
ಬೆಂಗಳೂರು (ಜೂ.2): ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಆದರೆ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್. ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.
ಎಸ್‌ಐಟಿ ಕಚೇರಿಯಲ್ಲಿ ಸಾಮಾನ್ಯರಿಗೆ ನೀಡುವಂತಹ ಕೊಠಡಿ ನೀಡಿರುವ ಹಿನ್ನೆಲೆ ಟಾಯ್ಲೆಟ್ ಹಾಗೂ ರೂಮ್ ವಿಚಾರವಾಗಿ ಮತ್ತೆ ಕಿರಿಕ್ ಮಾಡಿದ್ದಾರೆ. 'ನಾನು ಹಿಂಗೆಲ್ಲ ಬದುಕಿಲ್ಲ. ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಂ ಕೊಡಿ ಎಂದಿದ್ದಾರೆ. ಆದರೆ ಸಂಸದ ಪ್ರಜ್ವಲ್ ರೇವಣ್ಣ ಮನವಿಗೆ ತಲೆಕೆಡಿಸಿಕೊಳ್ಳದ ಎಸ್‌ಐಟಿ ಅಧಿಕಾರಿಗಳು. ಯಾವುದೇ ಆರೋಪಿಗಳಿಗಾದರೂ ಅದೇ ರೂಂ, ಅದೇ ಟಾಯ್ಲೆಟ್. ನಿಮ್ಮ ತಂದೆಗೆ ಸಹ ಇದೇ ರೂಂ, ಇದೇ ಟಾಯ್ಲೆಟ್ ಕೊಟ್ಟಿರುವುದಾಗಿ ಹೇಳಿರುವ ಎಸ್‌ಐಟಿ ಅಧಿಕಾರಿಗಳು. ಆದರೆ ಕೆಟ್ಟ ವಾಸನೆ ಬರುತ್ತಿದೆ ಉಸಿರಾಡುವುದು ಕಷ್ಟವಾಗ್ತಿದೆ ಅಂತಿರೋ ಪ್ರಜ್ವಲ್ ರೇವಣ್ಣ.
ಕೆಟ್ಟ ವಾಸನೆ ಬರ್ತಿದೆ, ಎಸ್‌ಐಟಿ ರೂಂನಲ್ಲಿ ಉಸಿರಾಡಲು ಕಷ್ಟ: ಪ್ರಜ್ವಲ್ ರೇವಣ್ಣ
ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು ಇದೀಗ ಅದರಂತೆ ಸಾಮಾನ್ಯ ಕೊಠಡಿ ನೀಡಿರುವ ಎಸ್‌ಐಟಿ ಅಧಿಕಾರಿಗಳು.
ಹುಟ್ಟಿನಿಂದ ಐಷಾರಾಮಿ ಜೀವನಶೈಲಿ ರೂಢಿಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಏಕಾಏಕಿ ಎಸಿ ಇಲ್ಲದ ಸಾಮಾನ್ಯ ಕೊಠಡಿ, ಟಾಯ್ಲೆಟ್ ಬಳಸುವುದು ವಾಕರಿಕೆ ಬಂದಿರಲಿಕ್ಕೂ ಸಾಕು. ಅದರ ಮಾಡುವುದೇನು? ಮಾಡಿದ ಘನಂದಾರಿ ಕೆಲಸಕ್ಕೆ ಅನುಭವಿಸಲೇಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ