ಬಲಿಯಾ (ಸೆ.03): ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆ ವಿರೋಧಿಸಿ ಸೆ.8ರಂದು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆರ್‌ಎಸ್‌ಎಸ್ ಬೆಂಬಲಿತ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಹೇಳಿದೆ.
ಕನಿಷ್ಟಬೆಂಬಲ ಬೆಲೆ ಕುರುತಾಗಿ ಕೃಷಿ ಕಾಯ್ದೆಗಳು ಗಮನಹರಿಸಿಲ್ಲ. ಬೆಳೆ ಬೆಳೆಯಲು ಖರ್ಚಾಗುವ ವೆಚ್ಚವನ್ನು ಗಮನಿಸಿ ಕನಿಷ್ಟಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು.
undefined
ಒಬಿಸಿ ಮಸೂದೆಗೆ ರಾಷ್ಟ್ರಪತಿ ಸಹಿ ಬಾಕಿ: ರಾಜ್ಯಸಭೆಯಲ್ಲೂ ವಿಧೇಯಕ ಅಂಗೀಕಾರ
ಹೊಸ ಕಾಯ್ದೆಗಳಲ್ಲೂ ಸರ್ಕಾರ ಈ ಅಂಶವನ್ನು ಸೇರಿಸಬೇಕು. ಈ ಬೇಡಿಕೆಯನ್ನು ಪೂರೈಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 8ರಂದು ಧರಣಿ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಖಜಾಂಚಿ ಯುಗಲ್ ಕಿಶೋರ್ ಮಿಶ್ರಾ ಹೇಳಿದರು.