
ನವದೆಹಲಿ (ನ.01) ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಬ್ಯಾನ್ ಮಾಡಲು ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದೆ. ಪ್ರಿಯಾಂಕ್ ಖರ್ಗೆ ಪತ್ರ, ಸರ್ಕಾರದ ಆದೇಶ ವಿವಾದಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಪೈಪೋಟಿ ಆರಂಭಗೊಂಡಿದೆ. ತಾ ಮುಂದು ತಾ ಮುಂದು ಎಂದು ಆರ್‌ಎಸ್‌ಎಸ್ ನಿಷೇಧಕ್ಕೆ ಆಗ್ರಹಿಸಿ ಹೇಳಿಕೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್ ಕುರಿತು ಮೊದಲಿನಿಂದಲೂ ಸ್ಪಷ್ಟ ನಿಲುವು ಹೊಂದಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಇದೀಗ ದೇಶದಲ್ಲಿ ಶಾಂತಿ ಕದಡುವ ಆರ್‌ಎಸ್‌ಎಸ್ ಸಂಘವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹೇಳಿರುವುದರಲ್ಲಿ ಸತ್ಯಾಂಶವಿದೆ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಅವರು ದಾಖಲೆ ಇಟ್ಟು ಹೇಳಿದ್ದಾರೆ. ಸರ್ದಾರ್ ಪಟೇಲ್ ಸ್ಪಷ್ಟವಾಗಿ ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಹೇಳಿದ್ದರು. ಮಹಾತ್ಮಾ ಗಾಂಧಿ ಹತ್ಯೆಯ ಬಳಿಕ ಪಟೇಲ್ ಬಹಳ ಸ್ಪಷ್ಟವಾಗಿ ಹೇಳಿದ್ದರು. ಇನ್ನು ಆರ್‌ಎಸ್‌ಎಸ್ ನಿಷೇಧ ಹಿಂಪಡೆಯಲು ಸಂಘದ ಚಟುವಟಿಕೆ, ಧ್ಯೇಯ, ಉದ್ದೇಶ, ಸಂವಿಧಾನ ನೀಡಬೇಕು ಎಂದಿದ್ದರು. ಆರ್‌ಎಸ್‌ಎಸ್ ತನ್ನ ಸಂವುಧಾನ ಕೊಟ್ಡ ಬಳಿಕವೂ ಅಂದಿನ ಸಂಪುಟ ಕೂಡ ತಿರಸ್ಕರಿಸಿತ್ತು ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಕೋಮುವಾದಿ ಸಂಘಟನೆ, ದೇಶದಲ್ಲಿ ದ್ವೇಷಭಾವನೆ, ಪ್ರಚೋದನ ಕಾರಿ ಹೇಳಿ ಕೊಟ್ಟಿದೆ- ಇದರ ಫಲಿತಾಂಶ ಮಹಾತ್ಮಾ ಗಾಂಧಿ ಕೊಲೆಯಾಗಿದೆ ಎಂದು ಪಟೇಲರು ಹೇಳಿದ್ದರು. ತುರ್ತುಪರಿಸ್ಥಿತಿ ಯಲ್ಲಿ ಇಂದಿರಾಗಾಂಧಿ ಮನೆ ಘೇರಾವ್ ಮಾಡಿತ್ತು. ಇದರಿಂದ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಾಗಿತ್ತು. 1991 ಬಾಬರಿ ಮಸೀದಿ ಕೆಡವಿದಾಗಲೂ ಬ್ಯಾನ್ ಮಾಡಲಾಗಿತ್ತು. ಈ ಇತಿಹಾಸ ನೋಡಿ ಖರ್ಗೆ ಸಾಹೇಬ್ರು ಹೇಳಿರುವುದರಲ್ಲಿ ಸತ್ಯಾಂಶ ಇದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ದೇಶದ ಭದ್ರತೆಗಾಗಿ ಆರ್‌ಎಸ್‌ಎಸ್ ಈ ತನಕ ಯಾವ ಕಾರ್ಯಚಟುವಟಿಕೆಗಳು ಮಾಡಿದೆ ಅನ್ನೋದು ಈತನಕ ಸ್ಪಷ್ಟವಾಗಿ ಹೇಳಿಲ್ಲ. ಆರ್‌ಎಸ್‌ಎಸ್ ನಿಷೇಧಕ್ಕೆ ಕಾಂಗ್ರೆಸ್ ಈ ಪ್ರಯತ್ನ ಮಾಡಿದೆ ಅಂಥ ಹೊಸಬಾಳೆ ಹೇಳಿದ್ದಾರೆ. ಆದ್ರೆ ಯಾಕೆ ಪ್ರಯತ್ನ ಮಾಡಿದ್ರು ಎಂದರೆ 1969ರಲ್ಲಿ ರಾಂಚಿ ಸುತ್ತಾಮುತ್ತ ಕೋಮುಗಳೆಯಾಗಿದ್ದಾಗ ನ್ಯಾ.ರಘುಬರ್ ದಾಯಾಳ್ ಸಮಿತಿ ಮಾಡಲಾಗಿತ್ತು. ಅಹಮದಾಬಾದ್ ಕೋಮುಗಲಭೆಗೆ ನ್ಯಾ ಜಗಮೋಹನ್ ರೆಡ್ಡಿ ಸಮಿತಿ ಮಾಡಲಾಗಿತ್ತು. ಜಲಗಾವ್ ಕೋಮುಗಲಭೆಗೆ ನ್ಯಾ ಮಂಡೋನ್ ಸಮಿತಿ ಮಾಡಲಾಗಿತ್ತು. ದೇಶದಲ್ಲಿ ಕೋಮುಗಲಭೆಗಳು ನಡೆದು, ತನಿಖೆಗೆ ನಡೆಸಿರುವ ಎಲ್ಲಾ ಕಮಿಷನ್ ಗಳು ಕೋಮುಗಲಭೆಗಳಿಗೆ ಆರ್ ಎಸ್ ಎಸ್ ಪ್ರತ್ಯಕ್ಷ ಕಾರಣ ಎಂದು ಕಮಿಷನ್ ಗಳು ಹೇಳಿವೆ. ಆರ್‌ಎಸ್‌ಎಸ್ ನಲ್ಲಿ ಒಂದು ಕ್ರಿಯೆ ಇದೆ. ಅಕ್ರಮವನ್ನು ಸಕ್ರಮ ಮಾಡುವುದು ಬಹಳ ಚನ್ನಾಗಿ ಅವರಿಗೆ ಗೊತ್ತಿದೆ. ನಾಥುರಾಮ್ ಗೂಡ್ಸೆಯನ್ನು ಙಯೋತ್ಪಾದಕ ಅನ್ನಲ್ಲ ಅವರ ಭಾಷೆಯಲ್ಲಿ ಮಹಾತ್ಮಾ ಗಾಂಧಿ ಕೊಲೆಯಾಗೊಲ್ಲ ವಧೆಯಾಗಿದೆ ಅಂಥಾರೆ. ಯಾರನ್ನು ಮುರ್ಖರ ಮಾಡಲು ಸಾಧ್ಯ ಇಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ದ್ವಂದ್ವ ನೀತಿ ಇಲ್ಲ ಎಂದಿರುವ ಬಿಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಹೇಳಿರುವುದು ಸರ್ಕಾರ ಜಾಗದಲ್ಲಿ ಮಾಡುವಾಗ ಅನುಮತಿ ಪಡೆಯಬೇಕು ಎಂದಿದ್ದಾರೆ. ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಕೋಮುಗಲಭೆ ಮಾಡಲು ಪ್ರಯತ್ನ ಆಯ್ತು. ಉಡುಪಿಯಲ್ಲಿ ಹಸು ಕೊಂದು ಕೋಮುಗಲಭೆ ಮಾಡಲು ಯತ್ನಿಸಿದರು. ಖರ್ಗೆ ಸಾಹೇಬ್ರು ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ರಾಷ್ಟ್ರ, ರಾಜ್ಯದಲ್ಲಿ ಶಾಂತಿಕದಡುವ ಪ್ರಯತ್ನ ಮಾಡುವ ಈ ಸಂಘ ಮಾಡುತ್ತಿರುವುದರಿಂದ ಬ್ಯಾನ್ ಮಾಡಬೇಕು ಎಂದಿದ್ದಾರೆ. ಆರ್ ಎಸ್ ಎಸ್ ಒಪ್ಪಿಕೊಂಡವರು ಯಾರು ಕಾಂಗ್ರೆಸ್ ನಲ್ಲಿ ಇರಲು ಸಾಧ್ಯವಿಲ್ಲ. ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ ಕಾಂಗ್ರೆಸ್ ನಲ್ಲಿರುವ ಸ್ಲಿಪರ್ ಸೆಲ್ ಗಳು ಹೊರಗಡೆ ಹಾಕಿ ಎಂದಿದ್ದಾರೆ. ಕಾಂಗ್ರೆಸ್ ನವರು ಆರ್ ಎಸ್ ಎಸ್ ಬಗ್ಗೆ ಮಾತಾಡಿಲ್ಲ ಎಂದಾಕ್ಷಣ ಅವರು ಆರ್ ಎಸ್ ಎಸ್ ಪರ ಎಂದು ಭಾವಿಸುವುದಲ್ಲ. ಆರ್ ಎಸ್ ಎಸ್ ಪರ ಇದ್ದವರಿಗೆ ಕಾಂಗ್ರೆಸ್ ನಲ್ಲಿ ಜಾಗ ಇಲ್ಲ. ರಾಹುಲ್ ಗಾಂಧಿ ಕೂಡ ಈ ಬಗ್ಗೆ ಹೇಳಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ