ಗೋಹತ್ಯೆ ನಿಷೇಧ ಕಾಯ್ದೆ ಪುನರ್‌ ಪರಿಶೀಲಿಸಿ: ಉಜ್ಜಯನಿ ಜಗದ್ಗುರು

By Kannadaprabha News  |  First Published Aug 14, 2023, 5:03 AM IST

ಯಾವುದೇ ಕಾರಣಕ್ಕೂ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬಾರದು. ಲವ್‌ ಜಿಹಾದ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಧು ಸಂತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಮುದಗಲ್‌ (ಆ.14) :  ಪವಿತ್ರವಾದ ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷವಾದ ಸ್ಥಾನ ಮಾನವಿದೆ. ಈ ಹಿಂದೆ ಜಾರಿಗೆ ತಂದ ಬಿಜೆಪಿ ಸರಕಾರದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಈಗಿನ ಸರಕಾರ ರದ್ದು ಗೊಳಿಸಿರುವದು ಹಿಂದೂ ಧರ್ಮಕ್ಕೆ ನೋವನ್ನುಂಟು ಮಾಡಿದೆ. ಸರಕಾರ ಅದನ್ನು ಮರು ಪರಿಶೀಲಿಸಿ ಗೋ ಹತ್ಯೆ ಕಾಯ್ದೆಯನ್ನು ಪುನರ್‌ ಪರಿಶೀಲಿಸಬೇಕು, ಅದನ್ನು ಮರಳಿ ಜಾರಿಗೆಗೆ ತರಬೇಕು ಎಂದು ಉಜ್ಜಯನಿ ಪೀಠದ ಜಗದ್ಗುರು ಡಾ: ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಸಮಿಪದ ಸುಕ್ಷೇತ್ರ ಸಜ್ಜಲಗುಡ್ಡದ ಯಾತ್ರಿ ನಿವಾಸದಲ್ಲಿ ರವಿವಾರ ಉಜ್ಜಯನಿ ಸಂಸ್ಥಾನ ಪೂಜಾ ಕೈಂಕರ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರ ಮಠ ಮಾನ್ಯಗಳಿಗೆ ನೀಡಿದ ಅನುದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರ ಕುರಿತು ಕೇಳಿರುವುದಕ್ಕೆ ಸಿಎಂ ಪ್ರತಿಕ್ರಿಯನ್ನು ಗಮನಿಸಲಾಗಿದೆ. ನೈಜವಾದ ಕಾಮಗಾರಿಗಳು ಎಲ್ಲಿ ನಡೆದಿವೆಯೋ ಅಲ್ಲಿ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿರುವದನ್ನು ಗಮನಿಸಬೇಕಾಗಿದೆ.

Tap to resize

Latest Videos

 

ರೈತರ ಅನುಕೂಲಕ್ಕೆ ತಕ್ಕಂತೆ ಗೋಹತ್ಯೆ ನಿಷೇಧ ಕಾಯ್ದೆಗೆ ಚಿಂತನೆ: ಸಚಿವ ರಾಜಣ್ಣ

ಮಠ ಮಾನ್ಯಗಳ ಅಭಿವೃದ್ಧಿಗೆ ಮುಖ್ಯಮಂತಿ ್ರಗಳು ಮುಂದಾಗುವ ವಿಶ್ವಾಸ ವ್ಯಕ್ತಪಡಿಸಿದರು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮರಳಿ ಪಡೆದಿರುವದರ ಕುರಿತು ಕೇಳಿರುವದಕ್ಕೆ ಸರಕಾರ ಈ ವಿಷಯದಲ್ಲಿ ಎಡವಿದೆ, ಇದರಿಂದ ನಮಗೂ ನೋವು ತಂದಿದೆ. ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದ್ದು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಮನೆಗಳ, ಮಠ ಮಾನ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೋವು ಪ್ರವೇಶಿಸಿದ ನಂತರ ನಾವು ನೀವೆಲ್ಲ ಪ್ರವೇಶ ಮಾಡುವದು ಧಾರ್ಮಿಕ ನಂಬಿಕೆಯಾಗಿದೆ. ಸರಕಾರ ಇದನ್ನು ಪುನರ್‌ ಪರಿಶೀಲಿಸಬೇಕು, ಮರಳಿ ಗೋ-ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಆದರೂ ಸರಕಾರದ ನಿರ್ಧಾರವನ್ನು ನಾವು ನೀವೆಲ್ಲ ನಿರೀಕ್ಷಿಸಬೇಕಾಗಿದೆ ಎಂದರು.

ಈ ಸಮಯದಲ್ಲಿ ಗುಡದೂರಿನ ಶ್ರೀ ನೀಲಕಂಠಯ್ಯ ತಾತನವರು, ಶ್ರೀ ಸಿದ್ಧಲಿಂಗ ಶಿವಾಚಾರ್ಯರು ವಿರುಪಾಪೂರ, ಶಿವಬಸಯ್ಯ ಸಜ್ಜಲಗುಡ್ಡ ಸೇರಿದಂತೆ ಇತರರಿದ್ದರು.

ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಹಿಂಜಾವೇ ಮುಖಂಡ ಒತ್ತಾಯ

click me!