
ವರದಿ : ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಫೆ.25): ಕೆ ಆರ್ ಪುರಂ ಮತ್ತು ವೈಟ್ ಫಿಲ್ಡ್ ನಡುವಿನ ಮೆಟ್ರೋ ಪ್ರಯಾಣಿಕರ ಕನಸು ನನಸಾಗುವುದಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಹಲವು ವರ್ಷಗಳ ಮಹತ್ವದ ಮೆಟ್ರೋ ಯೋಜನೆಗಳಲ್ಲಿ ಒಂದಾದ ಈ ಮಾರ್ಗದ ಎಲ್ಲಾ ಕೆಲಸಗಳ ಮುಗಿದಿದ್ದು, ಕೊನೆಯ ಹಂತದ ಪ್ರಾಯೋಗಿಕ ಸಂಚಾರ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಹೌದು ಕಳೆದ ಮೂರು ದಿನಗಳಿಂದ ಮೆಟ್ರೋ(Namma Metro) ರೈಲು ಸೇಫ್ಟಿ ಕಮಿಷನ್(Railway Safety Commission) ಒಳಗೊಂಡ ತಂಡ ಕೆಆರ್ ಪುರಂ(KR pura) ಹಾಗೂ ವೈಟ್ ಫಿಲ್ಡ್(Whitefield) ಮಾರ್ಗದ ಕೊನೆಯ ಹಂತದ ಪ್ರಾಯೋಗಿಕ ಸಂಚಾರವನ್ನ ಹಂತ ಹಂತವಾಗಿ ನಡೆಸಿತ್ತು.
Namma Metro: ಮತ್ತೊಂದು ಎಡವಟ್ಟು; ತಪ್ಪಿದ ಭಾರೀ ಅನಾಹುತ!
ಇದರ ಜೊತೆಗೆ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಟೆಕ್ನಿಕಲ್ ವಿಚಾರಗಳು, ಮೆಟ್ರೋ ನಿಲ್ದಾಣಗಳಲ್ಲಿನ ಸೌಲಭ್ಯಗಳು ಸೇರಿದಂತೆ ಅನೇಕ ವಿಚಾರಗಳ ಪರಿಶೀಲನೆಗಳನ್ನ ನಡೆಸಿತ್ತು. ಸದ್ಯ 13.71 ಕಿ.ಮೀ ಮಾರ್ಗದ ಸಂಪೂರ್ಣ ಪರಿಶೀಲನೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಒಂದು ವಾರದೊಳಗೆ ಸಂಪೂರ್ಣ ಪರಿಶೀಲನೆ ಮತ್ತು ಫಿಟ್ನೆಸ್ ವರದಿಯನ್ನ ಬಿಎಂಆರ್ಸಿಎಲ್(BMRCL) ಗೆ ಸಲ್ಲಿಸಲಿದೆ.
ಸುಮಾರು 300 ಪುಟಗಳ ವರದಿಯನ್ನ ಸಿದ್ದಪಡಿಸಲಿರುವ ಸೇಫ್ಟಿ ಕಮಿಷನ್ ಹೊಸ ಮಾರ್ಗದ ಕಂಡಿಷನ್ ಬಗ್ಗೆ ಸಂಪೂರ್ಣ ವರದಿಯನ್ನ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲಿದೆ.. ಇನ್ನು ಪರಿಶೀಲನೆ ವೇಳೆ ಬಹಳ ಪ್ರಮುಖವಾಗಿ ಮಾರ್ಗದಲ್ಲಿ ಲಭ್ಯವಿರುವ ಸಾರ್ವಜನಿಕ ಸೌಲಭ್ಯದ ಬಗ್ಗೆ ಕೂಡ ಸೇಫ್ಟಿ ಕಮಿಷನ್ ಪರಿಶೀಲನೆ ನಡೆಸಿದೆ.
ಹೊಸ ಮಾರ್ಗದಲ್ಲಿ ಲಭ್ಯವಿರುವ ಸೌಲಭ್ಯಗಳೇನು?
ಬೆಂಗಳೂರು: ನಗರದಲ್ಲಿ ಶೀಘ್ರ ಚಾಲಕನಿಲ್ಲದ ಮೆಟ್ರೋ ಓಡಾಟ!
ಇನ್ನೂ ಒಂದು ವಾರದ ಬಳಿಕ ಸಲ್ಲಿಕೆಯಾಗಲಿರುವ ಪರಿಶೀಲನೆ ವರದಿಯಲ್ಲಿ ಎಲ್ಲಾ ಸರಿಯಾದ್ರೆ ಆ ಕೂಡಲೇ ನೂತನ ಮಾರ್ಗ ಉದ್ಘಾಟನೆಗೆ ಬಿಎಂಆರ್‌ಎಲ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಚುನಾವಣೆ ದಿನಾಂಕ ಕೂಡ ಹತ್ತಿರದಲ್ಲಿದ್ದು, ಮಾರ್ಚ್ ಎರಡನೇ ವಾರದ ಬಳಿಕ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನೆಲೆ, ಆ ಮೊದಲೇ ಹೊಸ ಮಾರ್ಗ ಉದ್ಘಾಟನೆಗೆ ಸರ್ಕಾರ ಕೂಡ ದಿನಾಂಕ ಮತ್ತು ಉದ್ಘಾಟಕರನ್ನ ಫೈನಲ್ ಮಾಡುವ ಸಾಧ್ಯತೆ ಇದೆ.
ಎಲ್ಲಾ ಅಂದುಕೊಂಡಂತೆ ಆದ್ರೆ ಬಹುತೇಕ ಮಾರ್ಚ್ ಎರಡನೇ ವಾರದೊಳಗೆ ಹೊಸ ಮಾರ್ಗ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ