ಸ್ವಯಂ ಲಾಕ್‌ಡೌನ್ ನಿರ್ಧಾರಕ್ಕೆ ತಿಲಾಂಜಲಿ| 7ರಿಂದ ಸರ್ಕಾರದಿಂದಲೇ ಲಾಕ್‌ಡೌನ್ ಬಗ್ಗೆ ವದಂತಿ| ಲಾಕ್‌ಡೌನ್‌ನಿಂದ ಹಿಂದೆ ಸರಿದ ವರ್ತಕರು
ಬೆಂಗಳೂರು(ಜು.02): ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜು.1ರಿಂದ ಒಂದು ವಾರಗಳ ಕಾಲ ಸ್ವಯಂ ಲಾಕ್‌ಡೌನ್ ಮಾಡಲು ಮುಂದಾಗಿದ್ದ ಮಲ್ಲೇಶ್ವರಂ ಕಮರ್ಷಿಯಲ್ ಸ್ಟ್ರೀಟ್‌ನ ವರ್ತಕರು ಜು.7ರಿಂದ ಪುನಃ ಲಾಕ್‌ಡೌನ್ ಜಾರಿಯಾಗಬಹುದೆಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರ ಮಾತ್ರ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದು, ಗುರುವಾರದಿಂದ ಎಂದಿನಂತೆ ತೆರೆಯಲಿದ್ದಾರೆ.
ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬುಧವಾರದಿಂದ ನಗರದ ಬಸವನಗುಡಿ, ಡಿವಿಜಿ ರಸ್ತೆ, ಗಾಂಧಿಬಜಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವರ್ತಕರು ಸೇರಿದಂತೆ ನಗರದ ವಿವಿಧ ಪ್ರದೇಶಗಳ ವ್ಯಾಪಾರಿಗಳು ಜು.6ರವರೆಗೆ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.
undefined
ಪರಪ್ಪನ ಜೈಲಿನಲ್ಲಿ 22 ಕೈದಿಗಳಿಗೆ ಕೊರೋನಾ!
ಮಲ್ಲೇಶ್ವರಂನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಕೊರೋನಾ ಸೋಂಕಿತರು ದೃಢಪಟ್ಟಿದ್ದಾರೆ. ಹೀಗಾಗಿ ಮಲ್ಲೇಶ್ವರಂ 5ನೇ ಕ್ರಾಸ್‌ನಿಂದ 10ನೇ ಕ್ರಾಸ್, ಸಂಪಿಗೆ ರಸ್ತೆಯ ವರ್ತಕರು ಜು.6ರವರೆಗೆ ತಾತ್ಕಾಲಿಕವಾಗಿ ತಮ್ಮ ವ್ಯಾಪಾರ ವಹಿವಾಟು ನಡೆಸದಿರಲು ತೀರ್ಮಾನಿಸಿದ್ದರು. ಈ ವ್ಯಾಪ್ತಿಯಲ್ಲಿ ಬರುವ ಸುಮಾರು 200 ದೊಡ್ಡ ಅಂಗಡಿಗಳ ಮಾಲಿಕರು ಈ ನಿರ್ಧಾರವನ್ನು ಸ್ವಾಗತಿಸಿದ್ದರು.
ಆದರೆ ಈ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ದಿನಕ್ಕೆ ಕೋಟ್ಯಂತರ ರು. ವಹಿವಾಟು ನಡೆಯುತ್ತದೆ. ಸರ್ಕಾರ ಜು.7ರಿಂದ ಲಾಕ್‌ಡೌನ್ ಜಾರಿಗೊಳಿಸಿದರೆ ಮತ್ತಷ್ಟುಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಮತ್ತೊಮ್ಮೆ ವರ್ತಕರು ಸಭೆ ಸೇರಿ ಸ್ವಯಂ ಲಾಕ್‌ಡೌನ್ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
'ಆಗಸ್ಟ್‌ನಲ್ಲಿ ಕೊರೋನಾ ತಾರಕಕ್ಕೆ: ಬೆಂಗಳೂರಿನಲ್ಲಿ 40000 ಕೇಸ್!'
ಬೆಂಗಳೂರಿನ ಅತಿ ದೊಡ್ಡ ಮಾರುಕಟ್ಟೆಪ್ರದೇಶವಾದ ಕೆ.ಆರ್.ಮಾರುಕಟ್ಟೆಯಲ್ಲಿನ ವ್ಯಾಪಾರ-ವಹಿವಾಟುಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಜೊತೆಗೆ ಸಮೀಪದ ಚಿಕ್ಕಪೇಟೆ ಸೇರಿದಂತೆ ಸುತ್ತಲಿನ ವಾಣಿಜ್ಯ ಪ್ರದೇಶಗಳನ್ನು ಸೀಲ್ಡ್‌ಡೌನ್ ಮಾಡಲಾಗಿದೆ.