
ಬೆಂಗಳೂರು (ಸೆ.27): ಕೊರೋನಾ ಅನ್ನು ಜಗತ್ತಿಗೆ ಕೊಡುಗೆ ನೀಡಿದ ಚೀನಾದ ವಿರುದ್ಧ ನಟ ಅನಂತ್‌ನಾಗ್ ಕಿಡಿಕಾರಿದ್ದಾರೆ. ‘2020 ಅತ್ಯಂತ ಕೆಟ್ಟ ವರ್ಷ.
ಕೊರೋನಾದಿಂದಾಗಿ ಎಂತೆಂಥವರು ಹೋಗಿಬಿಟ್ಟರು. ದೇಹ ಕೂಡ ನೋಡಲಾಗದಂತಹ ಕೊರೋನಾ ನಮ್ಮೆಲ್ಲರ ದುರಂತ. ಎಸ್‌ಪಿಬಿ ಸಾವಿನಿಂದ ಆ ದುರಂತ ಆಳವಾಗಿಬಿಟ್ಟಿದೆ. ಕೊರೋನಾ ಕೊಟ್ಟ ಚೀನಾದ ವಿರುದ್ಧ ಏನೂ ಮಾಡದೆ ಇಡೀ ಜಗತ್ತು ಸುಮ್ಮನಿದೆ’ ಎಂದಿದ್ದಾರೆ.
ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್ ..
‘ಎಸ್‌ಪಿಬಿ 50 ದಿನ ಕೊರೋನಾ ಜತೆ ಹೋರಾಟ ಮಾಡಿ ನಮ್ಮಿಂದ ದೂರಾದರು. ಸಿಲ್ಕ್ ರೋಡ್ಸ್ ಎಂಬ ಪುಸ್ತಕದಲ್ಲಿ ಪೀಟರ್ ಫ್ರಾಂಕೋಪನ್ ಕ್ರಿಸ್ತಪೂರ್ವ ಮತ್ತು ಕ್ರಿಸ್ತ ಶಕದ ಸುಮಾರು 5000 ವರ್ಷಗಳ ಇತಿಹಾಸ ಬರೆಯುತ್ತಾ ಈ ಹಿಂದೆ ಸುಮಾರು ಮಹಾಮಾರಿಗಳು ಸಾವು, ನೋವು ಉಂಟು ಮಾಡಿದ್ದವು ಎಂದಿದ್ದಾನೆ.
ಆದರೆ ಈ ಮಟ್ಟದ ಸಾವು, ನೋವು ಯಾವತ್ತೂ ಆಗಿರಲಿಲ್ಲ ಅಂತ ಕಾಣುತ್ತದೆ. ಇದಕ್ಕೆಲ್ಲಾ ಕಾರಣ ಚೀನಾ’ ಎಂದು ಅವರು ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ