IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್‌ ಸರಿಯಿಲ್ಲ..! ಎಂದ ಡಿ ರೂಪಾ

Published : Feb 19, 2023, 03:37 PM ISTUpdated : Feb 20, 2023, 10:44 AM IST
IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್‌ ಸರಿಯಿಲ್ಲ..! ಎಂದ ಡಿ ರೂಪಾ

ಸಾರಾಂಶ

ರೋಹಿಣಿ ಸಿಂಧೂರಿ ಪ್ರೊಬೆಷನರಿ ಡಿಸಿ ಆಗಿದ್ದಾಗ ಅವರ ಪತಿಯೊಂದಿಗಿನ ಸಂಬಂಧ ಹಾಳಾಗಿತ್ತು. ಬರಬರುತ್ತಾ ಅವರ ಬಿಹೇವಿಯರ್‌ ಸರಿಯಾಗಿ ಕಾಣಿಸಲಿಲ್ಲ. ಯಾರೂ ಕಳಿಸಬಾರದಂತ ಪಿಕ್ಸ್ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ. ಈಗ ಹಂಚಿಕೊಂಡಿರುವ ಫೋಟೋಗಳು ಸ್ಯಾಂಪಲ್ ಅಷ್ಟೇ.

ಬೆಂಗಳೂರು (ಫೆ.19): ರೋಹಿಣಿ ಸಿಂಧೂರಿ ಪ್ರೊಬೆಷನರಿ ಡಿಸಿ ಆಗಿದ್ದಾಗ ಅವರ ಪತಿಯೊಂದಿಗಿನ ಸಂಬಂಧ ಹಾಳಾಗಿತ್ತು. ಆದರೆ, ಬರಬರುತ್ತಾ ಅವರ ಬಿಹೇವಿಯರ್‌ ಸರಿಯಾಗಿ ಕಾಣಿಸಲಿಲ್ಲ. ಕಳಿಸಬಾರದಂತ ಪಿಕ್ಸ್ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ. ನಂತರ ಡಿ.ಕೆ. ರವಿ ಅವರ ವಿಚಾರ ಮಾಧ್ಯಮಗಳಿಂದ ಗೊತ್ತಾಯಿತು. ನನಗೆ ಗೊತ್ತಿರುವಷ್ಟು ಮಾಹಿತಿ ಹಂಚಿಕೊಂಡಿದ್ದೇನೆ. ಆದರೆ, ಈಗ ಹಂಚಿಕೊಂಡಿರುವ ಫೋಟೋಗಳು ಸ್ಯಾಂಪಲ್ ಅಷ್ಟೇ ಎಂದು ಹೇಳುವ ಮೂಲಕ ಇನ್ನಷ್ಟು  ದಾಖಲೆಗಳು ಇರುವ ಬಗ್ಗೆ ಐಜಿಪಿ ಡಿ.ರೂಪಾ ಸುಳಿವು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು, ಶಾಸಕರ ಜೊತೆ ಸಂಧಾನಕ್ಕೆ ಹೋದರು ಅಂತಾ ಟಿವಿಯಲ್ಲಿ ನೋಡಿದ್ದೆ. ಯಾವ ನಿಯಮದಲ್ಲಿ ಸಂಧಾನ ಸಾಧ್ಯ. ಇವರ ಹತ್ತಿರ ಏನಿದೆ ಮುಚ್ಚಿಟ್ಟುಕೊಳ್ಳೋಕೆ. ಆ ತರಹದ ಅಕ್ರಮ ಏನು ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿರೋದು ಇದೇ ಮೊದಲು. ಇವರ ನಡವಳಿಕೆ ಸ್ಟಾರ್ಟಿಂಗ್ ಇಂದ ಹೇಗಿತ್ತು. ಎಷ್ಟೊ ವಿಚಾರಗಳು ಮೊದಲಿನಿಂದ ಗೊತ್ತಿಲ್ಲ ಎಂದು ಹೇಳಿದರು. 

ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ: ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಡಿ. ರೂಪಾ

ಸಂಧಾನ ವಿಷಯ ಬಂದಾಗ ಮೈ ಉರಿದೋಯ್ತು: ಸಂಧಾನ ವಿಷಯ ಬಂದಾಗ ಮೈ ಉರಿದೋಯ್ತು. ಜನ ಸಾಯ್ತಿದ್ರು ತನ್ನ ಮೋಜಿಗೆ ಸ್ವಿಮ್ಮಿಂಗ್ ಪೂಲ್ ಮಾಡಿಸಿಕೊಂಡ್ರು ಏನರ್ಥ. ಆಕೆಗೆ ಮಾನವೀಯತೆ ಇದ್ಯಾ. ಪ್ರಾಥಮಿಕ ತನಿಖೆಯಿಂದ ಡಾ. ರವಿ ಶಂಕರ್ ಅವರಿಂದ ಪ್ರೂವ್ ಆಗಿದೆ. ಪ್ರತೀಬಾರಿ ಇಷ್ಟೆಲ್ಲಾ ಮಾಡಿದ್ರೂ ಅವರಿಗೆ ಶಿಕ್ಷೆ ಆಗ್ತಿಲ್ಲ. ಅವರು ಒಂದು ಗುಳ್ಳೆ ಬೆಳೆಸ್ಕೊಂಡಿದ್ರು, ಅದನ್ನ ನಾನು ಇವತ್ತು ಹೊಡೆದಿದ್ದೇನೆ. ಆಕೆ ಸಿಂಪತಿ ತಗೊಳೋಕೆ ಪ್ರಯತ್ನ ಮಾಡಬಹುದು. ಕೆಲವರಿಗೆ ವಾಯ್ಸ್ ಇರುತ್ತೆ ಕೆಲವರು ನನ್ನಂಥವರು ಮಾತಾಡಬಹುದು ಎಂದರು.

ಕಳಿಸಬಾರದ ಫೋಟೋ ಕಳಿಸಿದ್ದಾರೆ: ಕಳಿಸಬಾರದಂತ ಪಿಕ್ಸ್ ಕೆಲ ಐಎಎಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಗಮನಕ್ಕೆ ತಂದಿದ್ದೇನೆ. ಈಗ ಹಾಕಿರೊ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ. ಜವಬ್ದಾರಿಯುತ ಸ್ಥಾನದ ಐಎಎಸ್ ಅಧಿಕಾರಿ ಸ್ಪಾ ಪಿಕ್ಸ್ , ತಲೆ ದಿಂಬಿನ ಪಿಕ್ಸ್ ಕಳಿಸ್ತಾರೆ ಅಂದ್ರೆ ಏನರ್ಥ. ಇದರಲ್ಲಿ ಯಾವುದೇ ಪ್ರೈವೇಟ್ ಮ್ಯಾಟರ್ ಬರೋದಿಲ್ಲ. ಸರ್ವಿಸ್ ರೂಲ್ಸ್ ಪ್ರಕಾರ ಕೆಲ ನಿಯಮ ಪಾಲನೆ ಮಾಡಬೇಕು. ಸಂಧಾನ ವಿಷಯ ಬಂದಾಗ ಮೈ ಉರಿದೋಯ್ತು. ಆ ಪಿಕ್ಸ್ ಗಳು ಒಂದು ತಿಂಗಳ ಹಿಂದೆ ಸಿಕ್ಕಿದ್ದು. ಕೆಲವರಿಗೆ ವಾಯ್ಸ್ ಇರುತ್ತೆ ಕೆಲವರು ನನ್ನಂಥವರು ಮಾತಾಡಬಹುದು. ಈಗಾಗಲೆ ಸರ್ಕಾರದ ಎಲ್ಲರ ಗಮನಕ್ಕೆ ಬಂದಿದೆ. ಯಾವ ರೀತಿಯ ತನಿಖೆ ಆಗುತ್ತೆ ಅಂತಾ ಕಾದು ನೋಡ್ತೀನಿ ಎಂದು ಹೇಳಿದರು.

IAS vs IPS Fight:ರೋಹಿಣಿ ಸಿಂಧೂರಿ ಖಾಸಗಿ ಚಿತ್ರ ಫೋಸ್ಟ್ ಮಾಡಿದ ಡಿ. ರೂಪ

ಆಕೆಗೆ ಬಿಹೇವಿಯರ್ ಸರಿ ಇರಲಿಲ್ಲ: ನಾನು ಮತ್ತು ನನ್ನ ಪತಿ ಮೌನಿಶ್ ಮೌದ್ಗಿಲ್ ಆಕೆಗೆ ಸಾಕಷ್ಟು ಸಹಾಯ ಮಾಡಿದ್ದೀವಿ. ಈಕೆ ಸಿಎಟೆಗೆ ಹೋಗಲು ಡ್ರಾಫ್ಟ್ ಮಾಡಿಕೊಟ್ಟಿದ್ದು ನಮ್ಮ ಮನೆಯವರು. ಬರು ಬರುತ್ತಾ ಇವರ ಬಗ್ಗೆ ಗೊತ್ತಾಯ್ತು. ಸರಿಯಾದ ದಾರಿಯಲ್ಲಿ ನಡೆದುಕೊಳ್ಳೋಕೆ ದಾರಿ ಇರುತ್ತದೆ. ಆಕೆ ಬಗ್ಗೆ ತಿಳಿದಿರೋದನ್ನೆಲ್ಲಾ ಬರೆದಿದ್ದೀನಿ. ನಾನು, ನಮ್ಮ ಮನೆಯವರು ಸಾಕಷ್ಟು ಹೆಲ್ಪ್ ಮಾಡಿದ್ದೀವಿ ಆಕೆಗೆ. ಆದ್ರೆ ಬರುಬುರುತ್ತಾ ಆಕೆಗೆ ಬಿಹೇವಿಯರ್ ಸರಿ ಇರಲಿಲ್ಲ. ಡಿಕೆ ರವಿ ಜೊತೆಗಿನ ವಿಚಾರ ಮಾಧ್ಯಮಗಳಲ್ಲಿ ಬಂತು. ಆಕೆ ಪ್ರೊಬೇಷನರಿ ಇದ್ದಾಗ ಡಿಸಿ ಹಾಗೂ ಆಕೆಯ ಪತ್ನಿಯ ಸಂಬಂಧ ಹಾಳಾಗಿದೆ. ಈ ಬಗ್ಗೆ ನೀವೆ ತನಿಖೆ ನಡೆಸಿ ಎಂದು ಪ್ರಶ್ನೆಯನ್ನು ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!