ಶಾಂತವಾದ ಶಿವಮೊಗ್ಗ, ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಜಿಲ್ಲಾಧಿಕಾರಿ ಆದೇಶ

* ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ
* ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಜಿಲ್ಲಾಧಿಕಾರಿ ಆದೇಶ
* ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಗಲಭೆಯಾಗಿತ್ತು

Shivamogga DC Orders To Start School and Colleges In City rbj

ಶಿವಮೊಗ್ಗ, (ಫೆ.27): ಹಿಜಾವ್ ವಿವಾದದ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ (Harsha Murder Case) ಗಲಭೆಗೆ ಕಾರಣವಾಗಿತ್ತು. ಇದೀಗ ಶಿವಮೊಗ್ಗ (Shivamogga) ಶಾಂತವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನಾಳೆಯಿಂದ (ಫೆ. 28) ಶಾಲಾ- ಕಾಲೇಜು(Schools And Colleges) ಪುನಾರಂಭ ಆಗಲಿದೆ.

ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಗಲಭೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇದೀಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ (Shivamogga DC) ಡಾ.ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

Harsha Murder Case ಹರ್ಷ ಕೊಲೆ ಕೇಸ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಿವಮೊಗ್ಗ ಎಸ್‌ಪಿ

ಈಗಾಗಲೇ ಹರ್ಷ ಕೊಲೆ ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ ಪೊಲೀಸರು 10  ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಹತ್ಯೆಗೆ ಬಳಸಿದ್ದ ಕಾರು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

 ಶವಯಾತ್ರೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ 35 ಕೇಸ್ ದಾಖಲಾಗಿವೆ. ಎ1 ಆರೋಪಿ ಖಾಸಿಫ್ ಮೇಲೆ 5 ಕೇಸ್ ಇದೆ. ಆಸಿಫ್ ಮೇಲೆ ಐದು ಕೇಸ್ ಇದೆ. ಎ 5 ಅಫ್ನಾನ್ ಮೇಲೆ ಎರಡು ಕೇಸ್ ಇದೆ. ಮಹ್ಮದ್ ರಿಹಾನ್ ಮೇಲೆ 3 ಕೇಸ್ ಇದೆ. ಇವರ ಮೇಲೆ ಕಳ್ಳತನ ಸೇರಿದಂತೆ ಇತರೆ ಕೇಸ್‌ಳಿವೆ. 2016-17ರಲ್ಲಿ ಹರ್ಷ ಮೇಲೆ ಕಾನೂನು ಸುವ್ಯವಸ್ಥೆ ಮತ್ತು ಧರ್ಮ ನಿಂದನೆ ಎರಡು ಕೇಸ್ ಮಾತ್ರ ಇತ್ತು ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಬಿಜೆಪಿ ನಾಯಕರುಗಳೇ ತಮ್ಮ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ವಿವಿಧ ಜಿಲ್ಲೆ-ತಾಲೂಕುಗಳಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ಹರ್ಷ ಹತ್ಯೆಗೆ ಆರೋಪಿಗಳಿಗೆ ಕಠಿಣ ಶಿಕ್ಷಣ ನೀಡಬೇಕು. ಹಾಗೇ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನ ನಿಷೇಧ ಮಾಡಬೇಕೆಂದು ಒತ್ತಾಯಿಸುತ್ತಿವೆ.

ಹರ್ಷ ಕುಟುಂಬಕ್ಕೆ ಹರಿದು ಬರುತ್ತಿದೆ ದೇಣಿಗೆ
ಶಿವಮೊಗ್ಗದಲ್ಲಿ(Shivamogga) ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ(Murder) ಬಜರಂಗದಳದ ಕಾರ್ಯಕರ್ತ ಹರ್ಷ(Harsha) ಅವರ ಕುಟುಂಬಕ್ಕೆ ಬುಧವಾರವೂ 21 ಲಕ್ಷ ರು. ನೆರವು ಬಂದಿದೆ. ಭಾರತೀಯ ಜನತಾಪಕ್ಷದ(BJP ವತಿಯಿಂದ 10 ಲಕ್ಷ ರು., ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ಅವರು 10 ಲಕ್ಷ, ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರು ವೈಯಕ್ತಿಕವಾಗಿ 1 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ಹರ್ಷ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರು ಪಕ್ಷದ ವತಿಯಿಂದ 10 ಲಕ್ಷದ ಚೆಕ್‌ ನೀಡಿದರು. ಇದೇ ವೇಳೆ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಮ್ಮ ಫೌಂಡೇಶನ್‌ನಿಂದ 10 ಲಕ್ಷ ರು. ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಹಣಕಾಸು ನೆರವು(Financial Aid) ನೀಡುವ ಅಭಿಯಾನ ಆರಂಭವಾಗಿದ್ದು, ಹರ್ಷದ ತಾಯಿ ಪದ್ಮಾ ಅವರ ಇಂಡಿಯನ್‌ ಓವರ್‌ಸೀಸ್‌ನ ಶಿವಮೊಗ್ಗ ಶಾಖೆಯ ಐಎಫ್‌ಎಸ್‌ಸಿ ಕೋಡ್‌ ಸಹಿತ ಉಳಿತಾಯ ಖಾತೆಯ ಸಂಖ್ಯೆ ನೀಡಿ, ಹರ್ಷನ ಕುಟುಂಬಕ್ಕೆ ನಾವು ನೆರವಾಗೋಣ ಎಂಬ ಅಭಿಯಾನದ ಸಂದೇಶ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ಹರ್ಷ ಅವರ ಕುಟುಂಬಕ್ಕೆ ದೇಣಿಗೆ ಹರಿದು ಬರುತ್ತಿದೆ.

Latest Videos
Follow Us:
Download App:
  • android
  • ios