ಬೆಂಗಳೂರು: ಹಾಡುಹಗಲೇ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕು ಇರಿದು ದರೋಡೆ !

By Kannadaprabha News  |  First Published Sep 11, 2023, 5:55 AM IST

ಹಾಡುಹಗಲೇ ಅಪರಿಚಿತನೊಬ್ಬ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆಗೈದು ಸುಮಾರು .52 ಸಾವಿರಕ್ಕೂ ಹೆಚ್ಚು ನಗದನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಬನ್ನೇರುಘಟ್ಟಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ.


ಬೆಂಗಳೂರು ದಕ್ಷಿಣ (ಸೆ.11) :  ಹಾಡುಹಗಲೇ ಅಪರಿಚಿತನೊಬ್ಬ ಅಪೊಲೋ ಫಾರ್ಮಸಿಗೆ ನುಗ್ಗಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆಗೈದು ಸುಮಾರು .52 ಸಾವಿರಕ್ಕೂ ಹೆಚ್ಚು ನಗದನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಬನ್ನೇರುಘಟ್ಟಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟಮುಖ್ಯರಸ್ತೆಯಲ್ಲಿ ಇರುವ ಗೊಟ್ಟಿಗೆರೆಯ ಅಪೊಲೋ ಫಾರ್ಮಸಿಗೆ ಭಾನುವಾರ ಬೆಳಗ್ಗೆ 7.40ರ ಸುಮಾರಿಗೆ ಹೆಲ್ಮೆಟ್‌ ಮತ್ತು ಮಾÓ್ಕ… ಧರಿಸಿ ಕೈನಲ್ಲಿ ಚಾಕುವಿರುವ ಚೀಲ ಹಿಡಿದು ಫಾರ್ಮಿಸಿಗೆ ಗ್ರಾಹಕನ ಸೋಗಿನಲ್ಲಿ ಓರ್ವ ನುಗ್ಗಿದ್ದಾನೆ. ಕೌಂಟರ್‌ನಲ್ಲಿ ಒಂಟಿಯಾಗಿದ್ದ ಫಾರ್ಮಸಿ ಸಿಬ್ಬಂದಿ ವಿN್ನೕಶ್‌ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪ್ರತಿರೋಧ ಒಡ್ಡಿದ ಫಾರ್ಮಸಿ ಸಿಬ್ಬಂದಿ ವಿN್ನೕಶ್‌ನ ಎದೆಗೆ ಕಳ್ಳ ಚಾಕುವಿನಿಂದ ಇರಿದಿದ್ದಾನೆ. ಆದರೆ ವಿಘ್ನೇಶ್‌ ಧರಿಸಿದ ಜಾಕೆಟ್‌ನಿಂದಾಗಿ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ಆಗುಂತಕ ವಿಘ್ನೇಶ್‌ ಅವರ ಕಾಲಿಗೆ ಇರಿದು ಗಾಯಗೊಳಿಸಿ ಕ್ಯಾಶ್‌ ಕೌಂಟರ್‌ನಲ್ಲಿದ್ದ ನಗದನ್ನು ದೋಚಿ ಪರಾರಿಯಾಗಿದ್ದಾನೆ.

Tap to resize

Latest Videos

ಮಾಜಿ ಸಂಸದ ಪತ್ನಿಯನ್ನೂ ಬಿಡದ ಕಳ್ಳರು! ನೀರು ಕೇಳೋ ನೆಪದಲ್ಲಿ ಸರ ಕಿತ್ತು ಪರಾರಿ!

ವಿಷಯ ತಿಳಿಯುತ್ತಿದ್ದಂತೆ ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಹುಳಿಮಾವು ಠಾಣೆ ಪೊಲೀಸರು ಘಟನೆ ಸಂಪೂರ್ಣ ವಿವರ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಅಪೊಲೋ ಫಾರ್ಮಸಿ ಹಾಗೂ ಕೆಲವು ಮೆಡಿಕಲ್‌ ಶಾಪ್‌ಗಳಲ್ಲಿ ಹೆಚ್ಚಾಗಿ ಒಬ್ಬರೇ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಕಾರ್ಯ ನಿರ್ವಹಿಸಿವುದೇ ಹೆಚ್ಚು. ಸುರಕ್ಷತೆ ಬಗ್ಗೆ ಮಾಲಿಕರು ಹಾಗೂ ಪೊಲೀಸರು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಗಲೆಲ್ಲ ಆಟೋದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳಿಗೆ ನುಗ್ಗುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

click me!