ಯಶ್‌ ಅಭಿಮಾನಿಗಳ ದುರಂತ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ!

Published : Feb 29, 2024, 03:00 PM ISTUpdated : Mar 01, 2024, 09:36 AM IST
ಯಶ್‌ ಅಭಿಮಾನಿಗಳ ದುರಂತ ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ!

ಸಾರಾಂಶ

ಯಶ್ ಬರ್ತಡೇ ವೇಳೆ ಗದಗನ ಸೂರಣಗಿ ಅಭಿಮಾನಿಗಳ ದುರಂತ ಸಾವು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ದೇವಸ್ಥಾನ ಉದ್ಘಾಟನೆಗೆ ಬಂದಿದ್ದ ರಾಕಿಂಗ್ ಸ್ಟಾರ್ ಯಶ್. ಈ ವೇಳೆ ಯಶ್ ಕಾರು ಹಿಂಬಾಲಿಸಿದ ಅಭಿಮಾನಿಯ ಕಾಲ ಮೇಲೆ ಹರಿದ ಬೆಂಗಾವಲು ವಾಹನ. ತೀವ್ರ ಗಾಯಗೊಂಡ ಅಭಿಮಾನಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಬಳ್ಳಾರಿ ಫೆ.29: ರಾಕಿಂಗ್ ಸ್ಟಾರ್ ಯಶ್‌ಗೆ ಅಭಿಮಾನಿಗಳನ್ನು ಕಂಡರೆ ಖುಷಿಪಡೋದ್ಕಿಂತ ಆತಂಕ ಪಡುವಂತಾಗಿದೆ. ಅದೇನು ಸಮಸ್ಯೆ ತಂದೊಡ್ಡುತ್ತಾರೋ ಎಂಬ ಅಳುಕಿನಿಂದಲೇ ಹೊರಗೆ ಬರುವಂತಾಗಿದೆ. ಹೌದು ಕಳೆದ ಬಾರಿ  ಅವರ ಜನ್ಮದಿನದ ವೇಳೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಅಭಿಮಾನಿಗಳು ಮೃತಪಟ್ಟರಲ್ಲ, ಆ ಮೂವರು ಅಭಿಮಾನಿಗಳ ಸಾವಿನ ದುರ್ಘಟನೆಯಿಂದಲೇ ಯಶ್ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಮತ್ತೊಂದು ಘಟನೆ ನಡೆದಿದೆ.

 ರಾಕಿಂಗ್ ಸ್ಟಾರ್ ನಟ ಯಶ್ ನೋಡಲು ಬಂದ ಅಭಿಮಾನಿ ಕಾಲ ಮೇಲೆ ಕಾರಿನ ಚಕ್ರ ಹರಿದು ಗಾಯಗೊಂಡಿರುವ ಘಟನೆ ಬಳ್ಳಾರಿಯ ಬಾಲಾಜಿ ನಗರದ ಕ್ಯಾಂಪ್‌ನಲ್ಲಿ ನಡೆದಿದೆ. ನಟ ಯಶ್ ನೋಡಲು  ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದಿಂದ ಬಂದಿದ್ದ ಯುವಕ ವಸಂತ. ಯಶ್ ನೋಡಲು ಕಾರಿನ ಹಿಂದೆ ಓಡುವಾಗ ಕಾಲಿನ ಮೇಲೆ ಹರಿದ ಬೆಂಗಾವಲು ವಾಹನ. 

ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು

ಹೇಗಾಯ್ತು?

ಬಳ್ಳಾರಿ ಹೊರವಲಯದ ಬಾಲಾಜಿ ನಗರದಲ್ಲಿ ನೂತನವಗಿ ನಿರ್ಮಾಣವಾಗಿರುವ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ನಟ ಯಶ್ ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್ ಬರುವ ಸುದ್ದಿ ಕೇಳಿಯೇ ಮೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿ ಹಳ್ಳಿಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು. ಅವರಲ್ಲಿ ಸಿರಗುಪ್ಪದಿಂದ ಬಂದಿದ್ದ ವಸಂತ ಎಂಬ ಯುವಕ. ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಯಶ್ ಕಾರನ್ನ ಹಿಂಬಾಲಿಸಿಕೊಂಡು ಓಡಿ ಬಂದಿರುವ ಅಭಿಮಾನಿ. ಈ ವೇಳೆ ಯಶ್ ಬೆಂಗಾವಲು ವಾಹನವೊಂದು ಅಭಿಮಾನಿಯ ಕಾಲಿನ ಮೇಲೆ ಹರಿದಿದೆ. ಕಾರಿನ ಚಕ್ರ ಹರಿದು ಪಾದ ತೀವ್ರವಾಗಿ ಗಾಯಗೊಂಡು ರಕ್ತ ಸುರಿದಿದೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯಶ್‌ ಮುಂದಿನ ಸಿನ್ಮಾದ ಹೀರೋಯಿನ್‌ ಸಂಯುಕ್ತಾ ಮೆನನ್‌, ಸಖತ್‌ ಬೋಲ್ಡ್‌ & ಬ್ಯೂಟಿಫುಲ್

ಅಭಿಮಾನಿಗಳಿಂದ ಪದೇಪದೆ ದುರಂತ:

ಕಳೆದ ಜನೆವರಿಯಲ್ಲಿ  ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಮೃತಕುಟುಂಬಗಳಿಗೆ ಸಾಂತ್ವನ ಹೇಳಲು ಗದಗ ಜಿಲ್ಲೆಯ ಸೂರಣಗಿಗೆ ಭೇಟಿ ನೀಡಿದ್ದ ವೇಳೆ ಅಭಿಮಾನಿಯೊಬ್ಬ ಯಶ್ ಕಾರು ಹಿಂಬಾಲಿಸಿ ಬೆಂಗಾವಲು ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ತೀವ್ರ ಬೇಸರಗೊಂಡಿದ್ದ ನಟ ಯಶ್. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಗೋವಾಕ್ಕೆ ತೆರಳಿಬಿಟ್ಟಿದ್ದರು. ಅಭಿಮಾನಿಗಳೆಂದರೆ ಮನೆ ಸದಸ್ಯರಂತೆ ನೋಡುವ ಯಶ್ ಈ ಘಟನೆಯಿಂದ ಬೇಸರ ಮಾಡಿಕೊಂಡಿದ್ದರು. ಇದೀಗ ಮತ್ತೆ ಅಭಿಮಾನಿಯೊಬ್ಬ ಯಶ್ ನೋಡಲು ಹಿಂಬಾಲಿಸಿ ಗಾಯಗೊಂಡಿರುವುದು ಯಶ್‌ಗೆ ತಲೆನೋವಾಗಿ ಪರಿಣಮಿಸಿರಲಿಕ್ಕೆ ಸಾಕು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!