ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ನಾಗನಾಥೇಶ್ವರ ದೇವಾಲಯದ ತೇರು ಧರೆಗೆ!

By Ravi Janekal  |  First Published Oct 15, 2023, 10:59 AM IST

ನಗರದಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬೇಗೂರಿನ ನಾಗನಾಥೇಶ್ವರ ಸ್ವಾಮಿ ದೇವಾಲಯದ 60 ಅಡಿ ಎತ್ತರದ ತೇರು ಧರೆಗುರುಳಿದ ದುರ್ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.


ಬೆಂಗಳೂರು (ಅ.15): ನಗರದಲ್ಲಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬೇಗೂರಿನ ನಾಗನಾಥೇಶ್ವರ ಸ್ವಾಮಿ ದೇವಾಲಯದ 60 ಅಡಿ ಎತ್ತರದ ತೇರು ಧರೆಗುರುಳಿದ ದುರ್ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಸುಮಾರು 13 ಶತಮಾನದಲ್ಲಿ ಚೋಳರಿಂದ ನಿರ್ಮಾಣವಾಗಿರುವ ದೇವಾಲಯ. ಪಂಚಲಿಂಗೇಶ್ವರ ದೇವಾಲಯವೆಂದೇ ಖ್ಯಾತಿ ಪಡೆದಿರುವ ಪುರಾತನ ದೇವಾಲಯವಿದು. ದೇವಾಲಯದ ತೇರು ಪುರಾತನವಾದುದು. ಮಳೆ ಗಾಳಿಯಿಂದ ಸುರಕ್ಷಿತವಾಗಿರಲೆಂದು ಶೆಡ್ ನೊಳಗೆ ನಿಲ್ಲಿಸಲಾಗಿತ್ತು. ಆದರೆ ಭಾರೀ ಮಳೆಗೆ ಶೆಡ್ ಕುಸಿದು ತೇರಿನ ಮೇಲೆ ಬಿದ್ದು, ತೇರಿನ ಗೋಪುರ ಮತ್ತು ಪಕ್ಕದ ಮರಗಳು ಮುರಿದುಬಿದ್ದಿವೆ.

Tap to resize

Latest Videos

undefined

ಪ್ರತಿವರ್ಷ ಇಲ್ಲಿ ಕಾರ್ತಿಕ ಮಾಸದಲ್ಲಿ ರಥೋತ್ಸವ ನಡೆಯುತಿತ್ತು. ರಥೋತ್ಸವ ಇನ್ನು ಕೆಲವೇ ದಿನಗಳು ಇರುವಾಗಲೇ ಈ ಅವಘಡ ಸಂಭವಿಸಿರುವುದು ಈ ಬಾರಿ ರಥೋತ್ಸವಕ್ಕೆ ಆಡಳಿತ ಮಂಡಳಿಯವರು ಏನು ಮಾಡುವವರೋ ಎಂಬ ಚಿಂತೆ ಭಕ್ತರನ್ನು ಕಾಡುತ್ತಿದೆ.

ಬಸವೇಶ್ವರ ಭಾವಚಿತ್ರ ಸುಟ್ಟ ಪ್ರಕರಣ: ಕಾಂಗ್ರೆಸ್ ಲಿಂಗಾಯತರು-ಬಿಜೆಪಿ ಲಿಂಗಾಯತರ ಮಧ್ಯೆ ಮಾರಾಮಾರಿ!

click me!