Shivamogga : ರಸ್ತೆ ಡಾಂಬರೀಕರಣಕ್ಕಾಗಿ 10 ದಿನಗಳ ಕಾಲ Agumbe Ghat ಬಂದ್‌

By Kannadaprabha News  |  First Published Mar 4, 2022, 1:15 AM IST

ಆಗುಂಬೆ ಘಾಟಿ 10 ದಿನಗಳ ಕಾಲ ಬಂದ್

ಸಂಚಾರಕ್ಕೆ ಬದಲಿ ಮಾರ್ಗ ಬಳಸುವಂತೆ ಜಿಲ್ಲಾಡಳಿತದ ಸೂಚನೆ

ಕಳೆದ ಎರಡು ವರ್ಷಗಳಲ್ಲ ಶಿವಮೊಗ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅದ್ಭುತ ಅಭಿವೃದ್ಧಿ


ತೀರ್ಥಹಳ್ಳಿ (ಮಾ.3): ಆಗುಂಬೆ ಘಾಟಿ​ಯಿಂದ (Agumbe Ghat) ಹೆಬ್ರಿವರೆಗಿನ (Hebri) ರಸ್ತೆ (Road) ಡಾಂಬರೀಕರಣದ ಸಲುವಾಗಿ ಮಾ.5ರಿಂದ ಮಾ.15 ರವರೆಗೆ 10 ದಿನಗಳ ಕಾಲ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸುಮಾರು 6 ಕೋಟಿ ವೆಚ್ಚದಲ್ಲಿ ನಡೆಯುವ ಈ ಕಾಮಗಾರಿಯಲ್ಲಿ ಆಗುಂಬೆ ಘಾಟಿಯ ಫಾರೆಸ್ಟ್‌ ಗೇಟಿನಿಂದ (Forest Gate) ಹೆಬ್ರಿ ಪೇಟೆಯ ಬ್ರಹ್ಮಾವರ ರಸ್ತೆ (Bramhavar Road) ತಿರುವಿನವರೆಗೆ ಡಾಂಬರೀಕರಣ ನಡೆಯಲಿದೆ. ಮಾ.5ರಂದು ಬೆಳಗ್ಗೆ 7ರಿಂದ ಮಾ.15ರ ಸಂಜೆ 7 ಗಂಟೆವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
 
ಈ ಅವಧಿಯಲ್ಲಿ ಪ್ರಯಾಣಿಕರು ಲಘುವಾಹನಗಳು ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ- ಮಾಲಾ ಘಾಟ್‌- ಕಾರ್ಕಳ- ಉಡುಪಿಯ ಮೂಲಕ (ರಾಷ್ಟ್ರೀಯ ಹೆದ್ದಾರಿ 169), ಲಕ್ಷು ಮತ್ತು ಭಾರಿ ವಾಹನಗಳು ತೀರ್ಥಹಳ್ಳಿ ಮಾಸ್ತಿಕಟ್ಟೆ- ಹೊಸಂಗಡಿ- ಸಿದ್ದಾಪುರ-ಕುಂದಾಪುರ-ಉಡುಪಿ(ರಾಜ್ಯ ಹೆದ್ದಾರಿ 52) ಯ ಮೂಲಕ ಸಂಚಾರಕ್ಕೆ ಬದಲಿ ಮಾರ್ಗವನ್ನು ಅನುಸರಿಸುವಂತೆ ಜಿಲ್ಲಾಡಳಿತ ಪ್ರಕಟಣೆ ಸೂಚಿಸಿದೆ.

ಶಿವಮೊಗ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅದ್ಭುತ ಅಭಿವೃದ್ಧಿ: ಕಳೆದ ಎರಡು ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ (Shivamogga Loksabha) ಕ್ಷೇತ್ರದಲ್ಲಿ ಕಳೆದ ನಿರೀಕ್ಷೆಗೂ ಮೀರಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ ಕೈಗೊಂಡಿದ್ದು, ಫೆ.28ರ ಸೋಮವಾರ ರಾ.ಹೆ. 766 (ಸಿ) ನಲ್ಲಿ ಕೊಲ್ಲೂರು ಪಟ್ಟಣ- ನಾಗೋಡಿ-ಜಯನಗರದಿಂದ ಹೊಸನಗರ, ಬಟ್ಟೆಮಲ್ಲಪ್ಪದಿಂದ -ಯಡೇಹಳ್ಳಿ ಮತ್ತು ಕಿಟ್ಟದ ಹಳ್ಳಿಯಿಂದ ಮಾಸೂರು- ರಟ್ಟೆಹಳ್ಳಿ ಮತ್ತು ಹಲಗೇರಿಯರೆಗೆ ಒಟ್ಟು 27.78 ಕಿ.ಮೀ. ದ್ವಿಪಥದ ರಸ್ತೆ ನಿರ್ಮಾಣಕ್ಕೆ 218.93 ಕೋಟಿ ರು. ವೆಚ್ಚದ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರು ಮಂಗಳೂರಿನಲ್ಲಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಸಂಸದ ಬಿ.ವೈ. ರಾಘವೇಂದ್ರ (BY Raghavendra) ಈ ಸಂಬಂಧ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ (Nithin Gadkari) ಅವರ ನೇತೃತ್ವದಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅದರಲ್ಲಿಯೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಹಲವು ಕಾಮಗಾರಿಗಳಿಗೆ ಮಂಜೂರಾತಿ ದೊರಕಿಸಿಕೊಡಲು ತಾವು ಪ್ರಾಮಾಣಿಕ ಯತ್ನ ನಡೆಸಿದ ಫಲವಾಗಿ ಕಳೆದ ಎರಡು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಮಂಜೂರಾತಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾ.ಹೆ. ಪ್ರಾಧಿಕಾರದಿಂದ ತುಮಕೂರಿನಿಂದ ಶಿವಮೊಗ್ಗಕ್ಕೆ ಬರುವ 214.45 ಕಿ.ಮೀ ಉದ್ದದ 7162 ಕೋಟಿಯ ಕಾಮಗಾರಿ ಹಾಗೂ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಸುಮಾರು 1340 ಕೋಟಿ ರು.ಗಳ ಕಾಮಗಾರಿಗಳಿಗೆ ಈಗಾಗಲೇ ಮಂಜೂರಾತಿ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗಿರುತ್ತದೆ. ಇದಲ್ಲದೆ, ಸುಮಾರು 3453 ಕೋಟಿ ಅಂದಾಜಿನ ಕ್ಷೇತ್ರದ ರಾಷ್ಠಿ$›ೕಯ ಹೆದ್ದಾರಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಮಂಜೂರಾತಿಗೆ ಪ್ರಯತ್ನ ಮುಂದುವರೆಸಲಾಗಿದ್ದು, ಅದರ ಫಲವಾಗಿ ಫೆ.14ರಂದು ನಡೆದ ಭೂಸಾರಿಗೆ ಮಂತ್ರಾಲಯದ ಎಸ್‌ಎಫ್‌ಸಿ ಸಭೆಯಲ್ಲಿ 218. 93 ಕೋಟಿ ರು. ವೆಚ್ಚದ ಹಲವು ಕಾಮಗಾರಿಗಳಿಗೆ ಮಂಜೂರಾತಿ ದೊರಕಿದೆ ಎಂದು ತಿಳಿಸಿದ್ದಾರೆ.

'ಬಿಜೆಪಿ ಹರ್ಷನ ತಂಗಿಗೆ MLA, ತಾಯಿಗೆ MP ಟಿಕೆಟ್ ಕೊಡಲಿ, ಅವಿರೋಧವಾಗಿ ಆಯ್ಕೆ ಮಾಡಿಸೋಣ'
ರಾಜ್ಯ ಮಧ್ಯ ಭಾಗ ಮತ್ತು ಕರಾವಳಿಯನ್ನು ಸಂಪರ್ಕಿಸುವ 203 ಕಿ. ಮೀ. ದೂರದ ರಾ.ಹೆ. 766(ಸಿ) ಬೈಂದೂರು - ರಾಣೆಬೆನ್ನೂರು ರಸ್ತೆಯು ಪ್ರಮುಖವಾಗಿದ್ದು, 2014 ರಲ್ಲಿ ಲೋಕಸಭಾ ಸದಸ್ಯರಾಗಿದ್ದ ಬಿ. ಎಸ್‌. ಯಡಿಯೂರಪ್ಪ ಅವರ ವಿಶೇಷ ಪ್ರಯತ್ನದಿಂದಾಗಿ ಇದನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಲಾಯಿತು. ನಂತರದಲ್ಲಿ ಈ ಹೆದ್ದಾರಿಯನ್ನು ಆನಂದಪುರದಿಂದ ಶಿಕಾರಿಪರ ಹಾಗೂ ಹಲಗೇರಿಯಿಂದ ರಾಣೇಬೆನ್ನೂರುವರೆಗೆ ಸೇರಿ ಓಟ್ಟು 41 ಕಿ.ಮೀ ರಸ್ತೆಯನ್ನು ರಾಜ್ಯ ಸರ್ಕಾರದ ಕೆ. ಶಿಪ್‌ ವತಿಯಿಂದ ದ್ವಿಪಥದ ರಸ್ತೆ ನಿರ್ಮಾಣ ಮಾಡಲಾಗಿದೆ.

ಶಾಂತವಾದ ಶಿವಮೊಗ್ಗ, ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಜಿಲ್ಲಾಧಿಕಾರಿ ಆದೇಶ
ಬಾಕಿ ಉಳಿದ ಏಕಪಥ ಹಾಗೂ ಮಧ್ಯಂತರ ಪಥದ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ಥರವಾಗಿರುವುದು ಗಮನಿಸಿ ಸದರಿ ರಸ್ತೆಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರು ಹಾಗು ಅಧಿಕಾರಿಗಳಿಗೆ ನಿರಂತರ ಸಂಪರ್ಕಿಸಿ ಕೋರಿದ ಫಲವಾಗಿ ಫೆ.14ರಂದು ನಡೆದ ಭೂಸಾರಿಗೆ ಮಂತ್ರಾಲಯದ ಎಸ್‌ಎಫ್‌ಸಿ ಸಭೆæಯಲ್ಲಿ ರಾ.ಹೆ. 766(ಸಿ) ನಲ್ಲಿ್ಲ ಕೊಲ್ಲೂರು ಪಟ್ಟಣ- ನಾಗೋಡಿ-ಜಯನಗರದಿಂದ ಹೊಸನಗರ, ಬಟ್ಟೆಮಲ್ಲಪ್ಪದಿಂದ -ಯಡೇಹಳ್ಳಿ ಮತ್ತು ಕಿಟ್ಟದ ಹಳ್ಳಿಯಿಂದ ಮಾಸೂರು- ರಟ್ಟೆಹಳ್ಳಿ ಮತ್ತು ಹಲಗೇರಿಯರೆಗೆ ಒಟ್ಟು 27.78 ಕಿ.ಮೀ. ದ್ವಿಪಥದ ರಸ್ತೆ ನಿರ್ಮಾಣಕ್ಕೆ 218.93 ಕೋಟಿ ರು. ವೆಚ್ಚದ ಕಾಮಗಾರಿಗೆ ಮಂಜೂರಾತಿ ಕೊಡಲಾಗಿದೆ.

click me!