ನಾಡಹಬ್ಬ ಮೈಸೂರು ದಸರಾ 2023ಗೆ ಚಾಲನೆ ನೀಡಿದ ಹಂಸಲೇಖ: ಕಾಂಗ್ರೆಸ್‌ ನಾಯಕರ ಗುಣಗಾನ ಮಾಡಿದ ಉದ್ಘಾಟಕ

By Sathish Kumar KH  |  First Published Oct 15, 2023, 11:19 AM IST

ವಿಶ್ವವಿಖ್ಯಾತ 414ನೇ ಮೈಸೂರು ದಸರಾ  ಮಹೋತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.


ಮೈಸೂರು (ಅ.15):  ವಿಶ್ವವಿಖ್ಯಾತ 414ನೇ ಮೈಸೂರು ದಸರಾ  ಮಹೋತ್ಸವಕ್ಕೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು ಸರ್ಕಾರದ ಮುಖ್ಯಸ್ಥರಾದ ಸಿಎಂ ಸಿದದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಗುಣಗಾನ ಮಾಡಿದ್ದಾರೆ.

ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭಾನುವಾರ ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ  ಚಾಲನೆ ನೀಡಿ ಮಾತನಾಡಿದರು. ಯಾರು ಯಾರನ್ನು ನೆನೆಯಾನಾ ? ಯಾರು ಯಾರನ್ನು ನೆನೆಯಲಿ. ಕನ್ನಡ ದೀಪ, ಸಮೃದ್ದಿ, ಅಭಿವೃದ್ಧಿ, ಶಾಂತಿ, ಸಮೃದ್ದಿಯ ನನ್ನ ಮಾತಿನ ಪರಿವಿಧಿ. ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು. ಐದಶ ಕರ್ನಾಟಕದ ಏಕೀಕರಣಕ ಈಗ. ಐದಶ ಅಂದರೆ 50 ಆಗಿದೆ.

Tap to resize

Latest Videos

ಬೆಂಗಳೂರು ಜನರಿಗೆ ಭಾನುವಾರದ ಶಾಕ್‌ : ಸತತ ಮೂರನೇ ದಿನವೂ ವಿದ್ಯುತ್‌ ಕಡಿತ

ಕರ್ನಾಟಕ ಏಕೀಕರಣಕ್ಕೆ 50 ತುಂಬಿದೆ. ಕರ್ನಾಟಕ ಐದಶ ಅಂತಾ ಕರೆಯೋಣ. ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷ ತುಂಬಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಇದು ಬಹಳ ಬೆಲೆ ಬಾಳುವಂತಹದ್ದಾಗಿದೆ. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹಾಗೂ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಯಾರು ಕಾರಣ ಯಾರನ್ನು ಮೊದಲು ನೆನೆಯಲಿ. ಅಪ್ಪ ಗೋವಿಂದರಾಜ ಮಾನೆ, ಅಮ್ಮ ರಾಜಮ್ಮ, ಗುರು ನೀಲಕಂಠ ಅಥವಾ ನಾದ, ನಾಟಕರಂಗ, ಸರ್ಕಾರ ಅಥವಾ ಸಂವಿಧಾನವನ್ನೇ ಎಂದು ಮಾತನಾಡಿದ್ದಾರೆ.

ದಲಿತರು, ಅಲ್ಪಸಂಖ್ಯಾತರ ಕಡೆಗಣನೆ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರ್ಪಡೆ

ಮುಂದುವರೆದು ನಾನು ಯಾರಾರನ್ನು ನೆನೆಯಲಿ, ಸರ್ಕಾರ ಅಥವಾ ಸಂವಿಧಾನವನ್ನೇ? ಸಂವಿಧಾನದ ದನಿಯಾದ ಸಿದ್ದರಾಮಯ್ಯ ಅವರನ್ನೇ? ಉಪ ಮುಖ್ಯಮಂತ್ರಿ ಪ್ರಬಲ ಶಕ್ತಿ ಸಂಘಟಕ ಡಿ.ಕೆ. ಶಿವಕುಮಾರ್ ಅವರನ್ನೇ? ನನ್ನ ಹೆಸರು ಸೂಚಿಸಿದ ಡಾ.ಎಚ್.ಸಿ. ಮಹದೇವಪ್ಪ ಅವರನ್ನೇ? ನನ್ನ ಹೆಂಡತಿ, ಮಕ್ಕಳು, ಅಭಿಮಾನಿಗಳನ್ನೇ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಿ. ನಾವು ಸಿನಿಮಾದವರು. ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಮಾತನಾಡುತ್ತೇವೆ. ಒಂದು ಥ್ಯಾಕ್ಸ್ ಹೇಳಿ ಮುಗಿಸಬಹುದಿತ್ತು. ಆದರೆ ಎಲ್ಲರನ್ನೂ ನೆನೆಯುವ ನಿಟ್ಟಿನಲ್ಲಿ‌ ಈಗ ಮಾತನಾಡಿದೆ. ಡಿಸಿಎಂ ಡಿಕೆ.ಶಿವಕುಮಾರ್ ಸಾಮಾನ್ಯ ವ್ಯಕ್ತಿಯಿಂದ ದಸರಾ ಉದ್ಘಾಟನೆ ಆಗಬೇಕು ಎಂದರು. ಅದಕ್ಕಾಗಿ ಸಿಎಂ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಶ್ಲಾಘನೆ ಮಾಡಿದರು.

click me!