IAS vs IPS Fight: ರೋಹಿಣಿ ಸಿಂಧೂರಿ-ರೂಪಾ ಮೌದ್ಗಿಲ್‌ ಫೈಟ್‌ಗೆ ಡಿಕೆ ರವಿ ಪತ್ನಿ ಎಂಟ್ರಿ!

By Santosh Naik  |  First Published Feb 19, 2023, 5:30 PM IST

ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದೆ. ಈಗ ಈ ವಿವಾದಕ್ಕೆ ದಿವಂಗತ ಐಎಎಸ್‌ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರ ಎಂಟ್ರಿಯಾಗಿದೆ.


ಬೆಂಗಳೂರು (ಫೆ. 19): ಐಪಿಎಸ್‌ ಅಧಿಕಾರಿ (ಐಜಿಪಿ) ಡಿ. ರೂಪಾ ಮೌದ್ಗಿಲ್‌ ಅವರು ಭಾನುವಾರ ಬೆಳ್ಳಂಬೆಳಗ್ಗೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕೆಲವೊಂದು ಖಾಸಗಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ರೋಹಿಣಿ ಸಿಂಧೂರಿ ಇಂಥ ಚಿತ್ರಗಳನ್ನು ಪುರುಷರ ಅಧಿಕಾರಿಗಳಿಗೆ ಕಳಿಸುತ್ತಾರೆ ಎನ್ನುವ ಆರೋಪವನ್ನೂ ಮಾಡಿದ್ದಲ್ಲದೆ, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಸಂಜೆಯ ವೇಳೆಗೆ ಮೊದಲ ಪ್ರತಿಕ್ರಿಯೆ ನೀಡಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್‌ಗೆ ತಲೆ ಹಾಳಾಗಿದೆ. ಮಾಧ್ಯಮಗಳಲ್ಲಿ ಪ್ರಚಾರದಲ್ಲಿರುವ ಉದ್ದೇಶದಲ್ಲಿ ಇಂಥ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ಈ ವಿವಾದಕ್ಕೆ ಮತ್ತೊಬ್ಬರ ಎಂಟ್ರಿಯಾಗಿದೆ. ಇಡೀ ರಾಜ್ಯ ರೋಹಿಣಿ ಸಿಂಧೂರಿ ಅವರ ಹೆಸರನ್ನು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕೇಳಿದ್ದು, ಐಎಎಸ್ ಅಧಿಕಾರಿ ಡಿಕೆ ರವಿ ಅವರ ಆತ್ಮಹತ್ಯೆ ಸಂದರ್ಭದಲ್ಲಿ. ಈಗ ಡಿಕೆ ರವಿ ಅವರ ಪತ್ನಿ ಕುಸುಮಾ, ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳ ನಡುವಿನ 'ಚಿತ್ರ' ರಂಗಕ್ಕೆ ಎಂಟ್ರಿಯಾಗಿದ್ದು, ರೋಹಿಣಿ ಸಿಂಧೂರಿಗೆ ಏಟು ನೀಡುವಂತ ಟ್ವೀಟ್‌ ಮಾಡಿದ್ದಾರೆ. 'ಮಾಡಿದ ಕರ್ಮ ಯಾವುದೇ ಕಾರಣಕ್ಕೂ ಬಿಡೋದಿಲ್ಲ.ತಕ್ಷಣವೇ ಬರಬಹುದು ಅಥವಾ ನಿಧಾನವಾಗಿ ಬರಬಹುದು. ಆದರೆ, ಬರೋದಂತೂ ಖಂಡಿತ' ಎಂದು ಟ್ವೀಟ್‌ ಮಾಡಿದ್ದಾರೆ.

“ Karma will get back at you , sooner or later it surely will ”

— Kusuma Hanumantharayappa (@KusumaH_INC)

ಇನ್ನು ಕುಸುಮ ಅವರ ಈ ಟ್ವೀಟ್‌ಗೆ ರೂಪಾ ಮೌದ್ಗಿಲ್‌ ಕೂಡ ಕೋಟ್‌ ಟ್ವೀಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. 'ಮಹಿಳೆಯ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಕುಸುಮ. ಅದರಲ್ಲೂ ಐಎಎಸ್‌ ಕೂಡ ಆಗಿರುವ ಕೆಲವೊಂದು ಮಹಿಳೆಯ ನೋವನ್ನೂ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರು ಅಸಹಾಯಕರಾಗಿರುತ್ತಾರೆ. ಆದರೆ, ಕೊನೆಗೆ ಯಾರಾದರೂ ಒಬ್ಬರೂ ಆದರೂ, ಇಂಥ ಕೆಲಸ ಮಾಡುವವರ ಆರೋಪಿಗಳ ವಿರುದ್ಧ,  ಅದು ಮಹಿಳೆಯೇ ಆಗಿರಲಿ  ಎದುರು ನಿಲ್ಲಬೇಕು. ಈ ವಿಚಾರದಲ್ಲಿ ನಾನು ನಿಮ್ಮೊಂದಿಗೆ ಇದ್ದೆ. ದೇವರು ಆಕೆಗೆ ಇಂಥ ಕೆಲಸಗಳನ್ನು ಮತ್ತೆ ಮಾಡದಂತೆ ಬುದ್ಧಿ ನೀಡಲಿ' ಎಂದು ಟ್ವೀಟ್‌ ಮಾಡಿದ್ದಾರೆ.

Latest Videos

undefined

ಈ ವಿಚಾರದ ಕುರಿತು ಸುದ್ದಿಗೋಷ್ಠಿಯಲ್ಲೂ ಮಾತನಾಡಿದ ಕುಸಮಾ,  'ಐಎಎಸ್ ಮತ್ತು ಐಪಿಎಸ್ ವಾರ್ ಮಧ್ಯೆ ನಾನು ಬರೋದಿಲ್ಲ. ರವಿಯವರ ಹೆಸರು ಬಂದಿರುವ ಕಾರಣ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ಅನುಭವಿಸರುವ ನೋವು, ಕಷ್ಟ ಯಾವ ಹೆಣ್ಣಿಗೂ ಆಗಬಾರದು. ಸಿಬಿಐ ವರದಿಯಲ್ಲಿ  ಮೆಸೇಜ್‌ ಮೂಲಕ ಚಾಟ್‌ ಮಾಡಿರೋ ವಿಚಾರ ಸ್ಪಷ್ಟವಾಗಿದೆ. ನನಗೆ ಸಿಬಿಐ ರಿಪೊರ್ಟ್ ಬಂದಮೇಲೆ ಯಾರೂ  ಚರ್ಚೆ ಮಾಡಲೇ ಇಲ್ಲ. ತನಿಖೆ ಮಾಡಿದ ಮೇಲೆ ಯಾವ ಅಂಶಗಳಿವೆ ಅನ್ನೋದು ಯಾರೂ ಚರ್ಚೆ ಮಾಡಿಲ್ಲ. ಡಿ. ರೂಪ ಅವರ ಮಾಡ್ತಿರೋ ಹೋರಾಟ ಗಮನಸಿಕೊಂಡು ಬರುತ್ತಿದ್ದೇನೆ. ಕರ್ಮ ಯಾರನ್ನೂ ಬಿಡೊದಿಲ್ಲ ಹಾಗಾಗಿ ತಪ್ಪು ಮಾಡಿದವರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು ಡಿಕೆ ರವಿಗೆ ಮಾನಸಿಕ ಅಸ್ವಸ್ಥತನ ಇರಲಿಲ್ಲ. ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು' ಎಂದಿದ್ದಾರೆ.

IAS vs IPS Fight: ಖಾಸಗಿ ಫೋಟೋ ಹಂಚಿಕೆ ಬಗ್ಗೆ ಪ್ರತಿಕ್ರಿಯೆ: ರೂಪಾಗೆ ಮಾನಸಿಕ ಸ್ಥಿಮಿತವಿಲ್ಲ ಎಂದ ರೋಹಿಣಿ ಸಿಂಧೂರಿ

ಕೋಲಾರ ಜಿಲ್ಲಾಧಿಕಾರಿಯಾಗಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ಡಿಕೆ ರವಿ, 2015ರ ಮಾರ್ಚ್‌ 16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅವರ ಸಾವಿನ ಹಿಂದೆ ರೋಹಿಣಿ ಸಿಂಧೂರಿ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಕಾರಣ, ಕೇಸ್‌ನಲ್ಲಿ ರೋಹಿಣಿ ಸಿಂಧೂರಿ ಪಾತ್ರ ಅಷ್ಟಾಗಿ ಸುದ್ದಿಯಾಗಲಿಲ್ಲ.

IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್‌ ಸರಿಯಿಲ್ಲ..! ಎಂದ ಡಿ ರೂಪಾ

ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಬಹಳ ಸಂಭಾವಿತ ವ್ಯಕ್ತಿಯಾಗಿದ್ದರು. ಸಿಬಿಐ ತನಿಖೆ ಮಾಡಿ ಕಳಿಸಿದ ರಿಪೋರ್ಟ್‌ನಲ್ಲಿ ಇವರಿಬ್ಬರ ನಡುವಿನ ಚಾಟ್‌ಗಳ ಬಗ್ಗೆಯೂ ಉಲ್ಲೇಖವಿದೆ. ಎಂದೂ ಅವರು ತಮ್ಮ ಲಿಮಿಟ್‌ ಅನ್ನು  ದಾಟಿ ಮಾತನಾಡಿದವರಲ್ಲ.ಹಾಗೇನಾದರೂ ಮಾಡಿದ್ದರೆ, ತಕ್ಷಣವೇ ಅವರನ್ನು ಬ್ಲಾಕ್‌ ಮಾಡುವ ಆಯ್ಕೆಯೂ ಅವರಲ್ಲಿತ್ತು. ಆದರೆ, ರೋಹಿಣಿ ಸಿಂಧೂರಿ ಎಂದಿಗೂ ರವಿ ಅವರನ್ನ ಪರ್ಮನೆಂಟ್‌ ಆಗಿ ಬ್ಲಾಕ್‌ ಮಾಡಿರಲಿಲ್ಲ. ಇದು ಉತ್ತೇಜನ ನೀಡಿದ ಹಾಗೆಯೇ ಕಾಣುತ್ತದೆ ಎನ್ನುವುದು ಹಲವರ ಅಭಿಪ್ರಾಯ ಎಂದೂ ಹಿಂದೊಮ್ಮೆ ಇದೇ ಕೇಸ್‌ನ ವಿಚಾರದಲ್ಲಿ ರೂಪಾ ಮೌದ್ಗಿಲ್‌ ಮಾತನಾಡಿದ್ದರು.

click me!