
Highlights

ಗಣೇಶನ ಹಬವೆಂದ್ರೇ ಇಡೀ ದೇಶದ್ಯಾಂತ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಚಿಕ್ಕ ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ‌ ಪೂಜೆ ಮಾಡಲಾಗ್ತದೆ. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ/ ವಿಜಯನಗರ (ಸೆ.21): ಗಣೇಶನ ಹಬವೆಂದ್ರೇ ಇಡೀ ದೇಶದ್ಯಾಂತ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಚಿಕ್ಕ ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ‌ ಪೂಜೆ ಮಾಡಲಾಗ್ತದೆ. ಆದ್ರೇ ವಿಶ್ವ ವಿಖ್ಯಾತ ಹಂಪಿಯಲ್ಲಿರುವ ಗಣೇಶನ ಈ ಬೃಹತ್ ಕಲ್ಲಿನ ಎರಡು ಮೂರ್ತಿಗಳಿಗೆ ಮಾತ್ರ ಹಬ್ಬವಿಲ್ಲ.  ಪೂಜಾ ಭಾಗ್ಯವಿಲ್ಲ.  ಈ ಮೂರ್ತಿಗಳನ್ನು ನೋಡಲು ಮಾತ್ರ ದೇಶವಿದೇಶಗಳಿಂದ ಜನರು ಬರುತ್ತಾರೆ. ಆದ್ರೇ ವಿಶ್ವಪರಂಪರೆ  ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿರುವ ಈ ಮೂರ್ತಿಗಳ ಪೂಜೆ ಮಾತ್ರ ಪೂಜೆಗೆ ಅವಕಾಶವಿಲ್ಲ..‌

ಸಾಸಿವೆ ಕಾಳು ಗಣಪ, ಕಡೆಲೆ ಕಾಳು ಗಣಪನ ಮೂರ್ತಿಗಳಿಗೆ ಪೂಜೆ ಮಾಡೋದಿಲ್ಲ: ನಾಡಿನೆಲ್ಲಡೆ ಗಣೇಶ ಚತುರ್ಥಿಯ ಸಂಭ್ರಮಾಚರಣೆ ಮನೆ ಮಾಡಿದೆ.. ಗಲ್ಲಿಗಲ್ಲಿಯಲ್ಲಿ ಗಣಪನ ಹರ್ಷೋದ್ಗಾರ, ಪೂಜೆ ಜೈಕಾರ ಜೋರಾಗಿದೆ. ಆದ್ರೇ ಏನು‌ ಮಾಡೋದು ತೆರೆದ ಮ್ಯೂಸಿಯಂ ಎಂದು ಹೆಸರುವಾಸಿಯಾಗಿರುವ ಹಂಪಿಯ ಈ ಎರಡು ಬೃಹತ್ ಎತ್ತರದ ಗಣೇಶನ ವಿಗ್ರಹಗಳು ಮಾತ್ರ ಪೂಜೆ ನಡೆಯುತ್ತಿಲ್ಲ. ಹೌದು, ದಿನಬೆಳಗಾದ್ರೆ ಹಂಪಿಗೆ ಬರುವ ಪ್ರವಾಸಿಗರು ತದೇಕಚಿತ್ತದಿಂದ ಹಂಪಿಯ ಏಕಶಿಲೆಯಲ್ಲಿರೋ ಕಡಲೆಕಾಳು ಹಾಗೂ ಸಾಸಿವೆಕಾಳು ಗಣೇಶ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. 

ಬಿಜೆಪಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ನೆನಪಾಗಿದೆ: ಮಹದೇವಪ್ಪ

ದೇಶವಿದೇಶಗಳಿಂದ ಬರೋ‌ ಜನರು ಪೋಟೋ ತೆಗೆಸಿಕೊಂಡು ಸಂಭ್ರಮಿಸ್ತಾರೆ. ಆದ್ರೇ ವಿಶ್ವಪರಂಪರೆ ಪಟ್ಟಿಯಲ್ಲಿರುವ ಗಣೇಶನ ಸ್ಮಾರಕಗಳಿಗೆ ಪೂಜೆ ಮಾಡಲು  ನಿಷೇಧವಿದೆ. ಹೀಗಾಗಿ ಈ ವಿಗ್ರಹಗಳನ್ನು ಇಲ್ಲಿಗೆ ಬರೋ ಪ್ರವಾಸಿಗರು ಸ್ಮಾರಕದ ರೀತಿ ನೋಡುತ್ತಾರೆ ವಿನಃ ಕೈಮುಗಿಯೋದು ದೇವರೆಂದು ಪೂಜೆ ಮಾಡೋದಿಲ್ಲ..ಇನ್ನೂ  ಈ ಸ್ಮಾರಕಗಳು ಮುಕ್ಕಾದ ( ಬಿರುಕು ಅಥವಾ ಭಿನ್ನಾ)  ಕಾರಣ ಪೂಜೆ ಮಾಡಬಾರದೆನ್ನು ನಂಬಿಕೆಯಿದೆ ಎನ್ನುತ್ತಾರೆ  ನಿವೃತ್ತ ಪ್ರಾಧ್ಯಾಪಕರಾದ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ.

ಹಂಪಿಯ ಐಕಾನ್ ನಂತಿರೋ ಮೂರ್ತಿಗಳು: ಹಂಪಿಯ ಈ ಪ್ರಸಿದ್ಧ ಗಣೇಶನ ಮೂರ್ತಿಗಳು ಇರುವುದು ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ. ಹೇಮಕೂಟದ ಬೆಟ್ಟದ ಕೆಳಭಾಗದಲ್ಲಿರುವ ಸಾಸಿವೆ ಕಾಳು ಗಣೇಶ ಮೂರ್ತಿ 8 ಅಡಿ ಉದ್ದವಿದೆ. ಪುರಾಣದ ಪ್ರಕಾರ ಗಣಪ ಮಿತಿಮೀರಿ ತಿಂದಿದ್ದರಿಂದ ತನ್ನ ಹೊಟ್ಟೆ ಒಡೆಯುವಂತಾಯಿತು. ಆ ಸಂದರ್ಭದಲ್ಲಿ ಅದನ್ನು ತಡೆಯಲು ಹೊಟ್ಟೆ ಅಡ್ಡಲಾಗಿ ಸರ್ಪವನ್ನು ಸುತ್ತಿಕೊಂಡನೆಂಬ ಪ್ರತೀತಿಯಿದೆ. ಇನ್ನೂ ಈ ವಿಗ್ರಹದಲ್ಲಿ ಬಲಗೈ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು. ಈ ಮೂರ್ತಿಯನ್ನು ಕ್ರಿ.ಶ.1506ರಲ್ಲಿ ಚಂದ್ರಗಿರಿಯ ವ್ಯಾಪಾರಿಯೊಬ್ಬರು ವಿಜಯನಗರ ಸಾಮ್ರಾಜ್ಯದ ದೊರೆಗಳಿಗಾಗಿ ನಿರ್ಮಿಸಿದ ಎನ್ನುವ ಮಾಹಿತಿಯಿದೆ.

ಮೆಡಿಕಲ್ ಸೇರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ನೀಟ್ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಿಗೂ ಕೌನ್ಸಲಿಂಗ್‌ಗೆ ಅವಕಾಶ!

ದಕ್ಷಿಣ ಕಾಶಿ ಹಂಪಿಯ ಎರಡು ಮೂರ್ತಿಗಳಿಗೆ ಪೂಜೆ ಸಲ್ಲೋಲ್ಲ: ಇನ್ನೂ ಕಡಲೆಕಾಳು ಗಣೇಶನ ಮೂರ್ತಿ ಏಕಶಿಲೆಯಾಗಿದ್ದು, 18 ಅಡಿ ಎತ್ತರವಿದೆ. ನೋಡಲು ಬಲು ಸೊಗಸು ಈ ಗಣೇಶನ ಮೂರ್ತಿ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವಿಶೇಷವಾಗಿ ಪೂಜೆ ಮಾಡಲಾಗ್ತಿತ್ತು ಹಂಪಿಯ ಈ ಎರಡು ಗಣೇಶನ ಮೂರ್ತಿಗಳು ಇದೀಗ  ಪೂಜೆ ಭಾಗ್ಯವಿಲ್ಲ. ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಹಂಪಿಯಾಗಿ ಮಾರ್ಪಾಟಾಯಿತು. ಈ ಸಂದರ್ಭದಲ್ಲಿ ಹಲವು ದೇವಸ್ಥಾನಗಳ ಗರ್ಭ ಗುಡಿಯಲ್ಲಿರುವ ಮೂರ್ತಿಗಳು ನಾಶವಾದವು. ಗಣೇಶನ ಏಕಶಿಲಾ ಮೂರ್ತಿಗಳು ಭಿನ್ನವಾದವು. ( ಮುಕ್ಕಾದವು)  ಪುರಾತತ್ವ ಇಲಾಖೆಯವರು ಪೂಜೆಗೆ ಒತ್ತು ನೀಡದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇದರಿಂದಾಗಿ ಹಂಪಿಯ ಗಣೇಶದ್ವಯರಿಗೆ ದರ್ಶನ ಭಾಗ್ಯವಿದೆ, ಪೂಜೆ ನಡೆಯೋದಿಲ್ಲ.

click me!