ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ

By Sathish Kumar KH  |  First Published Aug 26, 2023, 1:02 PM IST

ರಾಜ್ಯದ ಏಕೈಕ ಎಕ್ಸ್‌ಪ್ರೆಸ್‌ ವೇ ಆಗಿರುವ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ನಿಮ್ಮ ಕಾರು ದರೋಡೆ ಆಗಬಾರದು ಎಂದರೆ ವಾಹನ ಸವಾರರು ಈ ನಿಯಮ ಪಾಲಿಸಬೇಕು ಎಂದು ಸಂಸದ ಪ್ರತಾಪ್‌ಸಿಂಹ ಸಲಹೆ ನೀಡಿದ್ದಾರೆ.


ಬೆಂಗಳೂರು (ಆ.23): ಕರ್ನಾಟಕ ಏಕೈಕ ಎಕ್ಸ್‌ಪ್ರೆಸ್‌ ವೇ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಕಳ್ಳರು ಹಾಗೂ ದರೋಡೆಕೋರರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರಾತ್ರಿ ವೇಳೆ ಎಕ್ಸ್‌ಪ್ರೆಸ್‌ವೇನಲ್ಲಿ ಹೋಗುವಾಗ ನಿದ್ದೆ ಬಂದಿದೆ ಎಂದು ಬೈಪಾಸ್‌ ಅಥವಾ ರಸ್ತೆಯ ಬಳಿ ವಾಹನ ನಿಲ್ಲಿಸಬೇಡಿ ಎಂದು ಸಂಸದ ಪ್ರತಾಪ್‌ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಚೆರಂಡಿ, ವಿದ್ಯುತ್, ಟ್ರ್ಯಾಫಿಕ್ ಸಮಸ್ಯೆ ಇದೆ. ಕೆ.ಆರ್ ಮೀಲ್ ಬಳಿ ಸೇತುವೆ ಬೇಕೆಂದು ಕೇಳಿದ್ದಾರೆ. ಜೊತೆಗೆ, ಸರ್ವಿಸ್ ರಸ್ತೆಯಲ್ಲಿ ತಡೆಗೋಡೆ ಕೇಳಿದ್ದಾರೆ. ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ದಶಪಥ ಹೆದ್ದಾರಿಯಲ್ಲಿರುವ ಎಲ್ಲ ಸಮಸ್ಸಯೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಇನ್ನು ಹೆದ್ದಾರಿಯಲ್ಲಿ ಡರೋಡೆ ಆಗುತ್ತಿರುವ ವಿಚಾರವಾಗಿ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಎಷ್ಟೇ ಹೈವೇ ಪೆಟ್ರೋಲಿಂಗ್‌ ಮಾಡಿದರೂ ದರೋಡೆ ಪ್ರಕರಣಗಳು ನಿಲ್ಲುತ್ತಿಲ್ಲ ಎಂದು ತಿಳಿಸಿದರು.

Tap to resize

Latest Videos

undefined

ಬಿಜೆಪಿ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲು: ಕುಟುಕಿದ ಕಾಂಗ್ರೆಸ್‌

ಹೆದ್ದಾರಿಯಲ್ಲಿ ಕಾರ್‌ ನಿಲ್ಲಿಸಿದ್ರೆ ಕಳ್ಳತನ ಗ್ಯಾರಂಟಿ: ಆದರೆ, ಬೆಂಗಳೂರಿನಿಂದ ಮೈಸೂರು ಕಡೆಗೆ ಬರುವವರು ಅಥವಾ ಬೇರೆ ಸ್ಥಳಗಳಿಂದ ಮೈಸೂರಿಗೆ ಬಂದವರು ಎಕ್ಸ್‌ಪ್ರೆಸ್‌ ವೇಗೆ ಹೋಗುವ ಮುನ್ನ ನಿದ್ರೆ ಬಂದಿದೆ ಎಂದು ಬೈಪಾಸ್‌ಗಳಲ್ಲಿ ಅಥವಾ ದಶಪಥ ಹೆದ್ದಾರಿಯ ಬಳಿಯಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ಒಂದು ವೇಳೆ ರಾತ್ರಿವೇಳೆ ನಿದ್ರೆ ಬಂದರೂ ಬಂದ್ರೆ ಟೋಲ್ ಪ್ಲಾಜ್ ಬಳಿ ಪಾರ್ಕ್ ಮಾಡಿ ನಿದ್ರಿಸಿ. ರಸ್ತೆ ಮಧ್ಯ ನಿಲ್ಲಿಸಬೇಡಿ. ನಿರ್ಜನ ಪ್ರದೇಶದಲ್ಲಿ ಕಾರ್ ನಿಲಿಸಿದ್ರೆ ಯಾರೋ ಬಂದು ಕಳ್ಳತನ ಮಾಡುತ್ತಿದ್ದಾರೆ. ಹೈವೇ ಪ್ಯಾಟ್ರೋಲಿಂಗ್ ಎಷ್ಟೇ ಮಾಡಿದ್ತು ಕಳ್ಳತನ ನಡೆಯುತ್ತಿದೆ. ಹೀಗಾಗಿ, ಟೋಲ್ ಪ್ಲಾಜಾ ಬಳಿ ಕಾರ್ ನಿಲ್ಲಿಸಿ ನಿದ್ರೆ ಮಾಡಿ. ಬೈಪಾಸ್ ಗಳ ಬಳಿ ಕಾರ್ ನಿಲ್ಲಿಸಿ‌ ನಿದ್ರೆ ಮಾಡಬೇಡಿ ಎಂದು ಸಲಹೆಯ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೆದ್ದಾರಿ ಕಳ್ಳರ ವೀಕ್‌ನೆಸ್‌ ಪಾಯಿಂಟ್‌ ಸಿಕ್ಕಿದೆ: ದಶಪಥ ಹೆದ್ದಾರಿಯಲ್ಲಿ ಕಳ್ಳರ ಸಂಖ್ಯೆ ಒಂದು ರೀತಿಯಲ್ಲಿ ಜಾಸ್ತಿಯಾಗಿದೆ. ಈಗ ಕಳ್ಳರ ವೀಕ್‌ನೆಸ್ ಪಾಯಿಂಟ್‌ಗಳನ್ನ ಪೊಲೀಸರು ತಿಳಿದುಕೊಂಡಿದ್ದಾರೆ. ಇನ್ನು ನಾವಿರುವ ಸಮಾಜದಲ್ಲೇ ಕಳ್ಳರು, ದರೋಡೆಕೋರರು ಇದ್ದಾರೆ. ಹೀಗಾಗಿ ನಾವೇ ಆ ಬ್ಲೇಮ್ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಜಾಗೃತರಾಗಿರಬೇಕು. ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿದೆ. ಜನರು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ. ನಾನು ಸರ್ಕಾರ ಕೆಲಸಗಳ ಬಗ್ಗೆ ಮಾತನಾಡಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಕಾಂಗ್ರೆಸ್‌ ಸೇರೊಲ್ಲವೆಂದು ಹೇಳುತ್ತಲೇ ಸಿಎಂ ಸಿದ್ದರಾಮಯ್ಯ ಭೇಟಿಯಾದ ಶಾಸಕ ಶಿವರಾಂ ಹೆಬ್ಬಾರ್

ಇನ್ನು ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ನಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರನ್ನು ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಾದು ಹೋಗುವ ಹೈವೇ ಬಳಿಯ ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆ ಇತ್ತು. ಈ ಹಿಂದೆ ಹಲವು ಸಮಸ್ಯೆಗಳನ್ನ ಬಗೆಹರಿಸಲಾಗಿದೆ. ಸದ್ಯ ಯುಜಿಡಿ ನೀರು ರಸ್ತೆಗೆ ಬರುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ. ಜೊತೆಗೆ‌ ಹಲವೆಡೆ ಮೇಲ್ಸೇತುವೆ ಮಾಡಬೇಕಿದೆ ಎಂದು ತಿಳಿಸಿದರು.

click me!