ನೀವು ಕಲ್ಲು ಎತ್ತಿದರೆ, ನಮ್ಮ ಕೈಗೆ ಗುಂಡು ಬರುತ್ತದೆ: ಮಹಾಮಂಡಲೇಶ್ವರ್ ಶ್ರೀ ಎಚ್ಚರಿಕೆ!

Published : Oct 10, 2023, 10:32 PM ISTUpdated : Oct 10, 2023, 10:44 PM IST
ನೀವು ಕಲ್ಲು ಎತ್ತಿದರೆ, ನಮ್ಮ ಕೈಗೆ ಗುಂಡು ಬರುತ್ತದೆ: ಮಹಾಮಂಡಲೇಶ್ವರ್ ಶ್ರೀ ಎಚ್ಚರಿಕೆ!

ಸಾರಾಂಶ

ಮೊದಲ ಬಾರಿಗೆ ಉಡುಪಿಗೆ ಬಂದಿದ್ದೇನೆ. ಇಲ್ಲಿಗೆ ಭೇಟಿ ನೀಡಲು ಅವಕಾಶ ಸಿಕ್ಕಿರಲಿಲ್ಲ ಎಂದು ಭೋಪಾಲ್ ನ ಮಹಾಮಂಡಲೇಶ್ವರ ಶ್ರೀ ಅಖಿಲೇಶ್ವರಾನಂದ ಗಿರಿ ಮಹಾರಾಜ್ ಹೇಳಿದರು.

ಉಡುಪಿ (ಅ.10): ಮೊದಲ ಬಾರಿಗೆ ಉಡುಪಿಗೆ ಬಂದಿದ್ದೇನೆ. ಇಲ್ಲಿಗೆ ಭೇಟಿ ನೀಡಲು ಅವಕಾಶ ಸಿಕ್ಕಿರಲಿಲ್ಲ ಎಂದು ಭೋಪಾಲ್ ನ ಮಹಾಮಂಡಲೇಶ್ವರ ಶ್ರೀ ಅಖಿಲೇಶ್ವರಾನಂದ ಗಿರಿ ಮಹಾರಾಜ್ ಹೇಳಿದರು.

ಇಂದು ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ 60ನೇ ವರ್ಷಾಚರಣೆಯ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಂಘಟನೆ ಸಂಘರ್ಷದಲ್ಲಿ ಶಕ್ತಿ ಇದೆ, ಶಿವರಾತ್ರಿ ಮೂಲಕ ಭಜರಂಗದಳ ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದೆ. ಇದು ಸಂಘಟನೆ, ಸಂಘರ್ಷದ ಯುಗ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ತಲೆಮಾರು ಈಗ ನಮ್ಮೊಂದಿಗೆ ಇಲ್ಲ. ಹಿಂದೂ ಸಮಾಜದ ಶೌರ್ಯವನ್ನ ಎಚ್ಚರಿಸುವ ಸಮಯ ಇದು ಎಂದರು.

ಅಧಿಕಾರ, ವೋಟ್‌ಬ್ಯಾಂಕ್‌ ರಾಜಕಾರಣಕ್ಕೆ ಪ್ಯಾಲೆಸ್ತಾನ್ ಪರ ನಿಂತ ಕಾಂಗ್ರೆಸ್; ಡಿಎನ್ ಜೀವರಾಜ್ ಕಿಡಿ
 
ವ್ಯಾಪಾರಕ್ಕಾಗಿ ಬಂದ ಬಿಳಿ ವರ್ಣಿಯರು ದೇಶದ ಒಗ್ಗಟ್ಟನ್ನು ಒಡೆದರು. ನಮ್ಮ ದೇಶದಲ್ಲಿ ಯುವಜನರನ್ನು ಎಚ್ಚರಿಸುವ ಕೆಲಸವನ್ನು ಈ ಹಿಂದೆ ಮಾಡಲಾಗಿದೆ. ಈಗಲೂ ಹಿಂದು ಸಂಘಟನೆಗಳಿಂದ ಮಾಡಲಾಗುತ್ತಿದೆ. ರಾಮಮಂದಿರದ ನಿರ್ಮಾಣ ಮತ್ತು ಹೋರಾಟದಲ್ಲಿ ಭಾಗಿಯಾದವರು ಇಂದಿಗೂ ಅವರ ಆತ್ಮ ನಮ್ಮೊಂದಿಗಿದೆ. ಯಾವ ದೇಶ ತನ್ನ ಶೌರ್ಯ ಪರಾಕ್ರಮವನ್ನು ಮರೆಯುತ್ತದೆಯೋ ಆ ದೇಶ ಚಿನ್ನವಾಗುತ್ತದೆ ಎಂದರು.

ಹಿಂದೂ ಮತ್ತು ಹಿಂದೂ ಸಂಘಟನೆಗಳನ್ನ ಕಟ್ಟಿ ಹಾಕುವ ಕೆಲಸ ಕರ್ನಾಟಕದಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ಲವ್‌ ಜಿಹಾದ್ ನಡೆಯುತ್ತಿದೆ. ನಾವು ಸ್ವತಂತ್ರ ಭಾರತದ ಹಿಂದುಗಳು. ನಾವು ಮಲಗಿಲ್ಲ ಎಚ್ಚೆತ್ತುಕೊಂಡಿದ್ದೇವೆ. ನಮಗೆ ನಮ್ಮ ಬಲಿದಾನದ ಚಿಂತೆ ಇಲ್ಲ, ನಮ್ಮ ದೇಶ ಕಟ್ಟಿರುವುದು ದೇಶಭಕ್ತರ ಬಲಿದಾನದಿಂದ ಎಂದರು.

ದಲಿತ ಶಬ್ದ ಬಳಸಬೇಡಿ:

ಜಾತ್ಯಾತೀತ ಭಾರತದಲ್ಲಿ ಜಾತಿಗಣತಿ, ಜಾತಿ ರಾಜಕಾರಣ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತಿವಾದದ ಅಲೆ ಕೇಳಿ ಬರುತ್ತಿದೆ. ಆದರೆ ಭಾರತ ದೇಶ ಜಾತಿವಾದದಿಂದ ನಿರ್ಮಾಣವಾಗಿಲ್ಲ. ನಮ್ಮ ಅಭಿಯಾನ ಕೇವಲ ಭಾರತದ ಗಡಿಯವರೆಗೆ ಸೀಮಿತವಾಗಿಲ್ಲ. ಇಡೀ ಪ್ರಪಂಚದಲ್ಲಿ ನಮ್ಮ ಶ್ರೇಯ ಹರಡಿದೆ. ಮತಾಂತರ ಎಂದರೆ ರಾಷ್ಟ್ರ ಅಂತರ ಎಂದು ಸ್ವಾಮಿ ವಿವೇಕಾನಂದ ಅವರು ಹೇಳಿದ್ದಾರೆ. ದೇಶದಲ್ಲಿ ಅಸ್ಪೃಶ್ಯತೆ ದಲಿತರು ಎಂದು ಮತಾಂತರ ಮಾಡಲಾಗುತ್ತಿದೆ. ಆದರೆ ವೇದಗಳಿಂದ ಹಿಡಿದು ಹನುಮಾನ ಚಾಲಿಸ್ ದವರೆಗೂ ಎಲ್ಲಿಯೂ ಕೂಡ ಅಸ್ಪೃಶ್ಯತೆಯ ಮಾತಿಲ್ಲ. ನನಗೆ ದಲಿತ ಶಬ್ದದ ಮೇಲೆ ಬಹಳ ಬೇಸರವಿದೆ, ದಲಿತ ಶಬ್ದವನ್ನು ಬಳಸಬೇಡಿ ಎಂದು ವಿನಂತಿಸಿಕೊಂಡರು.

ಹಮಾಸ್ ಉಗ್ರರ ವಿರುದ್ದ ಇಸ್ರೇಲ್ ಪ್ರತಿದಾಳಿಗೆ ಕೆರಳಿದ ಕಾಂಗ್ರೆಸ್, ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಣೆ!

ಸನಾತನ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ:

ಕರ್ನಾಟಕ ರಾಜ್ಯ ಸರಕಾರ ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಬ್ಯಾನ್ ಮಾಡುವ ಮಾತನಾಡುತ್ತಿದೆ. ಆದರೆ ಇತಿಹಾಸ ತಿಳಿದಿರಲಿ, ಸನಾತನ ವನ್ನು ಅಳಿಸಲು ಕಂಸ, ರಾವಣ, ಹುಮಾಯುನ್ ಹೈದರ್ ಪ್ರಯತ್ನ ಮಾಡಿ ಸೋತಿದ್ದಾರೆ. ಈ ದೇಶದ ಹಿಂದು ಸಮಾಜ ಸಂಘಟನೆ ಇಂದು ಇರುತ್ತದೆ, ಮುಂದೆಯೂ ಇರುತ್ತದೆ. ದಕ್ಷಿಣದಿಂದ ಪ್ರಸ್ತಾವನೆ ಇರಿಸಿ ಸನಾತನ ಧರ್ಮದ  ಪ್ರಧಾನಿಗೆ ಅನುಮೋದನೆ ನೀಡಲಾಗಿತ್ತು ಇಂದಿಗೂ ಅದೇ ಪ್ರಧಾನಿ ಧರ್ಮ ರಕ್ಷಣೆ ಮಾಡುತ್ತಿದ್ದಾರೆ. ಮುಸಲ್ಮಾನರ ಡಿಎನ್ ಎ ನಮ್ಮ ಡಿಎನ್ ಎ ಒಂದೇ. ನಿಮ್ಮ ನಾಲ್ಕು ತಲೆಮಾರು ಪರಿಶೀಲಿಸಿ ನೋಡಿ ಒಂದೇ ಆಗಿದೆ. ನೀವು ಕಲ್ಲು ಎತ್ತಿದರೆ, ಮುಂದೆ ನಮ್ಮ ಕೈಗೆ ಗುಂಡು ಬರುತ್ತದೆ ನೆನಪಿರಲಿ ಎಂದು ಎಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ