ಎಲ್ಲೆಡೆ ಮಾರಕ ಪರಿಣಾಮವನ್ನು ಉಂಟು ಮಾಡಿರುವ ಕೊರೋನಾ ಎಫೆಕ್ಟ್ ಇದೀಗ ಆರ್ ಎಸ್ ಎಸ್ ಸಭೆ ಮೇಲೂ ತಟ್ಟಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಲಾಗಿದೆ.
ಬೆಂಗಳೂರು [ಮಾ.14]: ಕೊರೋನಾ ವೈರಸ್ ಭೀತಿಯಿಂದ ಎಲ್ಲೆಡೆ ಹೈ ಅಲರ್ಟ್ ಘೋಷಣೆಯಾಗಿದೆ. ಇದರ ಬಿಸಿ ಇದೀಗ ಆರೆಸ್ಸೆಸ್‌ನ ಪ್ರತಿನಿಧಿ ಸಭೆಗೂ ತಟ್ಟಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಮಾರ್ಚ್ 15 ರಿಂದ 17ರವರೆಗೆ ನಡೆಯಬೇಕಿದ್ದ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆ ಯನ್ನು ರದ್ದು ಮಾಡಲಾಗಿದೆ.
ಮೋಹನ್ ಭಾಗವತ್ ಉಗ್ರರ ಟಾರ್ಗೆಟ್; ಪೊಲೀಸರ ಮುನ್ನೆಚ್ಚರಿಕೆಯಿಂದ ತಪ್ಪಿತು ದುರಂತ!...
ಸಭೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಭೆಯನ್ನು ರದ್ದು ಮಾಡಿದ್ದಾಗಿ ಸುರೇಶ್ ಭೈಯಾಜಿ ಜೋಶಿ ತಿಳಿಸಿದ್ದಾರೆ.
ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಭಾರತೀಯ ಪ್ರತಿನಿಧಿ ಸಭೆ ರದ್ದು ಮಾಡಲಾಗಿದೆ. ಈ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಜನರ ಸೇರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರದ್ದು ಮಾಡಲಾಗಿದೆ.