ಹಿಂದೂ ಹುಡುಗರಿಗೂ ಗಂಡಸ್ತನವಿದೆ, ಲವ್‌ ಮಾಡಿ ಮತಾಂತರ ಮಾಡ್ತಾರೆ: ಆರೂಢ ಭಾರತೀ ಸ್ವಾಮೀಜಿ

By Kannadaprabha News  |  First Published Aug 14, 2023, 12:30 AM IST

ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಬಳಿಕ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಬಾರದು. ಲವ್‌ ಜಿಹಾದ್‌ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲ ನಿರ್ಣಯಗಳನ್ನು ಕೈಗೊಂಡಿದ್ದಾರೆ.


ಬೆಂಗಳೂರು(ಆ.14): ಯಾವುದೇ ಕಾರಣಕ್ಕೂ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬಾರದು. ಲವ್‌ ಜಿಹಾದ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಧು ಸಂತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಬೆಂಗಳೂರು ಮಹಾನಗರ ಘಟಕದಿಂದ ಮಲ್ಲೇಶ್ವರದ ಯತಿರಾಜ ಮಠದ ಶ್ರೀ ರಾಮಾನುಜ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂತ ಸಮಾವೇಶ’ದಲ್ಲಿ ಪಾಲ್ಗೊಂಡಿದ್ದ ಹಲವು ಸಂತರು, ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಬಳಿಕ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಬಾರದು. ಲವ್‌ ಜಿಹಾದ್‌ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲ ನಿರ್ಣಯಗಳನ್ನು ಕೈಗೊಂಡಿದ್ದಾರೆ.

Tap to resize

Latest Videos

ಕಾಲೇಜಿಗೆ ಹಿಂದೂ ವಿದ್ಯಾರ್ಥಿ ತಿಲಕ ಇಟ್ಕೊಂಡು ಬಂದಿದ್ದಕ್ಕೆ ಆಕ್ಷೇಪ: ತಿಲಕ ಅಳಿಸಿ ಇಸ್ಲಾಂಗೆ ಮತಾಂತರವಾಗಲು ಬೆದರಿಕೆ

ರಾಜ್ಯದಲ್ಲಿ ಪ್ರಜೆಗಳು ಸಾಮರಸ್ಯ, ಶಾಂತಿ ಸೌಹಾರ್ದಯುತವಾಗಿ ಬಾಳಲು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2022’ ಅನ್ನು ಯಾವುದೇ ಕಾರಣಕ್ಕೂ ಪ್ರಸ್ತುತ ಸರ್ಕಾರ ಹಿಂಪಡೆಯಬಾರದು. ದೇಶ, ರಾಜ್ಯದಲ್ಲಿ ಪ್ರಾಚೀನ ಕಾಲದಿಂದಲೂ ಗೋ ಹತ್ಯೆ ಆಗಬಾರದು ಎಂಬುದು ಅತ್ಯಂತ ಸರ್ವ ಸಮ್ಮತ ಸಂಸ್ಕೃತಿಯಾಗಿತ್ತು, ರಾಜ್ಯದಲ್ಲಿ ಪ್ರಾಚೀನ ಕಾಲದಿಂದಲೂ ದನ ಕರುಗಳ ವಧೆಗೆ ಅವಕಾಶವೇ ಇರಲಿಲ್ಲ ಎಂಬುದನ್ನು ನಿರ್ಣಯದಲ್ಲಿ ವಿವರಿಸಲಾಗಿದೆ.

ಗೋ ಹತ್ಯೆಯನ್ನು ತಡೆಗಟ್ಟಲು ಹಿಂದಿನ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ಪ್ರಸ್ತುತ ಸರ್ಕಾರವು ರಾಜ್ಯದಲ್ಲಿರುವ ಬಹುಸಂಖ್ಯಾತರ ಅಭಿಪ್ರಾಯದಂತೆ ಹಾಗೂ ಅವರ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಆಡಳಿತ ನಡೆಸಬೇಕಾಗಿರುವುದು ಕರ್ತವ್ಯವಾಗಿದೆ. ಬಹಳಷ್ಟುಸ್ವಾಮೀಜಿಗಳು ಯಾವುದೇ ಕಾರಣಕ್ಕೂ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು, ದುರ್ಬಲಗೊಳಿಸಬಾರದು ಎಂದು ಒತ್ತಾಯಿಸಿರುವುದನ್ನು ಮರೆಯಬಾರದು ಎಂದು ನೆನಪಿಸಲಾಗಿದೆ.

ಅಶಾಂತಿ, ಗಲಭೆಗೆ ಕಾರಣ:

ಭಾರತೀಯರೆಲ್ಲರೂ ಶಾಂತಿ, ಸೌಹಾರ್ದದಿಂದ ಬಾಳಬೇಕಾದರೆ ರಾಜ್ಯದಲ್ಲಿ ‘ಕರ್ನಾಟಕ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಕಾಯ್ದೆ 2020’ ಅನ್ನು ಹಿಂಪಡೆಯಬಾರದು. ‘ನಿನ್ನ ಧರ್ಮ ಸರಿಯಲ್ಲ, ನಿನ್ನ ಧರ್ಮಕ್ಕಿಂತ ನನ್ನ ಧರ್ಮ ಉತ್ತಮ’ ಎಂದು ಹೇಳಿದರೆ ಅದು ಇನ್ನೊಬ್ಬನ ಧಾರ್ಮಿಕ ಸ್ವಾತಂತ್ರ್ಯದ ಅವಹೇಳನವಾಗುತ್ತದೆ. ಹಾಗೆಯೇ ಬಲವಂತ, ಆಮಿಷಗಳನ್ನು ನೀಡಿ ಮತಾಂತರಕ್ಕೆ ಪ್ರಯತ್ನಿಸುವುದು ಸಮಾಜದಲ್ಲಿ ಅಶಾಂತಿ, ಗಲಭೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಹಿಂದೂ ಸಮಾಜದ ಪ್ರಮುಖ ಜಾತಿ, ವರ್ಗದ ಹೆಣ್ಣು ಮಕ್ಕಳು ಲವ್‌ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಅನ್ಯ ಕೋಮಿನವರು ವಿವಿಧ ಆಮಿಷ ಒಡ್ಡಿ ಪ್ರೀತಿಸಿ, ಮದುವೆಯ ನಾಟಕ ಮಾಡಿ, ನಂತರ ಹತ್ಯೆ ಮಾಡಿ ಬಿಸಾಡಲಾಗುತ್ತಿದೆ. ಬಡತನದಲ್ಲಿರುವ ಕೆಲವು ಸಮುದಾಯಗಳನ್ನು ದಾರಿ ತಪ್ಪಿಸಿ, ಮತಾಂತರಿಸಿ ಮುಖ್ಯವಾಹಿನಿಯಿಂದ ಬೇರ್ಪಡಿಸಿ ಹಿಂದೂ ಸಮಾಜವನ್ನು ದುರ್ಬಲಗೊಳಿಸಲಾಗುತ್ತಿದೆ. ಆದ್ದರಿಂದ ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯಬಾರದು ಎಂದು ಆಗ್ರಹಿಸಲಾಯಿತು.

ಗೋಕಾಕದ ರವಿಶಂಕರ ಶಿವಾಚಾರ್ಯ ಸ್ವಾಮೀಜಿ, ಕೆ.ಆರ್‌.ಪುರದ ಸಾಧು ರಂಗರಾಜನ್‌, ರಾಮಕೃಷ್ಣ ಮಿಷನ್‌ನ ಚಂದ್ರೇಶಾನಂದಜಿ, ಕನ್ನಮಂಗಲದ ಯೋಗೇಶಾನಂದ ಸ್ವಾಮೀಜಿ, ಚಂದಾಪುರದ ಶಾರದ ಆಶ್ರಮದ ಯತೀಶ್ವರಿ ರಾಮ ಪ್ರಿಯಾಂಬ ಮತ್ತಿತರರು ಸಮಾವವೇಶದಲ್ಲಿ ಪಾಲ್ಗೊಂಡಿದ್ದರು.

ಗೋಹತ್ಯೆ ನಿಷೇಧ, ಮತಾಂತರ ನಿಷೇಧಿಸಬೇಕು ಎಂಬುದು ರಾಜಕೀಯ ವಿಷಯವಲ್ಲ. ಇವುಗಳನ್ನು ಹಿಂಪಡೆಯಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. ಸರ್ಕಾರ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಮೇಲುಕೋಟೆ ಯದುಗಿರಿ ಯತಿರಾಜ ಮಠ ನಾರಾಯಣ ರಾಮಾನುಜ ಜೀಯರ್‌ ತಿಳಿಸಿದ್ದಾರೆ. 

ವಿಶ್ವ ಹಿಂದೂ ಪರಿಷತ್‌ನಿಂದ ಮಲ್ಲೇಶ್ವರದ ಶ್ರೀ ರಾಮಾನುಜ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ‘ಸಂತ ಸಮಾವೇಶ’ದಲ್ಲಿ ಮೇಲುಕೋಟೆಯ ನಾರಾಯಣ ರಾಮಾನುಜ ಜೀಯರ್‌, ಕೆ.ಆರ್‌.ಪುರದ ಸಾಧು ರಂಗರಾಜನ್‌, ರಾಮಕೃಷ್ಣ ಮಿಷನ್‌ನ ಚಂದ್ರೇಶಾನಂದಜಿ ಮತ್ತಿತರರು ಪಾಲ್ಗೊಂಡಿದ್ದರು.

Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್‌ ಲವ್‌: ರೇಪ್‌ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!

ಹಿಂದು ಹುಡುಗರಿಗೂ ಗಂಡಸ್ತನವಿದೆ, ಲವ್‌ ಮಾಡಿ ಮತಾಂತರ ಮಾಡ್ತಾರೆ!

ಮುಸ್ಲಿಮರಿಗಷ್ಟೇ ಗಂಡಸ್ತನವಿಲ್ಲ. ಹಿಂದೂ ಹುಡುಗರಿಗೂ ಗಂಡಸ್ತನವಿದ್ದು ಮುಸ್ಲಿಂ ಹುಡುಗಿಯರನ್ನು ಲವ್‌ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಗದಗದ ಆರೂಢ ಭಾರತೀ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯಾನಂತರ ಹಿಂದೂ, ಜೈನ, ಸಿಖ್‌, ಬೌದ್ಧರ ಜನಸಂಖ್ಯೆ ಇಳಿಕೆಯಾಗುತ್ತಿದ್ದು, ಮುಸ್ಲಿಂ, ಕ್ರೈಸ್ತರ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರ ಸೂಚಿಸುತ್ತದೆ. ಲವ್‌ ಜಿಹಾದ್‌ ಮೂಲಕ ಹಿಂದೂ ಯುವತಿಯರನ್ನು ಬಲವಂತ ಮಾಡಿ ಮತಾಂತರ ಮಾಡಲಾಗುತ್ತಿದೆ. ಮುಸ್ಲಿಮರಿಗಷ್ಟೇ ಗÜಂಡಸ್ತನವಿಲ್ಲ. ಹಿಂದೂ ಹುಡುಗರಿಗೂ ಗಂಡಸ್ತನವಿದ್ದು, ಮುಸ್ಲಿಂ ಹುಡುಗಿಯರನ್ನು ಲವ್‌ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯಿಂದ ಹೋರಾಟ:

ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯಬಾರದು. ವಾಪಸ್‌ ಪಡೆಯಲು ಮುಂದಾದರೆ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ, ಸಂಸ್ಕೃತಿ, ಆಚಾರ-ವಿಚಾರ ಕಾಪಾಡಬೇಕು. ಗೋಹತ್ಯೆ ನಿಷೇಧ ಸಡಿಲಿಕೆ ಆಗಬಾರದು. ಧರ್ಮ ಸ್ವಾತಂತ್ರ್ಯವು ಮತಾಂತರಕ್ಕೆ ಸ್ವಾತಂತ್ರ್ಯ ಆಗಬಾರದು ಎಂದು ಸಂತರು ಸಂದೇಶ ನೀಡಿದ್ದಾರೆ. ದುರ್ಬಲವಾದ ಕಾನೂನನ್ನು ಬಿಜೆಪಿ ಸರ್ಕಾರ ಬಲಪಡಿಸಿತ್ತು. ಕಾಂಗ್ರೆಸ್‌ ಸರ್ಕಾರ ಅದನ್ನು ಪುನಃ ದುರ್ಬಲಗೊಳಿಸಬಾರದು. ಹೀಗೆ ಮಾಡಿದರೆ ಹೋರಾಟ ನಡೆಸಲಾಗುವುದು. ಈ ವಿಚಾರದಲ್ಲಿ ನಮ್ಮ ಕಣಕಣದಲ್ಲೂ ಸ್ಪಷ್ಟತೆಯಿದೆ ಎಂದು ತಿಳಿಸಿದರು.

click me!