
ಬೆಂಗಳೂರು (ಆ.25): ಮುಡಾ ಸ್ಕ್ಯಾಮ್, ವಾಲ್ಮೀಕಿ ಹಗರಣ, ಎಸ್‌ಸಿ-ಎಸ್‌ಟಿ ಇಲಾಖೆಯ ಹಣ ದುರುಪಯೋಗ ಸೇರಿದಂತೆ ಸರ್ಕಾರದ ವಿರುದ್ಧ ದಿನಕ್ಕೊಂದು ಹೊಸ ಆರೋಪಗಳು ಹೊರಬರುತ್ತಿದ್ದು, ಸಿಎಂ ವಿರುದ್ಧವೇ ಮುಡಾ ಕೇಸ್‌ನಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿದೆ. ಇದರ ನಡುವೆ ಅನಾರೋಗ್ಯದ ಹೆಸರಿನಲ್ಲಿ ಒಂದೇ ವರ್ಷದಲ್ಲಿ ಕೋಟ್ಯಂತರ ರೂಪಾಯಿಯನ್ನು ಶಾಸಕರು ಕ್ಲೇಮ್ ಮಾಡಿಸಿಕೊಂಡಿರುವ ಆರೋಪವೂ ಎದುರಾಗಿದೆ. ಅನಾರೋಗ್ಯ ಕಾರಣಕ್ಕಾಗಿ ಮೆಡಿಕಲ್ ಬಿಲ್ ಪಡೆದಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರ ಪಟ್ಟಿಯನ್ನು ಆರ್‌ಟಿಐ ಮಾಹಿತಿ ನೀಡಿದ್ದು, 2023ರ ಮೇ 1 ರಿಂದ 2024ರ ಜುಲೈವರೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರು ಲಕ್ಷಾಂತರ ರೂಪಾಯಿ ಹಣವನ್ನು ಕ್ಲೇಮ್ ಮಾಡಿಕೊಂಡಿದ್ದಾರ. ಅನಾರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡಲು ಅವಕಾಶವಿದೆ. ಇದರಂತೆ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರು ಲಕ್ಷ ಲಕ್ಷ ಹಣವನ್ನು ಕ್ಲೇಮ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೈಜ ಹೋರಾಟಗಾರರ ವೇದಿಕೆಯಿಂದ ಮಾಹಿತಿ ಬಹಿರಂಗವಾಗಿದೆ.
ಹೋರಾಟಗಾರರ ವೇದಿಕೆಯ ಎಚ್ ವಿ ವೆಂಕಟೇಶ್ ಈ ಕುರಿತಾಗಿ ಆರ್‌ಟಿಐ ಮಾಹಿತಿ ಕೇಳಿದ್ದರು. ಅದರಂತೆ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಒಂದೇ ವರ್ಷದಲ್ಲಿ ದಾಖಲೆಯ 48.70 ಲಕ್ಷ ರೂಪಾಯಿ ಹಣವನ್ನು ಕ್ಲೇಮ್ ಮಾಡಿಸಿಕೊಂಡಿದ್ದಾರೆ. ಅತಿ ಹೆಚ್ಚು ಹಣ ಕ್ಲೇಮ್ ಮಾಡಿದ ವಿಧಾನ ಪರಿಷತ್ ಸದಸ್ಯೆ ಇವರಾಗಿದ್ದಾರೆ.
ಇನ್ನು ಕೋಟ್ಯಧಿಪತಿ ಸಿಪಿ ಯೋಗೇಶ್ವರ್ 2ನೇ ಸ್ಥಾನದಲ್ಲಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಅವರು ಸರ್ಕಾರಿದಂದ 39.64 ಲಕ್ಷ ರೂಪಾಯಿ ಹಣ ಕ್ಲೇಮ್ ಮಾಡಿಸಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಖರ್ ಅವರ ತಮ್ಮ ಚನ್ನರಾಜ್ ಹಟ್ಟುಹೊಳಿ ಮೂರನೇ ಸ್ಥಾನದಲ್ಲಿದ್ದಾರೆ. ಅಕ್ಕ ಸಚಿವರಾಗಿದ್ರೂ ಆರೋಗ್ಯಕ್ಕಾಗಿ 17.03 ಲಕ್ಷ ರೂಪಾಯಿ ಬಿಲ್‌ಅನ್ನು ಹಟ್ಟಿಹೊಳಿ ಮಾಡಿದ್ದಾರೆ. ಇನ್ನು ಗೋವಿಂದರಾಜು ಕೂಡ ಅತಿ ಹೆಚ್ಚು ಕ್ಲೇಮ್ ಮಾಡಿದ ವ್ಯಕ್ತಿ ಆಗಿದ್ದಾರೆ. ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ ಸರ್ಕಾರದ ಹಣವನ್ನು ಅವರು ಖರ್ಚು ಮಾಡಿದ್ದಾರೆ.
ಮುಡಾ ಹಗರಣ ಮರೆಮಾಚಲು ದಿಲ್ಲಿಯಲ್ಲಿ ಶಾಸಕರ ಪರೇಡ್‌ಗೆ ಸಿಎಂ ತಯಾರಿ: ಬೊಮ್ಮಾಯಿ
ಹಿರಿಯ ಶಾಸಕ ಲಕ್ಷ್ಮಣ್ ಸವದಿಯಿಂದ ಕೂಡ ಸರ್ಕಾರದ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಸರ್ಕಾರದಿಂದ ಅವರು 2.41 ಲಕ್ಷ ರೂಪಾಯಿ ಹಣವನ್ನು ಕ್ಲೇಮ್ ಮಾಡಿದ್ದರೆ, ಟಿ ಎ ಶರವಣ ಕೂಡ 2.14 ರೂಪಾಯಿ ಹಣ ಕ್ಲೇಮ್ ಮಾಡಿದ್ದಾರೆ.
ಮುಡಾ ಹಗರಣ ಕೋಮುವಾದಿಗಳ ಸೃಷ್ಟಿ; ಸಿಎಂ ತಪ್ಪೇ ಮಾಡಿಲ್ಲ: ಸಚಿವ ಮಹದೇವಪ್ಪ
ಹೆಚ್ಚು ಮೆಡಿಕಲ್ ಬಿಲ್ ಕ್ಲೈಮ್ ಮಾಡಿದವರು
ಹರೀಶ್ ಕುಮಾರ್- 2 ಲಕ್ಷ ರೂಪಾಯಿ
ಮರಿತಿಬ್ಬೇಗೌಡ- 1,54,995 ರೂಪಾಯಿ
ಎನ್. ವಾಯ್ ನಾರಾಯಣಸ್ವಾಮಿ 3 ಲಕ್ಷ ರೂಪಾಯಿ
ಅಬ್ದುಲ್ ಜಬ್ಬಾರ್- 1,1,345 ರೂಪಾಯಿ
ಸುಧಾಮ್ ದಾಸ್- 2,04,542 ರೂಪಾಯಿ
ಸುನೀಲ್ ವಲ್ಯಾಪುರೆ- 2,75,000 ರೂಪಾಯಿ
ಛಲವಾದಿ ನಾರಾಯಣಸ್ವಾಮಿ- 1,18,828 ರೂಪಾಯಿ
ವೈಎಂ ಸತೀಶ್- 2,77,559 ರೂಪಾಯಿ
ಮಧು ಮಾದೇಗೌಡ- 2,46,233 ರೂಪಾಯಿ
ರಘುನಾಥ್ ಮಲ್ಕಾಪುರೆ- 1,34,823 ರೂಪಾಯಿ
ಎಂ ಜಿ ಮೂಳೆ- 2,24,282 ರೂಪಾಯಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ