ವಿದ್ಯಾರ್ಥಿಗಳು ಕಂಡಲ್ಲಿ ಬಸ್‌ ನಿಲ್ಲಿಸಲು ಸಚಿವ ಸುರೇಶ್‌ ಸೂಚನೆ

By Kannadaprabha NewsFirst Published Jan 12, 2021, 10:10 AM IST
Highlights

ಡಿಸಿಎಂ ಸವದಿಗೆ ಪತ್ರ ಬರೆದ ಶಿಕ್ಷಣ ಸಚಿವ | ಪಾಸ್‌ ವಿದ್ಯಾರ್ಥಿಗಳ ಜತೆ ಸೌಜನ್ಯದಿಂದ ವರ್ತಿಸಲು ಹೇಳಿ

ಬೆಂಗಳೂರು(ಜ.12): ಶಾಲಾ- ಕಾಲೇಜು ವಿದ್ಯಾರ್ಥಿಗಳು ಕಂಡಲ್ಲಿ ಬಸ್‌ಗೆ ಹತ್ತಿಸಿಕೊಳ್ಳುವಂತೆ, ಪಾಸ್‌ ಹೊಂದಿರುವ ವಿದ್ಯಾರ್ಥಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಚಾಲಕ ಹಾಗೂ ನಿರ್ವಾಹಕರಿಗೆ ನಿರ್ದೇಶನ ನೀಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಮನವಿ ಮಾಡಿದ್ದಾರೆ.

ಈ ಕುರಿತು ಸಾರಿಗೆ ಸಚಿವರಿಗೆ ಪತ್ರ ಬರೆದಿರುವ ಸುರೇಶಕುಮಾರ್‌, ಗ್ರಾಮಾಂತರ ಪ್ರದೇಶಗಳ ಅನೇಕ ಬಸ್‌ ನಿಲ್ದಾಣಗಳಲ್ಲಿ ಕೆಎಸ್‌ಆರ್‌ಟಿಸಿಯ ಅನೇಕ ಬಸ್ಸುಗಳು ನಿಲ್ಲಿಸದೆ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ.

ಶ್ರೀರಂಗಪಟ್ಟಣದಲ್ಲಿ 1600 ಟನ್‌ ಲಿಥಿಯಂ ನಿಕ್ಷೇಪ!

ಅಲ್ಲದೆ, ಪಾಸ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಚಾಲಕರು ಮತ್ತು ನಿರ್ವಾಹಕರು ಪದೇಪದೇ ಆಜ್ಞೆ ಮಾಡುವಂತೆ ಮಾತನಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಕೇಳಿ ಬಂದಿವೆ. ಈ ನಡೆ ಸರ್ಕಾರಕ್ಕೆ ಕೆಟ್ಟಹೆಸರು ತರುತ್ತದೆ. ಆದ್ದರಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಸ್‌ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ತಮ್ಮ ಇಲಾಖೆ ಅಧಿಕಾರಿಗಳಿಗೆ ತುರ್ತಾಗಿ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

click me!