ತುಮಕೂರು: ಜಯಮಂಗಲಿ ನದಿ ಒಡಲಲ್ಲಿ ಮರಳುಗಾರಿಕೆ; ರಾತ್ರೋ ರಾತ್ರಿ ತಹಸೀಲ್ದಾರ್ ರೇಡ್

By Ravi Janekal  |  First Published Oct 16, 2023, 1:26 PM IST

ಜಯಮಂಗಲಿ ನದಿ ತುಮಕೂರು ಜಿಲ್ಲೆಯ ಎರಡು ತಾಲೂಕುಗಳ ರೈತರ ಜೀವನಾಡಿಯಾಗಿದೆ. ಸುಮಾರು 30 ವರ್ಷಗಳ ಕಾಲ ನದಿಯಲ್ಲಿ ನೀರು ಕಾಣದಾಗಿತ್ತು. ಕಳೆದ ವರ್ಷ ವ್ಯಾಪಕ ಮಳೆಯಿಂದಾಗಿ ನೆರೆ ಉಂಟಾಗಿ ಮೈದುಂಬಿ ಹರಿದಿತ್ತು. ಆದರೆ ಈ ವರ್ಷ ಮಳೆ‌ ಬಾರದ‌ ಪರಿಣಾಮ‌ ನದಿ ಒಡಲು ನೀರಿಲ್ಲದೆ ಮರಳಿನಿಂದ ತುಂಬಿ ಹೋಗಿದೆ.  ಇದೀಗ ಸಮೃದ್ಧಿಯಾಗಿ ಶೇಖರಣೆಯಾಗಿರುವ ಮರಳಿನ ಮೇಲೆ ದಂಧೆಕೋರರ ಕಣ್ಣು ಬಿದಿದೆ.


ವರದಿ :  ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್ ತುಮಕೂರು.‌

ತುಮಕೂರು (ಅ.16) : ಜಯಮಂಗಲಿ ನದಿ ತುಮಕೂರು ಜಿಲ್ಲೆಯ ಎರಡು ತಾಲೂಕುಗಳ ರೈತರ ಜೀವನಾಡಿಯಾಗಿದೆ. ಸುಮಾರು 30 ವರ್ಷಗಳ ಕಾಲ ನದಿಯಲ್ಲಿ ನೀರು ಕಾಣದಾಗಿತ್ತು. ಕಳೆದ ವರ್ಷ ವ್ಯಾಪಕ ಮಳೆಯಿಂದಾಗಿ ನೆರೆ ಉಂಟಾಗಿ ಮೈದುಂಬಿ ಹರಿದಿತ್ತು. ಆದರೆ ಈ ವರ್ಷ ಮಳೆ‌ ಬಾರದ‌ ಪರಿಣಾಮ‌ ನದಿ ಒಡಲು ನೀರಿಲ್ಲದೆ ಮರಳಿನಿಂದ ತುಂಬಿ ಹೋಗಿದೆ.  ಇದೀಗ ಸಮೃದ್ಧಿಯಾಗಿ ಶೇಖರಣೆಯಾಗಿರುವ ಮರಳಿನ ಮೇಲೆ ದಂಧೆಕೋರರ ಕಣ್ಣು ಬಿದಿದೆ.

Tap to resize

Latest Videos

undefined

ತುಮಕೂರಿನ ದೇವರಾಯದುರ್ಗದಲ್ಲಿ ಜನಿಸುವ ಜಯಮಂಗಲಿ ನದಿ ಕೊರಟಗೆರೆ, ಮಧುಗಿರಿ,ಪಾವಗಡ ತಾಲ್ಲೂಕಿನಲ್ಲಿ ಹರಿದು ಆಂಧ್ರಕ್ಕೆ ಸೇರಲಿದೆ. ಈ ನದಿಯಲ್ಲಿ ಶೇಖರಣೆಯಾಗಿರುವ ಮರಳಿನ ಮೇಲೆ  ಮಾಫಿಯಾದ ಕಣ್ಣು ಬಿದ್ದಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ಕದ್ದು ಮುಚ್ಚಿ ಸಾಗಿಸಲಾಗುತ್ತಿದೆ.

ಮತ್ತೆ ಸದ್ದು ಮಾಡ್ತಿದೆ ಸ್ಯಾಂಡ್ ಮಾಫಿಯಾ: ನದಿ ಒಡಲನ್ನೇ ಕೊರೆಯತ್ತಿದ್ದಾರೆ ಮರಳು ಗಳ್ಳರು

ಮಧುಗಿರಿಯ ಕೊಂಡವಾಡಿ, ಅಕ್ಕಲಾಪುರ, ಕುರುಡಿ, ಕೊಡ್ಲಾಪುರ,ಪುರವರ, ಕೊಡಿಗೇನಹಳ್ಳಿ  ಹಾಗೂ‌ ಕೊರಟಗೆರೆಯ ಮೊರ್ಗಾನಹಳ್ಳಿ ಕೆಜಿ. ಬೇವಿನಹಳ್ಳಿಯಲ್ಲಿ ಮರಳುಗಾರಿಕೆ ಮಾಡಲಾಗುತ್ತಿದೆ. ರಾತ್ರಿ ಹಾಗೂ ಹಗಲು ಹೊತ್ತು  ರಾಜಾರೋಷವಾಗಿಹ ಮರಳು ತುಂಬಿ ಲಾರಿಗಳ ಮೂಲಕ ರಾಜಧಾನಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. 

ಅಕ್ರಮ‌ ಮರಳುಗಾರಿಕೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆ, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.‌ ಮಧ್ಯರಾತ್ರಿ ಖುದ್ದು ಜಯಮಂಗಲಿ ನದಿ ಹರಿಯುವ ಗ್ರಾಮಗಳಲ್ಲಿ ರೌಂಡ್ ಹೊಡೆದು, ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.  ತಹಶೀಲ್ದಾರ್ ದಾಳಿ ವೇಳೆ ಮರಳು ತುಂಬುತ್ತಿದ್ದ ದಂಧೆಕೋರರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.  ಕಳೆದ ಒಂದು ತಿಂ‌ಗಳ ಎರಡು ಬಾರಿ ದಾಳಿ ನಡೆಸಲಾಗಿದೆ.

ಬಳ್ಳಾರಿ: ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಸಾಗಾಟ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ!

ಜಯಮಂಗಳಿ ನದಿಪಾತ್ರದ ಮರಳು ರಕ್ಷಣೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ  ನಿಗಾ ಇಡಬೇಕಿದೆ. ಈ ಮೂಲಕ ಜಯಮಂಗಲಿ ನದಿ ಪಾತ್ರದ ಸುತ್ತಾಮುತ್ತ ಅಂತರ್ಜಲ ಕಾಪಾಡಬೇಕಿದೆ.

click me!